ಕರ್ನಾಟಕ

karnataka

ETV Bharat / entertainment

ರಿವೀಲ್​ ಆಯ್ತು ಉಪ್ಪಿ ಅಭಿನಯದ 'ಯುಐ' ಬಿಡುಗಡೆ ದಿನಾಂಕ: ಗುಟ್ಟು ಬಿಟ್ಟುಕೊಟ್ರಾ ನಿರ್ಮಾಪಕರು..! - UI Release Date - UI RELEASE DATE

ಟೀಸರ್​ ಹಾಗೂ ಹಾಡಿನಿಂದ ಕುತೂಹಲ ಹೆಚ್ಚಿಸಿರುವ ಉಪೇಂದ್ರ ನಿರ್ದೇಶನ ಹಾಗೂ ನಾಯಕನಾಗಿ ಅಭಿನಯಿಸಿರುವ ಯುಐ ಸಿನಿಮಾದ ಬಿಡುಗಡೆ ಯಾವಾಗ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ನಿರ್ಮಾಪಕ ಕೆ.ಪಿ ಶ್ರೀಕಾಂತ್​ ಉತ್ತರ ನೀಡಿದ್ದಾರೆ.

UI Cinema Poster
ಯುಐ ಸಿನಿಮಾ ಪೋಸ್ಟರ್​ (ETV Bharat)

By ETV Bharat Karnataka Team

Published : Jul 22, 2024, 3:52 PM IST

Updated : Jul 22, 2024, 6:39 PM IST

ಕನ್ನಡ ಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಕೊಂಡಿದ್ದು, ಇದೀಗ ಚಿತ್ರರಂಗದಲ್ಲಿ ಅಷ್ಟೇ ಗುಣಮಟ್ಟದ ಸಿನಿಮಾಗಳನ್ನು ಮಾಡಬೇಕು ಅನ್ನೋದು ಪ್ರತಿಯೊಬ್ಬ ನಟ, ನಿರ್ದೇಶಕ ಹಾಗೂ ನಿರ್ಮಾಪಕನ ಕನಸು. ಅದರಂತೆ ಕನ್ನಡ ಅಲ್ಲದೇ ದಕ್ಷಿಣ ಭಾರತದಲ್ಲಿ ಬುದ್ಧಿವಂತ ನಿರ್ದೇಶಕ ಹಾಗೂ ನಟ ಎಂದು ಕರೆಸಿಕೊಳ್ಳುವ ರಿಯಲ್ ಸ್ಟಾರ್ ಉಪೇಂದ್ರ ಅವರು ಬರೋಬ್ಬರಿ 7 ವರ್ಷಗಳ ಬಳಿಕ ನಿರ್ದೇಶನಕ್ಕೆ ಇಳಿದಿರೋದು ಗೊತ್ತೇ ಇದೆ. ಯುಐ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ಯುಐ ಸಿನಿಮಾ ಪೋಸ್ಟರ್​ (ETV Bharat)

ಉಪ್ಪಿ ಡೈರೆಕ್ಷನ್ ಅಂದ್ಮೇಲೆ ರೆಗ್ಯುಲರ್ ಸಿನಿಮಾ ನೋಡುವುದಕ್ಕೆ ಆಗುತ್ತಾ? ಉಪೇಂದ್ರ ಸಿನಿಮಾವನ್ನು ನೋಡುವ ರೀತಿಯೇ ಬೇರೆ. ಈ ಹಿಂದೆ ಬಂದ ಸಿನಿಮಾಗಳು ಕೂಡ ಇದನ್ನು ಸಾಬೀತು ಮಾಡಿವೆ. ಈಗ ಯುಐ ಕೂಡ ಉಪೇಂದ್ರ ವೃತ್ತಿ ಬದುಕಿನ ವಿಶಿಷ್ಟ ಸಿನಿಮಾ ಆಗುವ ಎಲ್ಲ ಲಕ್ಷಣಗಳು ಇವೆ. ಅದಕ್ಕೆ ಸಾಕ್ಷಿ ಎಂಬಂತೆ ಟೀಸರ್ ಹಾಗೂ ಟ್ರೋಲ್ ಸಾಂಗ್ ರಿವೀಲ್ ಆಗಿವೆ.

ಯುಐ ಸಿನಿಮಾ ತಂಡದ ಜೊತೆಗೆ ಉಪೇಂದ್ರ (ETV Bharat)

ಹೌದು, ಸದಾ ವಿಭಿನ್ನವಾಗಿ ಯೋಚನೆ ಮಾಡುವ ಉಪೇಂದ್ರ ಯುಐ ಚಿತ್ರದ ಮೂಲಕ ಒಂದು ಮೆಸೇಜ್ ಹೇಳೋದಕ್ಕೆ ಹೊರಟ್ಟಿದ್ದಾರೆ. ಸದ್ಯ ಟ್ರೋಲ್ ಹಾಡಿನಿಂದ ಕರ್ನಾಟಕದಲ್ಲಿ ನಡೆದ ಘಟನೆಗಳನ್ನು ಈ ಹಾಡಿನಲ್ಲಿ ಹೇಳುವ ಮೂಲಕ ಅವರ ಅಭಿಮಾನಿ ಬಳಗದಲ್ಲಿ ತಲೆಗೆಹುಳ ಬಿಟ್ಟಿದ್ದರು. ರಿಯಲ್ ಸ್ಟಾರ್ ಈ ಚಿತ್ರಕ್ಕಾಗಿ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಜೊತೆಗೂಡಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.

