ಕರ್ನಾಟಕ

karnataka

ETV Bharat / entertainment

ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಮಂದಣ್ಣ ಡ್ಯಾನ್ಸ್​​: 200 ಡ್ಯಾನ್ಸರ್ಸ್ ಸಾಥ್ - Salman Rashmika Dance - SALMAN RASHMIKA DANCE

ಬಾಲಿವುಡ್​​ ಸೂಪರ್​​ ಸ್ಟಾರ್​ ಸಲ್ಮಾನ್ ಖಾನ್ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿರುವ ಮುಂದಿನ ಬಹುನಿರೀಕ್ಷಿತ ಚಿತ್ರ ''ಸಿಕಂದರ್''. ಇತ್ತಿಚೆಗೆ ಈ ಚಿತ್ರದ ಹಾಡೊಂದರ ಶೂಟಿಂಗ್​ ನಡೆದಿದೆ. ಸಿನಿಮಾದ ಪ್ರಮುಖ ತಾರೆಯರು 200 ಸಹ ನೃತ್ಯಗಾರರೊಂದಿಗೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

Salman Rashmika
ಸಲ್ಮಾನ್ ಖಾನ್ - ರಶ್ಮಿಕಾ ಮಂದಣ್ಣ (Photo: ANI)

By ETV Bharat Karnataka Team

Published : Sep 14, 2024, 6:20 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್​​ ಸೂಪರ್​​ ಸ್ಟಾರ್​ ಸಲ್ಮಾನ್ ಖಾನ್ ಹಾಗೂ ಬಹುಭಾಷಾ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ''ಸಿಕಂದರ್''. ಈ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಲೇಟೆಸ್ಟ್​​​ ರಿಪೋರ್ಟ್ ಪ್ರಕಾರ, ಇತ್ತೀಚೆಗೆ ಚಿತ್ರದ ಪ್ರಮುಖ ತಾರೆಯರು 200 ಸಹ ನೃತ್ಯಗಾರರೊಂದಿಗೆ ಹಾಡೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ಹಾಡನ್ನು ಪ್ರೀತಮ್ ಸಂಯೋಜಿಸಿದ್ದಾರೆ.

ಸಲ್ಮಾನ್ ಖಾನ್ ಆ್ಯಕ್ಷನ್ ಸೀಕ್ವೆನ್ಸ್‌ಗಳಿಂದ ವಿರಾಮ ತೆಗೆದುಕೊಂಡು ಇತ್ತೀಚೆಗೆ ತಮ್ಮ ಮುಂದಿನ ಚಿತ್ರ 'ಸಿಕಂದರ್‌' ಸಂಗ್​ನ ಶೂಟಿಂಗ್​​ನಲ್ಲಿ ಭಾಗಿಯಾಗಿದ್ದರು. ಕನ್ನಡತಿ ರಶ್ಮಿಕಾ ಮಂದಣ್ಣ ಅವರೊಂದಿಗೆ ರೋಮಾಂಚಕ, ಹಬ್ಬದ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಗೋರೆಗಾಂವ್‌ನ ಎಸ್‌ಆರ್‌ಪಿಎಫ್ ಮೈದಾನದ ಬಳಿ ಹಾಕಲಾಗಿರುವ ಸೆಟ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗಿದೆ.

ಈ ಹಾಡು 200 ಹಿನ್ನೆಲೆ ನೃತ್ಯಗಾರರನ್ನು ಹೊಂದಿದೆ. ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಹಾಡು ಸಾಗುತ್ತದೆ. ರಶ್ಮಿಕಾ ಗುರುವಾರದಂದು ತಂಡಕ್ಕೆ ಸೇರಿ, ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಹಾಡಿನಲ್ಲಿ, ಸಲ್ಮಾನ್ ಕಸ್ಟಮೈಸ್ ಮಾಡಲಾಗಿರುವ ಬೆಳ್ಳಿ ಸರ, ಕಿವಿಯೋಲೆಗಳು ಮತ್ತು ಡೆನಿಮ್‌ನೊಂದಿಗೆ ಪೂರ್ಣ ತೋಳಿನ ಶರ್ಟ್ ಧರಿಸಿದ್ದಾರೆ. ರಶ್ಮಿಕಾ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಹಾಡಿನ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಿದ್ದಾರೆ.

