ETV Bharat / entertainment

ಸ್ಟೋರಿ ಮುಖ್ಯ, ನಿರ್ದೇಶಕರು ಹೆಣ್ಣೋ ಗಂಡೆಂಬುದಲ್ಲ ಎಂದಿದ್ದ ಯಶ್ : ಟಾಕ್ಸಿಕ್ ಲೇಡಿ​ ಡೈರೆಕ್ಟರ್​​​ ಬಗ್ಗೆ ತಿಳಿಯಬೇಕಾದ ಸಂಗತಿಗಳಿವು - GEETU MOHANDAS

ರಾಕಿಂಗ್​ ಸ್ಟಾರ್ ಯಶ್ ಜನ್ಮದಿನ ಹಿನ್ನೆಲೆ ಬಹುನಿರೀಕ್ಷಿತ ಟಾಕ್ಸಿಕ್​ ಟೀಸರ್​ ಅನಾವರಣಗೊಂಡಿದೆ. ಈ ಚಿತ್ರದ ನಿರ್ದೇಶಕಿ ಗೀತು ಮೋಹನ್​ದಾಸ್​ ಬಗ್ಗೆ ತಿಳಿಯಬೇಕಾದ ಸಂಗತಿಗಳಿಲ್ಲಿವೆ.

Toxic film team
ಟಾಕ್ಸಿಕ್​ ಚಿತ್ರತಂಡ (Photo: ETV Bharat, A screen grab from teaser)
author img

By ETV Bharat Entertainment Team

Published : Jan 8, 2025, 7:50 PM IST

ಕೋಟ್ಯಂತರ ಸಿನಿಪ್ರಿಯರು, ಅಭಿಮಾನಿಗಳು ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಗಣ್ಯರ ಗುಣಗಾನಕ್ಕೆ ಪಾತ್ರರಾಗಿರುವ ಯಶ್​​ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್​'. ಇಂದು ನಟನ 39ನೇ ಜನ್ಮದಿನ ಹಿನ್ನೆಲೆ, ಆಕರ್ಷಕ ಗ್ಲಿಂಪ್ಸ್​​ ಅನಾವರಣಗೊಳಿಸೋ ಮೂಲಕ ಚಿತ್ರತಂಡ ಸಿನಿಪ್ರಿಯರ ಕುತೂಹಲ ಕೆರಳಿಸಿದೆ. ಸಂಪೂರ್ಣ ಸಿನಿಮಾ ವೀಕ್ಷಿಸೋ ಸಿನಿಪ್ರಿಯರ ಕಾತರ ದುಪ್ಪಟ್ಟಾಗಿದೆ. ಕೆಜಿಎಫ್​ ಸ್ಟಾರ್​ ಮುಖ್ಯಭೂಮಿಕೆಯ ಸಿನಿಮಾ ಮಲೆಯಾಳಂ ಲೇಡಿ ಡೈರೆಕ್ಟರ್ ಗೀತು ಮೋಹನ್​ದಾಸ್​ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ​​

ಕೆಜಿಎಫ್ ಮೂಲಕ ಅಭೂತಪೂರ್ವ ಯಶಸ್ಸು ಕಂಡಿರುವ ಕೆಜಿಎಫ್ ಸ್ಟಾರ್ ಯಶ್, ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಶೀರ್ಷಿಕೆಯ ಪ್ರಾಜೆಕ್ಟ್​ನೊಂದಿಗೆ ತೆರೆಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಟಾಕ್ಸಿಕ್‌ನ ಮೊದಲ ನೋಟ ಈಗಾಗಲೇ ಅಭಿಮಾನಿಗಳು ಮತ್ತು ವಿಮರ್ಶಕರಿಂದ ಗಮನಾರ್ಹ ಪ್ರತಿಕ್ರಿಯೆ ಸ್ವೀಕರಿಸಿದೆ. ಸಿನಿಮಾ ಸುತ್ತಲಿನ ಸದ್ದು ತೀವ್ರಗೊಳ್ಳುತ್ತಿದ್ದಂತೆ, ನಿರ್ದೇಶಕರ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಬಹಳವಿದೆ. ಯಶ್ ಜೊತೆಗಿನ ಕೆಲಸದ ಬಗ್ಗೆಯೂ ಅಭಿಮಾನಿಗಳಲ್ಲಿ ಕುತೂಹಲವಿದೆ. ಅಂದಹಾಗೆ, ನಟನ ಮೇಲೆ ಸ್ಟೋರಿ ಪ್ರಭಾವ ಬೀರುತ್ತದೆಯೇ ಹೊರತು ನಿರ್ದೇಶಕರು ಪುರುಷರೋ ಅಥವಾ ಮಹಿಳೆಯೋ ಎಂಬುದಲ್ಲ ಎಂಬುದು ಗಮನಾರ್ಹ ಸಂಗತಿ. ಈ ವಿಷಯದ ಬಗ್ಗೆ ಸ್ವತಃ ಯಶ್​ ಅವರೇ ಈ ಹಿಂದೆ ಮಾತನಾಡಿದ್ದರು. ಸದ್ಯ ಸೂಪರ್​ ಸ್ಟಾರ್​ನ ಸಿನಿಮಾಗೆ ಲೇಡಿ ಡೈರೆಕ್ಟರ್​ ಆ್ಯಕ್ಷನ್​​ ಕಟ್​ ಹೇಳುತ್ತಿದ್ದಾರೆ.

