ತಮನ್ನಾ ಭಾಟಿಯಾ - ವಿಜಯ್ ವರ್ಮಾ (Video source: ANI) ತಾರಾ ಜೋಡಿ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ತಮ್ಮ ಪ್ರೇಮ ಸಂಬಂಧವನ್ನು ಅಧಿಕೃತಗೊಳಿಸಿದಾಗಿನಿಂದ, ಹೆಚ್ಚಾಗಿ ಗಮನ ಸೆಳೆಯುತ್ತಿದ್ದಾರೆ. ಮುಂಬೈನಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಅವರನ್ನು ಜೊತೆಯಾಗಿ ನೋಡುವುದೇ ಒಂದು ಸಂಭ್ರಮ. ಅವರ ಫೋಟೋ-ವಿಡಿಯೋಗಳಿಗಾಗಿ ನೆಟ್ಟಿಗರು ಕಾತರರಾಗಿರುತ್ತಾರೆ.
ಅದರಂತೆ ಬುಧವಾರ ರಾತ್ರಿ, ತಮನ್ನಾ ತಮ್ಮ ತಮಿಳು ಕಾಮಿಡಿ ಹಾರರ್ ಸಿನಿಮಾ 'ಅರಣ್ಮನೈ 4'ರ (Aranmanai 4) ಸ್ಪೆಷಲ್ ಸ್ಕ್ರೀನಿಂಗ್ನಲ್ಲಿ ಭಾಗಿಯಾಗಿದ್ದರು. ಗೆಳೆಯ ವಿಜಯ್ ವರ್ಮಾ ನಟಿಗೆ ಸಾಥ್ ನೀಡಿದರು. ಲವ್ಬರ್ಡ್ಸ್ ಮುಂಬೈನ ಚಿತ್ರಮಂದಿರದಿಂದ ಹೊರಬರುತ್ತಿದ್ದಂತೆ ಪಾಪರಾಜಿಗಳು ಅವರನ್ನು ಸುತ್ತುವರೆದರು.
ಥಿಯೇಟರ್‌ನಿಂದ ಕೈ-ಕೈ ಹಿಡಿದು ಹೊರಬಂದರು. ಮುಗುಳ್ನಗುತ್ತಾ ಪಾಪರಾಜಿಗಳ ಕ್ಯಾಮರಾಗೆ ಪೋಸ್ ನೀಡಿದರು. ತಮನ್ನಾ ಸಾಂಪ್ರದಾಯಿಕ ಸೂಟ್‌ಗೆ ಹೊಂದಾಣಿಕೆಯಾಗುವ ದುಪಟ್ಟಾ ಧರಿಸಿದ್ದರು. ಅದಕ್ಕೆ ತಕ್ಕ ಇಂಡಿಯನ್ ಫುಟ್ವೇರ್ ಧರಿಸಿದ್ದರು. ಲೈಟ್ ಮೇಕ್ಅಪ್ನಲ್ಲಿ ಸಖತ್ ಶೈನ್ ಆದರು. ನಗು, ನಟಿಯ ಸೌಂದರ್ಯ ಹೆಚ್ಚಿಸಿತ್ತು. ಮತ್ತೊಂದೆಡೆ, ವಿಜಯ್ ವರ್ಮಾ ಪರ್ಪಲ್ ಬ್ಲ್ಯಾಕ್ ಶರ್ಟ್‌ನಲ್ಲಿ ಡ್ಯಾಶಿಂಗ್ ಲುಕ್ ಕೊಟ್ಟರು. ನೇರಳೆ ಬಣ್ಣಕ್ಕೆ ಹೊಂದಿಕೆಯಾಗುವಂತೆ ಕಪ್ಪು ಪ್ಯಾಂಟ್ ಮತ್ತು ಶೂ ಧರಿಸಿದ್ದರು.