ಯುಐ ಸಿನಿಮಾ ಪೋಸ್ಟರ್​ (ETV Bharat)

ಸದ್ಯ ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್​, ಚಿತ್ರೀಕರಣ ಹಾಗೂ ಸಿನಿಮಾ ಬಿಡುಗಡೆಯ ಬಗ್ಗೆ ಈಟಿವಿ ಭಾರತಕ್ಕೆ ಎಕ್ಸ್​ಕ್ಲ್ಯೂಸಿವ್​ ಮಾಹಿತಿ ನೀಡಿದ್ದಾರೆ. ನಿರ್ಮಾಪಕರು ಹೇಳುವಂತೆ ಯುಐ ಚಿತ್ರ ಒಂದು ಅದ್ಭುತಲೋಕ ಸೃಷ್ಟಿಸುವ ಚಿತ್ರ. ಈ ಚಿತ್ರದ ಮೂಲಕ ಉಪೇಂದ್ರ ಅವರು ಪ್ರೇಕ್ಷಕರನ್ನು ಎಂಟರ್​ಟೈನ್ ಮಾಡುವುದರ ಜೊತೆಗೆ ಸಮಾಜಕ್ಕೆ ಸಂದೇಶ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ‌. ಈಗಾಗಲೇ ಕನ್ನಡ ಬಿಟ್ಟು, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯ ಡಬ್ಬಿಂಗ್ ಕೆಲಸಗಳು‌ ಮುಗಿದಿವೆ.

"ಇದರ ಜೊತೆಗೆ ಉಪೇಂದ್ರ ಅವರು ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ತಂತ್ರಜ್ಞಾನ ಬಳಸಿದ್ದಾರೆ. ಸುಮಾರು 200 ಕ್ಯಾಮರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿ ತೆಗೆದ ಏಪ್ಯಾದಲ್ಲಿಯೇ ಮೊದಲ ಸಿನಿಮಾ ಇದು ಎನ್ನಲಾಗಿದೆ. ಈ ತಂತ್ರಜ್ಞಾನವನ್ನು ಜೇಮ್ಸ್ ಕೆಮರಾನ್ 'ಅವತಾರ್ 2' ಸಿನಿಮಾಗೆ ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಅನ್ನು ಬಳಸಲಾಗಿದೆ. ಹಿಂದೆಂದೂ ಕನ್ನಡದಲ್ಲಿ ಈ ಟೆಕ್ನಾಲಜಿ ಬಳಸಿಲ್ಲ" ಅಂತಾರೆ.

"ಇದಕ್ಕಾಗಿ 10 ಕೋಟಿ ರೂ. ಖರ್ಚು ಮಾಡಲಾಗಿದೆ. ಅಮೆರಿಕದ ರೇಡಿಯನ್ಸ್ ಎಂಬ ವಿಎಫ್​ಎಕ್ಸ್ ಕಂಪನಿ ನಮ್ಮ ಚಿತ್ರಕ್ಕೆ ಕೆಲಸ ಮಾಡುತ್ತಿದೆ. ಉಪೇಂದ್ರ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಡುಗಳ ಸೌಂಡ್ ಮಿಕ್ಸಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಯುರೋಪ್​ನಲ್ಲಿ ಬೀಡು ಬಿಟ್ಟಿದ್ದಾರೆ. ಉಪೇಂದ್ರ ಅವರು ಯುಐ ಚಿತ್ರವನ್ನು ಬಹಳ ವಿಶೇಷವಾಗಿ ಪ್ರೆಸೆಂಟ್ ಮಾಡಬೇಕು ಎಂಬ ಕಾರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಯುರೋಪ್​ನಲ್ಲಿ ಸೌಂಡ್ ಮಿಕ್ಸಿಂಗ್ ಕೆಲಸ ಮಾಡಿಸುತ್ತಿದ್ದಾರೆ" ಎಂದರು.

ಇನ್ನು ಉಪ್ಪಿ ನಿರ್ದೇಶಿಸಿದ ಸಿನಿಮಾಗಳಲ್ಲೇ ದುಬಾರಿ ಚಿತ್ರ ಇದೆ. ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಗಳಾಗಿವೆ. ಅಲ್ಲದೆ, ತಾಂತ್ರಿಕವಾಗಿಯೂ ಈ ಸಿನಿಮಾ ಅಡ್ವಾನ್ಸ್ ಆಗಿರುತ್ತೆ ಅನ್ನೋದು ಗೊತ್ತಾಗಿದೆ. ಇಷ್ಟೆಲ್ಲ ಹೈಲೆಟ್ಸ್​ ಒಳಗೊಂಡಿರುವ ಯುಐ ಚಿತ್ರದ ಟೀಸರ್ ಹಾಗೂ ಟ್ರೋಲ್ ಹಾಡು ವಿಶ್ವಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಟಗರು, ಸಲಗ ಸಿನಿಮಾದ ಬಳಿಕ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹಾಗೂ ನವೀನ್ ಮನೋಹರ್ ಜೊತೆ ಜಂಟಿಯಾಗಿ ನಿರ್ಮಾಣ ಮಾಡಿರೋ ಬಹುಕೋಟಿ ವೆಚ್ಚದ ಸಿನಿಮಾ ಇದು. ಹಲವಾರು ಸ್ಪೆಷಾಲಿಟಿಗಳಿಗೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಯುಐ ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ರಿಲೀಸ್ ಆಗುವ ಗುಟ್ಟು ಬಿಟ್ಟು ಕೊಟ್ಟಿದ್ದಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್​.

ಇದನ್ನೂ ಓದಿ:ಮದುವೆ ಆಗುವ ಹುಡುಗಿ ಜೊತೆ ಸ್ಪೆಷಲ್ ವಿಡಿಯೋ ಹಂಚಿಕೊಂಡ ರಾಬರ್ಟ್ ನಿರ್ದೇಶಕ - Tarun Sonal Marriage

Last Updated : Jul 22, 2024, 6:39 PM IST

ABOUT THE AUTHOR

...view details