''ನಾನು ಸಿನಿಮಾದ ಕಥೆಯನ್ನು ನಂಬುತ್ತೇನೆ, ನಿರ್ದೇಶಕರು ಗಂಡೋ ಅಥವಾ ಹೆಣ್ಣೋ ಎಂಬುದಕ್ಕೆ ನಾನು ಮಹತ್ವ ಕೊಡುವುದಿಲ್ಲ'' ಎಂದು ಈ ಹಿಂದೆ ಯಶ್ ತಿಳಿಸಿದ್ದರು. ಅವರ ಮಾತುಗಳು ಸಿನಿಮಾ ಇಂಡಸ್ಟ್ರಿಯ ಬದಲಾವಣೆ, ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತವೆ. ಇಲ್ಲಿ ಪ್ರತಿಭೆ ಮುಖ್ಯ ಎಂಬುದು ಸಾಬೀತಾಗಿದೆ. ವಿಭಿನ್ನ ಕಥೆ ಹೇಳುವಿಕೆ ಮತ್ತು ಪವರ್​ಫುಲ್​ ಟ್ರ್ಯಾಕ್ ರೆಕಾರ್ಡ್‌ಗೆ ಹೆಸರುವಾಸಿಯಾಗಿರೋ ನಿರ್ದೇಶಕಿ ಗೀತು ಮೋಹನ್​ದಾಸ್​​ ಅವರೊಂದಿಗೆ ಸೌತ್ ಸೂಪರ್​ಸ್ಟಾರ್​ ಯಶ್​​ ಕೈ ಜೋಡಿಸಿರೋದು ಟಾಕ್ಸಿಕ್ ಸುತ್ತಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಮಲಯಾಳಂ ಚಿತ್ರರಂಗದಲ್ಲಿ ಬಾಲ ಕಲಾವಿದೆಯಾಗಿ ವೃತ್ತಿಜೀವನ ಆರಂಭಿಸಿದ ಗೀತು ಮೋಹನ್ ದಾಸ್, ಲೈಯರ್ಸ್ ಡೈಸ್ ( Liar's Dice) ಮತ್ತು ಮೂತೊನ್‌ನಂತಹ ಗಮನಾರ್ಹ ಚಿತ್ರಗಳ ಮೂಲಕ ನಿರ್ದೇಶಕಿಯಾಗಿ ತಮ್ಮ ಛಾಪು ಮೂಡಿಸಿದ್ದಾರೆ. 1981ರ ಜೂನ್ 8ರಂದು ಕೇರಳದ ಕೊಚ್ಚಿಯಲ್ಲಿ ಗಾಯತ್ರಿ ದಾಸ್ ಆಗಿ ಜನಿಸಿದ ಗೀತು ಆರಂಭಿಕ ವರ್ಷಗಳಲ್ಲಿ ಮೋಹನ್ ಲಾಲ್ ಅವರಂತಹ ಖ್ಯಾತ ನಟರೊಂದಿಗೆ ತೆರೆಹಂಚಿಕೊಂಡರು. ಒನ್ನು ಮುತಾಲ್ ಪೂಜ್ಯಂ ವರೇ ಚಿತ್ರದಲ್ಲಿನ ಅಭಿನಯಕ್ಕಾಗಿ 1996ರಲ್ಲಿ ಅತ್ಯುತ್ತಮ ಬಾಲ ಕಲಾವಿದೆಯಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.

