ETV Bharat / bharat

ಸಂಭಾಲ್​ನಲ್ಲಿ 'ಮೃತ್ಯು ಕೂಪ್' ಪತ್ತೆ: ಇದು ಬ್ರಹ್ಮದೇವ ಸೃಷ್ಟಿಸಿದ ಬಾವಿ ಎಂದ ಸ್ಥಳೀಯರು - MRITYU KOOP FOUND IN SAMBHAL

ಸಂಭಾಲ್​ನಲ್ಲಿ ಮೃತ್ಯುಕೂಪ್ ಎಂದು ಕರೆಯಲಾಗುವ ಪುರಾತನ ಬಾವಿ ಪತ್ತೆಯಾಗಿದೆ.

ಸಂಭಾಲ್​ನಲ್ಲಿ 'ಮೃತ್ಯು ಕೂಪ್' ಪತ್ತೆ
ಸಂಭಾಲ್​ನಲ್ಲಿ 'ಮೃತ್ಯು ಕೂಪ್' ಪತ್ತೆ (IANS)
author img

By IANS

Published : Dec 26, 2024, 12:39 PM IST

ಸಂಭಾಲ್: ಮಸೀದಿಯಿಂದ ಸುಮಾರು 200 ಮೀಟರ್ ದೂರದಲ್ಲಿ ಮತ್ತೊಂದು ಪುರಾತನ ಬಾವಿಯನ್ನು ಉತ್ತರ ಪ್ರದೇಶದ ಸಂಭಾಲ್ ಅಧಿಕಾರಿಗಳು ಗುರುವಾರ ಪತ್ತೆ ಹಚ್ಚಿದ್ದಾರೆ. ಇದು ಈ ಪ್ರದೇಶದ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಹತ್ತಿರದ ಚಂದೌಸಿ ಪ್ರದೇಶದಲ್ಲಿ ಉತ್ಖನನದ ಸಮಯದಲ್ಲಿ ಮೆಟ್ಟಿಲು ಬಾವಿ ಮತ್ತು ಸುರಂಗ ಪತ್ತೆಯಾದ ಕೆಲವೇ ದಿನಗಳ ನಂತರ ಈಗ ಮತ್ತೊಂದು ಬಾವಿ ಪತ್ತೆಯಾಗಿದೆ. ಇದು ಪ್ರದೇಶದ ಪರಂಪರೆಯ ಬಗ್ಗೆ ಹೊಸ ಆಸಕ್ತಿಯನ್ನು ಹುಟ್ಟುಹಾಕಿದೆ.

ಸಂಭಾಲ್ ಸದರ್​ನ ಸಾರಥಾಲ್ ಹೊರಠಾಣೆಯ ಬಳಿ ಹೊಸದಾಗಿ ಪತ್ತೆಯಾದ ಬಾವಿಯು ಹಿಂದೂ ನಿವಾಸಿಗಳು ಇರುವ ಪ್ರದೇಶದಲ್ಲಿದೆ. ಹೆಚ್ಚಿನ ಉತ್ಖನನಕ್ಕೆ ಅನುಕೂಲವಾಗುವಂತೆ ಪುರಸಭೆಯ ತಂಡವು ಸ್ಥಳದಿಂದ ಮಣ್ಣನ್ನು ತೆರವುಗೊಳಿಸುತ್ತಿದೆ. ಸ್ಥಳೀಯರು ಈ ಬಾವಿಯನ್ನು "ಮೃತ್ಯು ಕೂಪ್" ಎಂದು ಗುರುತಿಸಿದ್ದಾರೆ. ಇದು ಪ್ರಾಚೀನ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿದೆ ಮತ್ತು ಬ್ರಹ್ಮ ದೇವರು ರಚಿಸಿದ 19 ಬಾವಿಗಳಲ್ಲಿ ಇದೂ ಒಂದಾಗಿದೆ ಎಂದು ಅವರು ಹೇಳಿದ್ದಾರೆ.

