ಕರ್ನಾಟಕ

karnataka

ETV Bharat / entertainment

'ಟಾಕ್ಸಿಕ್' ನಿರ್ಮಾಪಕರ ಜೊತೆ ಕರಾವಳಿಯಲ್ಲಿ ನಟ ಯಶ್‌ ಟೆಂಪಲ್ ರನ್ - Yash Temple Run - YASH TEMPLE RUN

ಮಣ್ಣಿನ ಹರಕೆ ಖ್ಯಾತಿಯ ಕರಾವಳಿಯ ಪುಣ್ಯಕ್ಷೇತ್ರ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ನಟ ಯಶ್ ದಂಪತಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.

Yash Radhika visits Surya Temple
ಸುರ್ಯ ದೇವಸ್ಥಾನಕ್ಕೆ ಯಶ್​ ರಾಧಿಕಾ ಭೇಟಿ (ETV Bharat)

By ETV Bharat Entertainment Team

Published : Aug 6, 2024, 2:29 PM IST

Updated : Aug 6, 2024, 3:20 PM IST

ನಟ ಯಶ್‌ ಟೆಂಪಲ್ ರನ್ (ETV Bharat)

ಬೆಳ್ತಂಗಡಿ(ದಕ್ಷಿಣ ಕನ್ನಡ): ಕನ್ನಡ ಚಿತ್ರರಂಗದ ರಾಕಿಂಗ್​ ಕಪಲ್​​ ಯಶ್​ ಮತ್ತು ರಾಧಿಕಾ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ಕೊಡುತ್ತಿದ್ದಾರೆ. ಮಣ್ಣಿನ ಹರಕೆ ಖ್ಯಾತಿಯ ಕರಾವಳಿಯ ಪುಣ್ಯಕ್ಷೇತ್ರ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಇಂದು ಅವರು ಭೇಟಿ ನೀಡಿದರು.

ದೇವಸ್ಥಾನಕ್ಕೆ ಯಶ್ ಕುಟುಂಬ​ ಭೇಟಿ (ETV Bharat)

ನಡ ಗ್ರಾಮದ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಯಶ್ ಹಾಗೂ ರಾಧಿಕಾ ಆಗಮಿಸಿದರು. ಈ ವೇಳೆ 'ಟಾಕ್ಸಿಕ್' ಸಿನಿಮಾ ನಿರ್ದೇಶಕ ವೆಂಕಟ್ ಜೊತೆಯಲ್ಲಿದ್ದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸಿನಿಮಾ ಯಶಸ್ಸಿಗೆ ಫಿಲ್ಮ್ ರೀಲ್‌ ಮತ್ತು ಕುಟುಂಬದ ಮಣ್ಣಿನ ಹರಕೆಯಾಗಿ ತೀರಿಸಿದರು.

ದೇವಾಲಯದಲ್ಲಿ ಮಣ್ಣಿನ ಹರಕೆಯೇ ವಿಶೇಷ. ಭಕ್ತರು ಸಂಕಲ್ಪಿಸಿಕೊಂಡ ಬಯಕೆ ಈಡೇರಿದಲ್ಲಿ ಆ ವಿಚಾರವನ್ನು ಪ್ರತಿಬಿಂಬಿಸುವ ಮಣ್ಣಿನ ಪ್ರತಿಕೃತಿಯನ್ನು ಇಲ್ಲಿ ಹರಕೆಯಾಗಿ ಅರ್ಪಿಸಲಾಗುತ್ತದೆ‌. ಹಾಗಾಗಿ, ಯಶ್ ತಮ್ಮ ಮುಂದಿನ ಸಿನಿಮಾ ಯಶಸ್ಸಿಗೆ ಚಿತ್ರದ ರೀಲ್‌ ಮತ್ತು ಕುಟುಂಬದ ಮಣ್ಣಿನ ಹರಕೆ ಅರ್ಪಿಸಿದರು.

ಕೆಲವು ದಿನಗಳಿಂದ ಹೊಸ ಲುಕ್‌ನಲ್ಲಿ ಮಿಂಚುತ್ತಿರುವ ಯಶ್ ಕ್ರೀಂ ಕಲರ್ ಪಂಚೆ ಹಾಗೂ ಶರ್ಟ್ ಧರಿಸಿ ಸಾಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡರು. ನಟನನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಬಳಿಕ ದಂಪತಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿದರು.

ಸುರ್ಯ ದೇವಸ್ಥಾನಕ್ಕೆ ಯಶ್​ ಭೇಟಿ (ETV Bharat)

ಕುಕ್ಕೆ ಸುಬ್ರಹ್ಮಣ್ಯಕ್ಕೂ ಭೇಟಿ:ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯಕ್ಕೂ ಯಶ್​ ದಂಪತಿ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಯಶ್ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಯಶ್ ಜೊತೆ ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಐರಾ ಹಾಗೂ ಯಥರ್ವ್ ಅವರೂ ಇದ್ದರು. ಟಾಕ್ಸಿಕ್ ಚಲನಚಿತ್ರದ ನಿರ್ಮಾಪಕ ವೆಂಕಟ್ ಅವರೂ ಜೊತೆಗಿದ್ದರು.