Yash birthday in Goa
ಗೋವಾದಲ್ಲಿ ಯಶ್ ಬರ್ತ್​ಡೇ (Photo: ETV Bharat)

ನಿರ್ದೇಶನಕ್ಕಿಳಿದ ಅವರ ಚೊಚ್ಚಲ ಕಿರುಚಿತ್ರ ಕೇಳ್ಕುನ್ನುಂಡೋ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಬೆಸ್ಟ್ ಶಾರ್ಟ್ ಫಿಕ್ಷನ್​) ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಅವರ ಮೊದಲ ಚಲನಚಿತ್ರ ಲೈಯರ್ಸ್ ಡೈಸ್ ವಿಮರ್ಶಾತ್ಮಕ ಯಶಸ್ಸನ್ನು ಕಂಡಿದೆ. ಜೊತೆಗೆ, ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನೂ ಒಳಗೊಂಡಂತೆ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅಲ್ಲದೇ ಈ ಚಿತ್ರ 87ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ವಿದೇಶಿ ಚಲನಚಿತ್ರ ವಿಭಾಗದಲ್ಲಿ ಭಾರತದಿಂದ ಅಧಿಕೃತ ಪ್ರವೇಶ ಪಡೆದುಕೊಂಡಿತ್ತು.

ಇದನ್ನೂ ಓದಿ: ಬಜೆಟ್‌ಗಿಂತ 6 ಪಟ್ಟು ಲಾಭ, ಚಿತ್ರಮಂದಿರಗಳಲ್ಲಿ 200 ದಿನ ಓಡಿದ ಯಶ್​ ಸಿನಿಮಾ; 2014ರ ಹಿಟ್​ ಚಿತ್ರವಿದು

ಗೀತು ನಿರ್ದೇಶನದ ಎರಡನೇ ಸಿನಿಮಾ ಮೂತೊನ್ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿತ್ತು. ಜೊತೆಗೆ, ಸನ್‌ಡಾನ್ಸ್ 2016ರಲ್ಲಿ ಗ್ಲೋಬಲ್ ಫಿಲ್ಮ್‌ ಮೇಕಿಂಗ್ ಅವಾರ್ಡ್​ ಅನ್ನು ಗೆದ್ದುಕೊಂಡಿತ್ತು. ಈ ಚಿತ್ರ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತನ್ನ ವರ್ಲ್ಡ್ ಪ್ರೀಮಿಯರ್​​ ಕಂಡಿತ್ತು. ಈ ಮೂಲಕ ನಿರ್ದೇಶಕರ ಖ್ಯಾತಿ ಹೆಚ್ಚಿತು.

ಇದನ್ನೂ ಓದಿ: ಗೋವಾದಲ್ಲಿ ಫ್ಯಾಮಿಲಿಯೊಂದಿಗೆ ಯಶ್​ ಜನ್ಮದಿನಾಚರಣೆ: ಸೆಲೆಬ್ರೇಶನ್​​ ಫೋಟೋಗಳಿಲ್ಲಿವೆ​​

ಸದ್ಯ, ಟಾಕ್ಸಿಕ್‌ನೊಂದಿಗೆ ಕರುನಾಡಿಗೆ ಕಾಲಿಟ್ಟಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ ಸೇರಿದಂತೆ ಯಶ್ ಜೊತೆಗೆ ಹಲವರ ಹೆಸರು ಕೇಳಿಬಂದಿದ್ದು, ಅಧಿಕೃತ ಘೋಷಣೆ ಆಗಬೇಕಿದೆ. ಟಾಕ್ಸಿಕ್​ 1950-1970ರ ದಶಕದ ಕಥೆಯಾಗಿದ್ದು, ಡ್ರಗ್ ಮಾಫಿಯಾ ಥ್ರಿಲ್ಲರ್ ಎಂದು ನಿರೀಕ್ಷಿಸಲಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ವೆಂಕಟ್ ಕೆ.ನಾರಾಯಣ್​​ ಮತ್ತು ಯಶ್ ಜಂಟಿಯಾಗಿ ಈ ಬಿಗ್​ ಬಜೆಟ್​ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.