20 ವರ್ಷಗಳ ಹಿಂದೆ ಈ ಬಾವಿಯಲ್ಲಿತ್ತು ನೀರು: ಸುಮಾರು 20 ವರ್ಷಗಳ ಹಿಂದೆ ಈ ಬಾವಿಯಲ್ಲಿ ನೀರು ಇರುತ್ತಿತ್ತು. ಜನ ಪ್ರಾರ್ಥನೆಗಾಗಿ ಹತ್ತಿರದ ಮೃತ್ಯುಂಜಯ ಮಹಾದೇವ್ ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಇಲ್ಲಿ ಸ್ನಾನ ಮಾಡುತ್ತಿದ್ದರು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು. ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸುವ ಸ್ಥಳೀಯ ಆಡಳಿತದ ಪ್ರಯತ್ನಗಳನ್ನು ಶ್ಲಾಘಿಸಿದ ಮತ್ತೊಬ್ಬ ನಿವಾಸಿ, ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ಪ್ರಯತ್ನಗಳು ಈ ಸ್ಥಳದ ಪುನರುಜ್ಜೀವನಕ್ಕೆ ಕಾರಣ ಎಂದು ಹೇಳಿದರು.

ಜನರು ಈ ಬಾವಿಯಿಂದ ನೀರು ಸೇದಿ ತೆಗೆದುಕೊಂಡು ಹೋಗುತ್ತಿದ್ದರು’: ಈ ಹಿಂದೆ ನಾವು ಇಲ್ಲಿಗೆ ಬರುತ್ತಿದ್ದೆವು. ಜನ ಈ ಬಾವಿಯಿಂದ ನೀರು ಸೇದಿ ತೆಗೆದುಕೊಂಡು ಹೋಗುತ್ತಿದ್ದರು. ಇದನ್ನು ನಾವು ಕಣ್ಣಾರೆ ನೋಡಿದ್ದೇವೆ. ಆದರೆ ಕೆಲ ಸಂದರ್ಭಗಳು ಮತ್ತು ಉದಾಸೀನತೆಯಿಂದಾಗಿ ಜನ ಅದನ್ನು ಬಳಸುವುದನ್ನು ನಿಲ್ಲಿಸಿದರು. ಆದರೆ ಈಗ, ನಮ್ಮ ಪರಂಪರೆಯ ಪುನರುಜ್ಜೀವನಕ್ಕಾಗಿ ಕೆಲಸ ಮಾಡುತ್ತಿರುವ ಸ್ಥಳೀಯ ಆಡಳಿತ ಮತ್ತು ಯೋಗಿ ಸರ್ಕಾರದ ಪ್ರಯತ್ನಗಳಿಗೆ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ" ಎಂದು ಅವರು ಹೇಳಿದರು.

ಪುರಾಣಗಳಲ್ಲಿ ಉಲ್ಲೇಖವಾಗಿದೆ ಈ ಬಾವಿ: ಈ ಬಾವಿಯನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ನಿವಾಸಿಗಳು ಹೇಳಿದ್ದಾರೆ. ಇದು ಹತ್ತಿರದ ಹರಿಹರ ದೇವಾಲಯದ ಆಚರಣೆಗಳ ಪ್ರಮುಖ ಭಾಗವಾಗಿತ್ತು ಎಂದು ಅನೇಕರು ನೆನಪಿಸಿಕೊಳ್ಳುತ್ತಾರೆ. ಈ ಮುನ್ನ ಈ ಪ್ರದೇಶದ ಹತ್ತಿರದಲ್ಲಿಯೇ ಪ್ರಾಚೀನ ಬಾಂಕೆ ಬಿಹಾರಿ ದೇವಾಲಯದ ಅವಶೇಷಗಳು ಪತ್ತೆಯಾಗಿದ್ದವು. ಇದು ಪ್ರದೇಶದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ಇತಿಹಾಸಕಾರರು ಮತ್ತು ಸ್ಥಳೀಯ ಹಿರಿಯರು ಹೇಳಿದ್ದಾರೆ.

ಇದನ್ನೂ ಓದಿ : ಶಬರಿಮಲೆ ಭಕ್ತರಿಗೆ 'ಸ್ವಾಮಿ' ಎಐ ಚಾಟ್‌ಬಾಟ್ ನೆರವು: ಇನ್ನಿಲ್ಲ ಯಾವುದೇ ಸಮಸ್ಯೆ!; ಇಂದು ಮಂಡಲ ಪೂಜೆ - SABARIMALA TEMPLE CHATBOT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.