ಇದನ್ನೂ ಓದಿ:ದೇವರ ವಿಗ್ರಹದ ಬಳಿ‌‌ ದರ್ಶನ್ ಫೋಟೋ‌‌ ಇಟ್ಟು ಪೂಜೆ: ಬಳ್ಳಾರಿ ಅರ್ಚಕ ವಜಾ - Darshan Photo near Temple Idol

ಟಾಕ್ಸಿಕ್ ನಿರ್ಮಾಪಕ ವೆಂಕಟ್ ನಾರಾಯಣ್ ಕೋನಂಕಿ ಅವರ ಆಪ್ತರೊಬ್ಬರ ಪ್ರಕಾರ, ಟಾಕ್ಸಿಕ್ ಚಿತ್ರೀಕರಣ ಪ್ಲ್ಯಾನ್​ ಪ್ರಕಾರ ಆಗುತ್ತಿಲ್ಲ. ಈ‌ ಸಿನಿಮಾವನ್ನು ಮೊದಲು ಶ್ರೀಲಂಕಾ ಹಾಗೂ ಲಂಡನ್​​ನಲ್ಲಿ ಶೂಟಿಂಗ್ ಮಾಡಬೇಕೆಂದುಕೊಳ್ಳಲಾಯಿತು. ನಂತರ ಬೆಂಗಳೂರಿನಲ್ಲಿ ಅದ್ಧೂರಿಯಾಗಿ 70ರ ದಶಕದ ಸೆಟ್​ಗಳನ್ನು ಹಾಕಬೇಕೆಂದು ನಿರ್ಧರಿಸಿ ಕೆಲಸಗಳು ಶುರುವಾಯಿತು. ಆದ್ರೆ ಪ್ರಕರಣ ಕೋರ್ಟ್​​​ವರೆಗೂ ಹೋಯಿತು. ಅದಕ್ಕೆ ಟಾಕ್ಸಿಕ್ ಸಿನಿಮಾ ಎರಡನೇ ಶೆಡ್ಯೂಲ್ ಆರಂಭಕ್ಕೂ ಮುನ್ನ ದೇವಸ್ಥಾನಕ್ಕೆ ಹೋಗಿ ಬನ್ನಿ ಎಂದು ನಿರ್ಮಾಪಕರ ಕುಟುಂಬದ ಗುರುಗಳೊಬ್ಬರು ಹೇಳಿದ್ದಾರಂತೆ. ಅದರಂತೆ ಯಶ್ ಕುಟುಂಬ ಹಾಗೂ ನಿರ್ಮಾಪಕ ವೆಂಕಟ್ ಅವರ ಕುಟುಂಬ ಬೆಳ್ತಂಗಡಿಯ ಸುರ್ಯ ಸದಾಶಿವ ರುದ್ರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ, ನಾಳೆಯಿಂದ ಬೆಂಗಳೂರಿನಲ್ಲಿ ಟಾಕ್ಸಿಕ್ ಶೂಟಿಂಗ್ ಶುರುವಾಗಲಿದೆ.

'ಟಾಕ್ಸಿಕ್', ಡ್ರಗ್ ಮಾಫಿಯಾ ಕಥೆಯನ್ನು ಒಳಗೊಂಡ ಚಿತ್ರ. ಯಶ್ 2 ಶೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈ ಸಿನಿಮಾ ಬಹುಕೋಟಿ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿದೆ ಎಂಬ ವಿಚಾರ ಸಖತ್​​ ಸದ್ದು ಮಾಡುತ್ತಿದೆ. ಸದ್ಯ ಸಿನಿಮಾ ಸ್ಟಾರ್ ಕಾಸ್ಟ್ ವಿಚಾರವಾಗಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.

ದೇವಸ್ಥಾನದಲ್ಲಿ ಊಟ ಮಾಡುತ್ತಿರುವ ಯಶ್ ದಂಪತಿ (ETV Bharat)

ಇದನ್ನೂ ಓದಿ:ಕಿಚ್ಚ ಸುದೀಪ್​​ ವ್ಯಕ್ತಿತ್ವದ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ ರೋಚಕ ಸಂಗತಿ - Indrajit Lankesh on Sudeep

ರಾಕಿಂಗ್ ಸ್ಟಾರ್ ಯಶ್ ಜೋಡಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ. ಸದ್ಯದಲ್ಲೇ ಈ ವಿಚಾರವನ್ನು ನಿರ್ಮಾಣ ಸಂಸ್ಥೆ ತಿಳಿಸಲಿದೆ. ಮಲೆಯಾಳಂ ಡೈರೆಕ್ಟರ್ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ನಿರ್ಮಾಪಕ ವೆಂಕಟ್ ನಾರಾಯಣ್ ಕೋನಂಕಿ ಬರೋಬ್ಬರಿ 300 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹೀಗೆ ನಾನಾ ವಿಶೇಷತೆ ಇರುವ ಟಾಕ್ಸಿಕ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

Last Updated : Aug 6, 2024, 3:20 PM IST

ABOUT THE AUTHOR

...view details