1979ರಲ್ಲಿ ಕನ್ನಡದ ಎವರ್ ಗ್ರೀನ್ ಹೀರೋ ಅನಂತ್ ನಾಗ್ ಅಭಿನಯಯದಲ್ಲಿ ಮೂಡಿಬಂದ ಚಿತ್ರ 'ನಾ ನಿನ್ನ ಬಿಡಲಾರೆ'. ಅನಂತ್ ನಾಗ್ ಮತ್ತು ಲಕ್ಷ್ಮೀ ಕಾಂಬಿನೇಷನ್ನಲ್ಲಿ ಮೂಡಿ ಬಂದಿದ್ದ ಈ ಚಿತ್ರ ಸಿನಿರಸಿಕರ ಪಾಲಿಗೆ 'ಎವರ್ ಗ್ರೀನ್', ಎವರ್ ಫೇವರಿಟ್. ಕನ್ನಡ ಚಿತ್ರರಂಗದ ಇತಿಹಾಸ ಪುಟಗಳಲ್ಲಿ ದಾಖಲಾಗಿರೋ ಸೂಪರ್ ಹಿಟ್ ಸಿನಿಮಾದ ಟೈಟಲ್ ಈಗ ಮರುಬಳಕೆಯಾಗಿದೆ. ಅದೇ ಶೀರ್ಷಿಕೆಯಲ್ಲಿ, ವಿಭಿನ್ನ ಕಥಾವಸ್ತುವಿನೊಂದಿಗೆ ಪ್ರೇಕ್ಷಕರ ಮುಂದೆ ಬರಲು ಹೊಸ ಚಿತ್ರತಂಡವೊಂದು ಸಜ್ಜಾಗಿದೆ. ಯುವ ನಟಿ ಅಂಬಾಲಿ ಭಾರತಿ ನಟನೆಯ 'ನಾ ನಿನ್ನ ಬಿಡಲಾರೆ' ಚಿತ್ರದ ಟೀಸರ್, ಟ್ರೇಲರ್ ನೋಡಿ ನಟ ಶರಣ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸಸ್ಪೆನ್ಸ್ ಥ್ರಿಲ್ಲರ್ ಕಂಟೆಂಟ್ ಹೊಂದಿರುವ ಈ ಚಿತ್ರ ಟೀಸರ್ ಹಾಗೂ ಮೇಕಿಂಗ್ನಿಂದ ನಿರೀಕ್ಷೆ ಮೂಡಿಸಿದೆ. ಅಂಬಾಲಿ ಭಾರತಿ ಅಭಿನಯಿಸಿ, ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ನವೀನ್ ಜಿ.ಎಸ್ ನಿರ್ದೇಶಿಸಿದ್ದಾರೆ. ಅಂಬಾಲಿ ಭಾರತಿಗೆ ಜೊತೆಯಾಗಿ ಪಂಚಿ, ಸೀರುಂಡೆ ರಘು, ಕೆ.ಸ್.ಶ್ರೀಧರ್, ಮಹಂತೇಶ್, ಶ್ರೀನಿವಾಸ್ ಪ್ರಭು, ಹರಿಣಿ, ಲಕ್ಷ್ಮೀ ಸಿದ್ದಯ್ಯ, ಮಂಜುಳಾರೆಡ್ಡಿ ಮುಖ್ಯಭೂಮಿಕೆಯಲ್ಲಿದ್ದಾರೆ. ಒಂದೊಳ್ಳೆ ಕಂಟೆಂಟ್ ಇರುವ ನಾ ನಿನ್ನ ಬಿಡಲಾರೆ ಚಿತ್ರದ ಮೇಕಿಂಗ್ ಹಾಗೂ ಕಥೆಗೆ ನಿರ್ದೇಶಕರುಗಳಾದ 'ಕಾಟೇರ' ತರುಣ್ ಸುಧೀರ್, 'ಜೇಮ್ಸ್ ಚೇತನ್' ಕುಮಾರ್, ಸಿಂಪಲ್ ಸುನಿ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ: 18 ವರ್ಷಗಳ ಬಳಿಕ ಒಂದಾದ ಮುಂಗಾರುಮಳೆ ನಿರ್ದೇಶಕ ನಿರ್ಮಾಪಕ: ಯೋಗರಾಜ್ ಭಟ್ರ ಮುಂದಿನ ಸಿನಿಮಾ ಯಾವುದು?
ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಸಿನಿಮಾ ನಿರ್ಮಾಣಗೊಂಡಿದೆ. ವೀರೇಶ್ ಎಸ್.ಛಾಯಾಗ್ರಹಣ, ಎಮ್.ಎಸ್.ತ್ಯಾಗರಾಜು ಸಂಗೀತ ಇರುವ ಈ ಸಿನಿಮಾಗೆ ದೀಪಕ್ ಜಿ.ಎಸ್ ಅವರ ಸಂಕಲನವಿದೆ. ಎಲ್ಲ ಆ್ಯಂಗಲ್ ನಿಂದಲೂ ಪ್ರಾಮಿಸಿಂಗ್ ಆಗಿ ಕಂಡಿರೋ ನಾ ನಿನ್ನ ಬಿಡಲಾರೆ ಚಿತ್ರವನ್ನು ಲೈಲಾಕ್ ಎಂಟರ್ಟೈನ್ಮೆಂಟ್ನ ಹೇಮಂತ್ ರಾಜ್ಯಾದ್ಯಂತ ವಿತರಿಸಲಿದ್ದಾರೆ. ಇದೇ ನವೆಂಬರ್ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗ್ತಿದೆ. ಹೊಸ ನಿರ್ದೇಶಕ, ಹೊಸ ನಿರ್ಮಾಪಕಿ, ಹೊಸ ನಾಯಕಿ ಹೀಗೆ ಬಹುತೇಕ ಹೊಸಬರೇ ಕೂಡಿ ಅನುಭವಿ ತಂತ್ರಜ್ಞರ ಜೊತೆಗೆ ಮಾಡಿರೋ ಚಿತ್ರವಿದು.
ಇದನ್ನೂ ಓದಿ: ಮತ್ತೆ ಪ್ರೇಕ್ಷಕರ ತಲೆಗೆ ಕೆಲಸ ಕೊಟ್ಟ ರಿಯಲ್ ಸ್ಟಾರ್ ಉಪ್ಪಿ: ಡಿ.2ಕ್ಕೆ 'UI' ಚಿತ್ರದಿಂದ '𝐖𝐀𝐑𝐍𝐄𝐑'
ಈ ಕಾಲಕ್ಕೆ ತಕ್ಕಂತೆ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಂಟೆಂಟ್ಗಳನ್ನು ಈ ಚಿತ್ರ ಒಳಗೊಂಡಿದೆ. ಹೊಸ ತಂಡ ಹೊಸ, ವಿಭಿನ್ನ ಆಯಾಮದಲ್ಲಿ ಮನರಂಜನೆಯ ರಸದೌತಣ ಉಣಬಡಿಸಲು ಸಜ್ಜಾಗಿದೆ. ಈಗಾಗಲೇ ಅನಾವರಣಗೊಂಡಿರುವ ಟೀಸರ್, ಟ್ರೇಲರ್ಗಳು ಸಾಕಷ್ಟು ಕುತೂಹಲ ಮೂಡಿಸಿದ್ದು, ನಾ ನಿನ್ನ ಬಿಡಲಾರೆ ಸಿನಿಮಾ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದನ್ನು ಕಾದು ನೋಡಬೇಕಿದೆ.