ಫ್ಯಾನ್ಸ್ ಜೊತೆ ಸುದೀಪ್ ಬರ್ತ್ಡೇ ಸೆಲೆಬ್ರೇಶನ್ (ETV Bharat) ಬೆಂಗಳೂರು: ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಭಿನಯ ಚಕ್ರವರ್ತಿ, ಪೈಲ್ವಾನ್, ಹೆಬ್ಬುಲಿ ಹೀಗೆ ಹಲವಾರು ಬಿರುದುಗಳಿಂದ ಕರೆಯಿಸಿಕೊಳ್ಳುವ ನಟ ಸುದೀಪ್ ಅವರಿಂದು 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮೊದಲೇ ಅವರು ತಿಳಿಸಿದಂತೆ ಜಯನಗರ ಎಂಇಎಸ್ ಗ್ರೌಂಡ್ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದರು.
'ಸ್ಯಾಂಡಲ್ವುಡ್ ಬಾದ್ಷಾ' ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ನಡೆಸಿ ನನ್ನ ಹುಟ್ಟುಹಬ್ಬದಂದು ನಿವಾಸದ ಬಳಿ ಯಾರೂ ಬರಬೇಡಿ. ನಾನೇ ಜಯನಗರದ ಎಂಇಎಸ್ ಗ್ರೌಂಡ್ನಲ್ಲಿ ಬೆಳಗ್ಗೆ 10ರಿಂದ 12 ಗಂಟೆವರೆಗೂ ನಿಮಗೆ ಸಿಗಲಿದ್ದೇನೆ ಎಂದು ಅಭಿಮಾನಿಗಳಿಗೆ ಮಾತು ಕೊಟ್ಟಿದ್ದರು. ಆದಾಗ್ಯೂ ಕಳೆದ ರಾತ್ರಿ ಅವರ ಜೆ.ಪಿ.ನಗರದ ಪುಟ್ಟೇನಹಳ್ಳಿಯ ಮನೆ ಬಳಿ ಒಂದಿಷ್ಟು ಅಭಿಮಾನಿಗಳು ಬಂದು ಸೇರಿದ್ದರು. ಈ ಹಿನ್ನೆಲೆಯಲ್ಲಿ ನಟ ಅವರನ್ನು ಭೇಟಿ ಮಾಡಿ ಧನ್ಯವಾದಗಳನ್ನು ಅರ್ಪಿಸಿದ್ದರು.
ಇದೀಗ ಜಯನಗರದ ಎಂಇಎಸ್ ಗ್ರೌಂಡ್ನಲ್ಲಿ'ಕಿಚ್ಚೋತ್ಸವ' ನಡೆದಿದ್ದು, ಸುದೀಪಿಯನ್ಸ್ ಹಬ್ಬದಂತೆ ತಮ್ಮ ಮೆಚ್ಚಿನ ನಟನ ಜನ್ಮದಿನ ಆಚರಿಸಿದ್ದಾರೆ. 50,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ನಿರೀಕ್ಷೆ ಇತ್ತು. ಅದರಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಬಂದು ಸೇರಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ನಟ ತಮ್ಮ ಅಭಿಮಾನಿಗಳಿಗೆ ಸಮಯ ಮೀಸಲಿಟ್ಟಿದ್ದಾರೆ. ಈ ಆಚರಣೆಗೆ ಸುದೀಪ್ ತಂಡ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದಿದ್ದಾರೆ.
ಅಭಿಮಾನದ ಹೆಸರಿನಲ್ಲಿ ಪುಂಡಾಟ ಆಡೋರಿಗೆ ಕಿಚ್ಚ ಎಚ್ಚರಿಕೆ ನೀಡಿದ್ದಾರೆ. ಯಾರಿಗೂ ತೊಂದರೆ ಕೊಡದಂತೆ ತಾಕೀತು ಮಾಡಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಡದೇ ಸಮಾಜಮುಖಿ ಕೆಲಸಕ್ಕೆ ಮುಂದಾಗಿ ಎಂದು ಮನವಿ ಮಾಡಿದ್ದಾರೆ.
