ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ಅಭಿನಯದ 'ಛಾವಾ' ಚಿತ್ರ ಎರಡನೇ ವಾರದಲ್ಲೂ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರವು ಪ್ರಮುಖ ಹಿಟ್ ಎಂದು ಸಾಬೀತಾಗಿದ್ದು, ಬಾಲಿವುಡ್ ಬಾಕ್ಸ್ ಆಫಿಸ್ ಹಾದಿಯನ್ನು ಹುರಿದುಂಬಿಸಿದೆ. ಎರಡನೇ ಸೋಮವಾರದ ಅದ್ಭುತ ಪ್ರದರ್ಶನದಿಂದಾಗಿ, 'ಛಾವಾ' ಜಾಗತಿಕವಾಗಿ 450 ಕೋಟಿ ರೂ. ಸಮೀಪಿಸಿದೆ. ಈ ಮೂಲಕ 2025ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಚಿತ್ರ ಮತ್ತು ವರ್ಷದ ಅತಿದೊಡ್ಡ ಭಾರತೀಯ ಹಿಟ್ ಆಗಿದ್ದು, ಬಾಲಿವುಡ್ ಗೆಲುವಿನ ನಗೆ ಬೀರಿದೆ.
11ನೇ ದಿನದ ಛಾವಾ ಬಾಕ್ಸ್ ಆಫೀಸ್ ಕಲೆಕ್ಷನ್: ಎರಡನೇ ಸೋಮವಾರದಂದು, ಛಾವಾ ಭಾರತದಲ್ಲಿ 18.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 345.25 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಎರಡನೇ ವಾರಾಂತ್ಯ ಅಂದರೆ ಶನಿವಾರ ಈ ಚಿತ್ರ 44 ಕೋಟಿ ರೂ. ಮತ್ತು ಭಾನುವಾರ 40 ಕೋಟಿ ರೂ. ಗಳಿಸಿತ್ತು. ಫೆಬ್ರವರಿ 14 ರಂದು 31 ಕೋಟಿ ರೂಪಾಯಿಯೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ ಸಿನಿಮಾ, ತನ್ನ ಮೊದಲ ವಾರದಲ್ಲಿ 219.25 ಕೋಟಿ ರೂ. ಗಳಿಸಿತ್ತು. ಫೆಬ್ರವರಿ 24, ಸೋಮವಾರದಂದು ಈ ಚಿತ್ರವು ಥಿಯೇಟರ್ಗಳಲ್ಲಿ ಶೇ.23.64%ರಷ್ಟು ಆಕ್ಯುಪೆನ್ಸಿ ಹೊಂದಿತ್ತು.
ದಿನ/ವಾರ | ಇಂಡಿಯಾ ನೆಟ್ ಕಲೆಕ್ಷನ್ |
ಮೊದಲ ವಾರ | 219.25 ಕೋಟಿ ರೂಪಾಯಿ. |
ಎಂಡನೇ ದಿನ | 23.5 ಕೋಟಿ ರೂಪಾಯಿ. |
ಒಂಭತ್ತನೇ ದಿನ | 44 ಕೋಟಿ ರೂಪಾಯಿ. |
ಹತ್ತನೇ ದಿನ | 40 ಕೋಟಿ ರೂಪಾಯಿ. |
ಹನ್ನೊಂದನೇ ದಿನ | 18.50 ಕೋಟಿ ರೂಪಾಯಿ (ಆರಂಭಿಕ ಅಂದಾಜು). |
ಒಟ್ಟು | 345.25 ಕೋಟಿ ರೂಪಾಯಿ. |
(ಬಾಕ್ಸ್ ಆಫೀಸ್ ಡಾಟಾ ಮೂಲ: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್).