ಇದನ್ನೂ ಓದಿ:ಪ್ರಿಯಾಂಕಾ ಚೋಪ್ರಾ ಸ್ಟನ್ನಿಂಗ್​​​ ಲುಕ್​​​​ಗೆ ಫ್ಯಾನ್ಸ್​ ಫಿದಾ​: ದೇಸಿ ಗರ್ಲ್​​ ಕೈ ಮೇಲಿದೆ ಮಗಳ ಹಚ್ಚೆ - Priyanka Chopra Stunning Pictures

ಸಲ್ಮಾನ್ ಆಗಸ್ಟ್‌ನಲ್ಲಿ ಮುಂಬೈನಲ್ಲಿ ಶೂಟಿಂಗ್​ ಪ್ರಾರಂಭಿಸಿದರು. 45 ದಿನಗಳ ಶೆಡ್ಯೂಲ್​ ಹೊಂದಿದ್ದಾರೆ. ಮುಂಬೈನಲ್ಲಿ ಸ್ಥಳೀಯ ಪ್ರದೇಶಗಳನ್ನು ಬಿಂಬಿಸುವ ಸೆಟ್​​​ ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ. ಎಆರ್ ಮುರುಗದಾಸ್ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಜೊತೆಗೆ ಸತ್ಯರಾಜ್, ಪ್ರತೀಕ್ ಬಬ್ಬರ್ ಮತ್ತು ಕಾಜಲ್ ಅಗರ್ವಾಲ್ ಕೂಡಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷ ಈದ್​ಗೆ ಸಿಕಂದರ್ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ದಳಪತಿ ವಿಜಯ್​​ ಕೊನೆ ಸಿನಿಮಾದ ಫಸ್ಟ್ ಲುಕ್​ ಔಟ್​​​: ಬಿಡುಗಡೆಗೆ ಮುಹೂರ್ತ ಫಿಕ್ಸ್​​; 500ಕೋಟಿ ಬಜೆಟ್​ನಲ್ಲಿ ನಿರ್ಮಿಸಲಿದೆ 'ಕೆವಿಎನ್' - KVN Thalapathy Vijay movie

2023ರಲ್ಲಿ ಬಿಡುಗಡೆಯಾದ ಟೈಗರ್ 3 ಸಲ್ಮಾನ್ ಖಾನ್ ನಟನೆಯ ಕೊನೆ ಚಿತ್ರ. ಅಲ್ಲದೇ, ಶಾರುಖ್ ಖಾನ್ ಅಭಿನಯದ ಬ್ಲಾಕ್​ಬಸ್ಟರ್ 'ಪಠಾಣ್' ಚಿತ್ರದಲ್ಲೂ ಅತಿಥಿ ಪಾತ್ರ ನಿರ್ವಹಿಸಿದ್ದರು. ನಟ ಮುಂದೆ ಸಿಕಂದರ್ ಚಿತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಇನ್ನೂ ರಶ್ಮಿಕಾ ಮಂದಣ್ಣ ಅನಿಮಲ್ ಚಿತ್ರದಲ್ಲಿ ರಣ್​​ಬೀರ್ ಕಪೂರ್ ಜೊತೆ ಕೊನೆಯದಾಗಿ ಕಾಣಿಸಿಕೊಂಡಿದ್ದರು. ನಟಿಯ ಮುಂದಿನ ಬಹುನಿರೀಕ್ಷಿತ ಚಿತ್ರ ಪುಷ್ಪ 2. ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್​​ ಜೊತೆ ತೆರೆ ಹಂಚಕೊಂಡಿದ್ದಾರೆ. ಅಲ್ಲದೇ ಕುಬೇರ, ದಿ ಗರ್ಲ್​​ಫ್ರೆಂಡ್​​ ಮತ್ತು ಛಾವಾ ಚಿತ್ರಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details