ಅಭಿಮಾನಿಗಳಿಗೆ ಕಿಚ್ಚನ ಪ್ರೀತಿಯ ಮಾತು (ETV Bharat) ಈವೆಂಟ್ನಲ್ಲಿ ಮಾತನಾಡಿದ ವಿಕ್ರಾಂತ್ ರೋಣ ನಟ, ''ಅಭಿಮಾನಿಗಳೇ ನನ್ನ ಪ್ರತಿಬಿಂಬ. ನನ್ನ ಯಶಸ್ಸು ಇಡೀ ಚಿತ್ರರಂಗಕ್ಕೆ ಸಲ್ಲುತ್ತದೆ. ಅಕ್ಕಪಕ್ಕದ ಸ್ನೇಹಿತರು, ಮಾಧ್ಯಮ ಮಿತ್ರರ, ಅಭಿಮಾನಿಗಳು ನನ್ನ ಜೊತೆಗಿದ್ದಾರೆ. ಈ ಬಾರಿ ಮನೆಯಲ್ಲಿ ಬರ್ತ್ಡೇ ಸೆಲೆಬ್ರೇಶನ್ ಸಾಧ್ಯವಾಗಲಿಲ್ಲ. ನಿಮ್ಮನ್ನು ಭೇಟಿಯಾಗಿ ಖುಷಿಯಾಗಿದೆ. ಇನ್ನೂ, ಮ್ಯಾಕ್ಸ್ ತಡವಾಗಿದೆ ನಿಜ. ಆದ್ರೆ ಇನ್ಮುಂದೆ ವೇಗ ಇರಲಿದೆ'' ಎಂದು ತಿಳಿಸಿದರು.
ಇದನ್ನೂ ಓದಿ:ಅಭಿನಯ ಚಕ್ರವರ್ತಿ ಬರ್ತ್ಡೇಗೆ 'ಮ್ಯಾಕ್ಸ್' ಸ್ಪೆಷಲ್ ಗಿಫ್ಟ್: ಸಖತ್ತಾಗಿದೆ 'ಮ್ಯಾಕ್ಸಿಮಮ್ ಮಾಸ್' ಸಾಂಗ್ - Maximum Mass song
''ನಿಮ್ಮಷ್ಟೇ ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಾನು ಮೇಕಪ್ ಹಾಕೋದೇ ಫ್ಯಾನ್ಸ್ಗಾಗಿ. ಈ ಬರ್ತ್ಡೇ ಕೂಗು ಇಡೀ ವರ್ಷ ನನ್ನನ್ನು ಕಾಪಾಡುತ್ತದೆ. ನಾನು ತಗ್ಗಿ ಬಗ್ಗಿ ನಡೆಯೋ ಹಾಗೆ ಮಾಡಿರುವ ಕೀರ್ತಿ ಅಭಿಮಾನಿಗಳಿಗೆ ಸಲ್ಲುತ್ತದೆ'' ಎಂದು ತಿಳಿಸಿದರು.
ಇದನ್ನೂ ಓದಿ:51ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್: ರಾತ್ರಿಯೇ ಅಭಿಮಾನಿಗಳಿಗೆ ದರ್ಶನ - Sudeep Birthday
ನಿರೀಕ್ಷೆಯಂತೆ ಮುಂದಿನ ಬಹುನಿರೀಕ್ಷಿತ ಚಿತ್ರ 'ಮ್ಯಾಕ್ಸ್'ನಿಂದ 'ಮ್ಯಾಕ್ಸಿಮಮ್ ಮಾಸ್' ಸಾಂಗ್ ಅನಾವರಣಗೊಂಡಿದೆ. ಹಾಡಿಗೆ ಖ್ಯಾತ ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ರಚಿಸಿದ್ದು, ಚೇತನ್ ಗಂಧರ್ವ ಮತ್ತು ಎಂ.ಸಿ.ಬಿಜ್ಜು ಕಂಠದಾನ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಮಾಸ್ ಸಾಂಗ್ ಸಖತ್ ಸದ್ದು ಮಾಡುತ್ತಿದ್ದು, ಸಿನಿಪ್ರಿಯರು ಸಿನಿಮಾ ವೀಕ್ಷಿಸೋ ಕುತೂಹಲ ವ್ಯಕ್ತಪಡಿಸಿದ್ದಾರೆ. ಮ್ಯಾಕ್ಸ್ ಅಲ್ಲದೇ 'ಬಿಲ್ಲ ರಂಗ ಭಾಷ' ಸಿನಿಮಾ ಬಗ್ಗೆಯೂ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಜೊತೆಗೆ, ಇನ್ಮುಂದೆ ವರ್ಷಕ್ಕೆ 2 ಸಿನಿಮಾ ಮಾಡೋ ಭರವಸೆಯನ್ನು ಸುದೀಪ್ ಕೊಟ್ಟಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.