ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 11'ರ ನಾಲ್ಕನೇ ವಾರಾಂತ್ಯದ ಎಲಿಮಿನೇಷನ್ ಬಿಸಿ ಏರಿದೆ. ಕಳೆದ ವಾರದ ನಡುವೆ ನಡೆದ ಮಹತ್ತರ ಘಟನೆಯಲ್ಲಿ ರಂಜಿತ್ ಮತ್ತು ಜಗದೀಶ್ ಅವರನ್ನು ಬಿಗ್ ಬಾಸೇ ಮನೆಯಿಂದ ಹೊರಕಳುಹಿಸಿದ್ದಾರೆ. ವಾರಾಂತ್ಯದಲ್ಲಿ ಮನೆಮಂದಿಯ ತಪ್ಪು ಸರಿಪಡಿಸುವ ಕೆಲಸವನ್ನು ಕಿಚ್ಚ ಸುದೀಪ್ ಮಾಡಿದ್ದರು. ಆದ್ರೆ ಎಲಿಮಿನೇಶನ್ ಪ್ರೊಸೆಸ್ ನಡೆದಿರಲಿಲ್ಲ. ಈ ವಾರ ಕಿಚ್ಚನ ಕಾರ್ಯಕ್ರಮಗಳಿಲ್ಲ. ಬದಲಾಗಿ, ಮೂವರು ಅತಿಥಿಗಳು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇಂದಿನ ಸಂಚಿಕೆಯಲ್ಲಿ ಓರ್ವ ಸ್ಪರ್ಧಿ ಎಲಿಮಿನೇಟ್ ಆಗಿ ಹೊರನಡೆಯಲಿದ್ದಾರೆ.
''ಯಾರ ದೊಡ್ಮನೆ ಪ್ರಯಾಣಕ್ಕೆ ಬ್ರೇಕ್ ಬೀಳಲಿದೆ?'' ಬಿಗ್ ಬಾಸ್ ಕನ್ನಡ ಸೀಸನ್ 11. ಇಂದು ರಾತ್ರಿ 9ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಪ್ರೋಮೋ ಅನಾವರಣಗೊಳಿಸಿದೆ. ಮಾತಿನ ಮಲ್ಲ ಸೃಜನ್ ಲೋಕೇಶ್ ಮನೆ ಪ್ರವೇಶಿಸಿದ್ದು, ಈ ಎಲಿಮಿನೇಷನ್ ನಡೆಸಿಕೊಡಲಿದ್ದಾರೆ. ಯಾರು ಮನೆಯಿಂದ ಹೊರ ನಡೆಯಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.
ಬಿಗ್ ಬಾಸ್ ಮನೆಯಲ್ಲಿ ಮಾತಿನ ಮಲ್ಲ, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಎಂಬ ದನಿಯೊಂದಿಗೆ ಪ್ರೋಮೋ ಆರಂಭಗೊಂಡಿದೆ. ಎಲಿಮಿನೇಶಷನ್ ಪ್ರೊಸೆಸ್ ಅನ್ನು ಅವರೇ ನಡೆಸಿಕೊಡುವಂತೆ ತೋರಿದೆ. ಕೈ ಹಿಂದೆ ಕಟ್ಟಿ, ಉಪಹಾರ ಸೇವಿಸಬೇಕೆಂದು ಸ್ಪರ್ಧಿಗಳಿಗೆ ಸೂಚಿಸಲಾಗಿದೆ. ಯಾರ್ಯಾರಿಗೆ ಮನೆಯಲ್ಲಿ ಉಳಿಯುತ್ತೀರಾ ಎಂಬ ಕಾನ್ಫಿಡೆನ್ಸ್ ಇದೆ? ಎಂದು ಸೃಜನ್ ಲೋಕೇಶ್ ಪ್ರಶ್ನಿಸಿದ್ದಾರೆ. ಸೇಫ್ ಆಗಬೇಕೆಂಬ ಆಸೆ ಎಷ್ಟಿದೆಯೋ ಅಷ್ಟೇ ನಂಬಿಕೆಯೂ ಇದೆ ಎಂದು ಗೌತಮಿ ಉತ್ತರಿಸಿದ್ದಾರೆ. ಇವರು ಮಾತನಾಡೋದು ನೋಡಿದ್ರೆ ಏನು ಮಾಡಿಲ್ಲವೇನೋ ಅನಿಸುತ್ತಿದೆ ಎಂದು ಮಾನಸಾ ಅವರು ಕಣ್ಣೀರಿಟ್ಟಿದ್ದಾರೆ. ಮೋಕ್ಷಿತಾ ಮಾತನಾಡಿ, ಯಾರನ್ನೆಲ್ಲ ನಾಮಿನೇಟ್ ಮಾಡಬೇಕೆಂಬುದರ ಬಗ್ಗೆ ತ್ರಿವಿಕ್ರಮ್ ಅವರ ಪ್ಲ್ಯಾನಿಂಗ್ ಇದೆ. ಅವರ ಜೊತೆ ಇನ್ನೂ ಮೂರ್ನಾಲ್ಕು ಜನ ಕೈ ಜೋಡಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅದಕ್ಕೆ ಜಾಗ ಇರಕೂಡದು ಎಂದು ಉತ್ತರಿಸಿದ್ದಾರೆ.