ಸಿನಿಮಾ ಎಂಬ ಬಣ್ಣದ ಲೋಕದ ಪ್ರೇಮಪಕ್ಷಿಗಳಾದ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಜೋಡಿ ಪರಸ್ಪರರ ಕೆಲಸಗಳಿಗೆ ಬೆಂಬಲ ಕೊಡುತ್ತಾ, ಇಬ್ಬರ ಗೆಲುವನ್ನು ಒಟ್ಟಿಗೆ ಆಚರಿಸುತ್ತಲೇ ಇರುತ್ತಾರೆ. ಪರಸ್ಪರ ಪ್ರೀತಿ ವ್ಯಕ್ತಪಡಿಸುವುದು, ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುವುದರ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಕೆಲ ದಿನಗಳ ನಂತರ, ವಿಜಯ್ ಮತ್ತು ತಮನ್ನಾ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಫೋಟೋ-ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.
ಲವ್ಬರ್ಡ್ಸ್ ನಿನ್ನೆ (ಮೇ 7, ಬುಧವಾರ) ರಾತ್ರಿ ಸಿಂಪ್ಲಿ ಸ್ಟೈಲಿಶ್ ಲುಕ್ನಲ್ಲಿ ಮುಂಬೈ ನಗರದಲ್ಲಿ ಕಾಣಿಸಿಕೊಂಡರು. ಭಾರತೀಯ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಒಡೆತನದ ರೆಸ್ಟೋರೆಂಟ್ನಿಂದ ತಮನ್ನಾ ಮತ್ತು ವಿಜಯ್ ಒಟ್ಟಿಗೆ ಹೊರಬರುವ ವೇಳೆ ಕಾಣಿಸಿಕೊಂಡರು. ಪಾಪರಾಜಿಗಳ ಕ್ಯಾಮರಾಗಳಲ್ಲಿ ಈ ಇಬ್ಬರ ನಗು ಸೆರೆಯಾಗಿದೆ. ವಿಡಿಯೋಗಳಲ್ಲಿ, ಕಲಾವಿದರು ಮನಬಿಚ್ಚಿ ನಗುತ್ತಿರುವುದನ್ನು, ನಾಚಿ ನೀರಾಗುತ್ತಿರುವುದನ್ನು ಕಾಣಬಹುದು. ಒಟ್ಟಿಗೆ ಪೋಸ್ ಕೊಡುವ ಮೂಲಕ ಪಾಪರಾಜಿಗಳ ಮನವಿಗೆ ಸ್ಪಂದಿಸಿದರು.
ಕಾರ್ ಹತ್ತುವ ಮೊದಲು, ತಮನ್ನಾ ಭಾಟಿಯಾ ಕ್ಯಾಮರಾಗಳತ್ತ ಕೈ ಬೀಸಿದರು. ಜೊತೆಗೆ ಕೆಲ ಸಿಂಗಲ್ ಶಾಟ್ಗಳಿಗೆ ಪೋಸ್ ನೀಡಿದರು. ಈ ವಿಶೇಷ ಕ್ಷಣಕ್ಕಾಗಿ ನಟಿ ಸರಳ ಸಾಂಪ್ರದಾಯಿಕ ಉಡುಗೆ ಆರಿಸಿಕೊಂಡಿದ್ದರು. ಸಡಿಲ ಕೇಶರಾಶಿ, ಮಿನಿಮಮ್ ಮೇಕ್ಅಪ್ನಲ್ಲಿ ಮನಮೋಹಕವಾಗಿ ಕಾಣಿಸಿಕೊಂಡರು. ಇನ್ನೂ ಗೆಳೆಯ ವಿಜಯ್ ಬಿಳಿ ಶರ್ಟ್, ನೀಲಿ ಜೀನ್ಸ್ ಧರಿಸಿದ್ದರು.
ಪಾಪರಾಜಿಗಳು ತಾರಾ ಜೋಡಿಯ ಫೋಟೋ-ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಂತೆ, ಅವು ಅವರ ಅಪಾರ ಸಂಖ್ಯೆಯ ಅಭಿಮಾನಿಗಳ ಗಮನ ಸೆಳೆಯಿತು. ಇಬ್ಬರ ಕೆಮಿಸ್ಟ್ರಿ, ಸಿಂಪ್ಲಿಸಿಟಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಹಾರ್ಟ್ ಎಮೋಜಿಯೊಂದಿಗೆ ಕಾಮೆಂಟ್ ಸೆಕ್ಷನ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.