ಲಸ್ಟ್ ಸ್ಟೋರೀಸ್ 2ರ ಸೆಟ್ನಲ್ಲಿ ತಮನ್ನಾ ವಿಜಯ್ ಪರಿಚಯವಾದರು. ಮೊದಲ ಬಾರಿ ತೆರೆ ಹಂಚಿಕೊಂಡಿದ್ದು, ಸೆಟ್ನಲ್ಲೇ ಪ್ರೇಮಾಂಕುರವಾಗಿದೆ ಎಂದು ಹೇಳಲಾಗಿದೆ. ಆದ್ರೆ, ಸಿನಿಮಾ ಬಿಡುಗಡೆಯಾದ ನಂತರವೇ ಇವರಿಬ್ಬರ ಪ್ರೇಮ್ಕಹಾನಿ ಹೊರಬಿತ್ತು. 2023ರ ಹೊಸ ವರ್ಷದ ಸಂದರ್ಭ ಇವರಿಬ್ಬರ ಚುಂಬನದ ವಿಡಿಯೋ ವೈರಲ್ ಆಗಿ, ಸಖತ್ ಸುದ್ದಿಯಾಗಿತ್ತು. ಕೆಲ ದಿನಗಳವರಗೆ ಮೌನ ವಹಿಸಿದ್ದ ಜೋಡಿಯೀಗ ಸಾರ್ವಜನಿಕವಾಗಿ ಪ್ರೇಮಪಕ್ಷಿಗಳಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಪರಸ್ಪರರ ಸಿನಿಮಾಗಳಿಗೆ ಬೆಂಬಲ ಸೂಚಿಸುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಹೆಚ್ಚಿನ ಈವೆಂಟ್ಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ.
ಇದನ್ನೂ ಓದಿ:ಅಂಬಾನಿ ಪುತ್ರನ ಮದುವೆ ಡೇಟ್ ಫಿಕ್ಸ್: ಮುಂಬೈನಲ್ಲಿ ನಡೆಯಲಿದೆ ಅದ್ಧೂರಿ ಸಮಾರಂಭ - Anant Radhika Wedding Date
ಮೆಗಾಸ್ಟಾರ್ ಅಮಿತಾಭ್ ಬಚ್ಚನ್, ತಾಪ್ಸಿ ಪನ್ನು ಮತ್ತು ಕೀರ್ತಿ ಕುಲ್ಹಾರಿ ಅವರೊಂದಿಗೆ 'ಪಿಂಕ್' ಚಿತ್ರದಲ್ಲಿ ಕಾಣಿಸಿಕೊಂಡ ವಿಜಯ್ ವರ್ಮಾ ಅವರ ಪಾತ್ರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆಯಿತು. ನಂತರ ವಿಜಯ್ ಜನಪ್ರಿಯತೆ ಹೆಚ್ಚಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡರು. ಗಲ್ಲಿ ಬಾಯ್, ಮಿರ್ಜಾಪುರ್, ಡಾರ್ಲಿಂಗ್ಸ್, ದಹಾದ್ ಮತ್ತು ಮರ್ಡರ್ ಮುಬಾರಕ್‌ನಂತಹ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಾತ್ಕಾಲಿಕ ಶೀರ್ಷಿಕೆಯ ಸೂರ್ಯ 43 ಮತ್ತು ಉಲ್ ಜಲೂಲ್ ಇಷ್ಕ್ ನಟನ ಮುಂದಿನ ಚಿತ್ರಗಳು. ತಮನ್ನಾ ಕೂಡ ವೇದಾ ಮತ್ತು ಸ್ತ್ರೀ 2ನಲ್ಲಿನ ಅತಿಥಿ ಪಾತ್ರ ಒಳಗೊಂಡಂತೆ ಹಲವು ಬಹುನಿರೀಕ್ಷಿತ ಪ್ರೊಜೆಕ್ಟ್ಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ:ಬದ್ರಿನಾಥ್, ಕೇದಾರನಾಥಕ್ಕೆ ರಜನಿಕಾಂತ್ ಭೇಟಿ; ಋಷಿಕೇಶದಲ್ಲಿ ಗುರುವಿನ ದರ್ಶನ ಪಡೆದ ಸೂಪರ್ಸ್ಟಾರ್ - Rajinikanth