ಮೈಸೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಂಡತಿ ಪಾರ್ವತಿ ಅವರು 14 ಬದಲಿ ನಿವೇಶನ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಮುಂದುವರೆದಿದೆ. ಇಂದು ಮುಡಾ ಮಾಜಿ ಆಯುಕ್ತರಾದ ಕಾಂತರಾಜು ಅವರು ಲೋಕಾಯುಕ್ತ ಎಸ್. ಪಿ ಉದೇಶ್ ಅವರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಮುಡಾದಲ್ಲಿ ನಡೆದ ವ್ಯವಹಾರದ ಬಗ್ಗೆ ವಿಚಾರಣೆ ಕರೆದಿದ್ದರು. 2017ರಲ್ಲಿ ನಾನು ಮುಡಾ ಆಯುಕ್ತನಾಗಿದ್ದೆ. ಆಗ ಪಾರ್ವತಿಯವರು ಪಡೆದಿದ್ದ ಭೂಮಿಯ ಪರಿಹಾರದ ಬಗ್ಗೆ ಇಂದು ವಿಚಾರಣೆ ನಡೆಯಿತು ಎಂದಿದ್ದಾರೆ.
ನಾವು ಅಂದು 2017ರಲ್ಲಿ ಪ್ರಾಧಿಕಾರದ ಸಭೆಯಲ್ಲಿ ಅಭಿವೃದ್ಧಿಪಡಿಸದ ಭೂಮಿಯನ್ನು ಕೊಡಲು ತೀರ್ಮಾನ ಮಾಡಿದ್ದೆವು. ಕೆಲವು ವಿಚಾರಗಳ ಬಗ್ಗೆ ಮಾಹಿತಿ ಕೇಳಿದರು. ವಿಚಾರಣೆ ನನ್ನ ಅವಧಿಯಲ್ಲಿ ನಡೆದ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ತನಿಖೆ ಪ್ರಗತಿಯಲ್ಲಿರುವುದರಿಂದ ಯಾವುದನ್ನೂ ಹೆಚ್ಚಾಗಿ ಹೇಳಲಾರೆ. ಅಧಿಕಾರಿಯಾಗಿ ನನಗೂ ಕೆಲವು ಇತಿಮಿತಿಗಳು ಇವೆ ಎಂದಿದ್ದಾರೆ.
ಇದನ್ನೂ ಓದಿ : ಮುಡಾ ಹಗರಣ: ಎಲ್ಲ ದಾಖಲೆಗಳನ್ನ ನ್ಯಾಯಾಲಯಕ್ಕೆ ನೀಡುತ್ತೇನೆ - ಸ್ನೇಹಮಯಿ ಕೃಷ್ಣ