ಕರ್ನಾಟಕ

karnataka

ETV Bharat / entertainment

Watch.. ಮದುವೆ ಯಾವಾಗ? ನಟಿ ಶ್ರದ್ಧಾ ಕಪೂರ್ ಕೊಟ್ಟ ಉತ್ತರವಿದು - Shraddha Kapoor Marriage - SHRADDHA KAPOOR MARRIAGE

ಮುಂಬೈನಲ್ಲಿ ನಡೆದ 'ಸ್ತ್ರೀ 2' ಟ್ರೇಲರ್ ರಿಲೀಸ್​ ಈವೆಂಟ್​ನಲ್ಲಿ ನಾಯಕ ನಟಿ ಶ್ರದ್ಧಾ ಕಪೂರ್​​ ಅವರಿಗೆ ಮದುವೆ ಕುರಿತಾದ ಪ್ರಶ್ನೆಗಳು ಎದುರಾದವು. ಅವರು ನೀಡಿದ ಉತ್ತರ ಏನು ಎಂಬುದನ್ನು ಈ ವಿಡಿಯೋದಲ್ಲಿ ನೋಡಿ

Shraddha Kapoor
ನಟಿ ಶ್ರದ್ಧಾ ಕಪೂರ್ (ETV Bharat)

By ETV Bharat Karnataka Team

Published : Jul 19, 2024, 3:26 PM IST

ಮದುವೆ ಕುರಿತಾದ ಪ್ರಶ್ನೆಗಳಿಗೆ ಶ್ರದ್ಧಾ ಕಪೂರ್ ಪ್ರತಿಕ್ರಿಯೆ (ANI)

ಶ್ರದ್ಧಾ ಕಪೂರ್, ಬಾಲಿವುಡ್​ನ ಬಹುಬೇಡಿಕೆ ನಟಿಯಲ್ಲೊಬ್ಬರು. 'ಸ್ತ್ರೀ 2' ನಟಿಯ ಮುಂದಿನ ಬಹುನಿರೀಕ್ಷಿತ ಚಿತ್ರ. ಹಾರರ್ - ಕಾಮಿಡಿ ಸಿನಿಮಾದ ಟ್ರೇಲರ್​ ಕಳೆದ ದಿನ, ಗುರುವಾರದಂದು ಅದ್ಧೂರಿಯಾಗಿ ನಡೆದಿದೆ. ಮುಂಬೈನಲ್ಲಿ ನಡೆದ ಅದ್ಧೂರಿ ಈವೆಂಟ್​​ನಲ್ಲಿ ಬಾಲಿವುಡ್​ ಬೆಡಗಿ ಶ್ರದ್ಧಾ ಕಪೂರ್ ಮಿಂಚು ಹರಿಸಿದ್ದಾರೆ. ಕೆಂಪು ಸೀರೆಯುಟ್ಟು ಬಂದ ಬೆಡಗಿ ಬೆರಗುಗೊಳಿಸುವ ನೋಟ ಬೀರಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದು ಮಾತ್ರವಲ್ಲದೇ ತಮ್ಮ ವೈಯಕ್ತಿಕ ಜೀವನದ ಸುತ್ತಲಿರುವ ಊಹಾಪೋಹಗಳಿಗೂ ಪ್ರತಿಕ್ರಿಯಿಸಿದ್ದಾರೆ. ಮದುವೆ ಬಗ್ಗೆ ಮಾತನಾಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಸ್ಕ್ರಿಪ್ಟ್​​​ರೈಟರ್​​ ರಾಹುಲ್​ ಮೋದಿ ಜೊತೆ ನಟಿ ಶ್ರದ್ಧಾ ಕಪೂರ್ ರಿಲೇಶನ್​​ಶಿಪ್​ನಲ್ಲಿದ್ದಾರೆ ಎಂಬ ವದಂತಿಗಳಿವೆ. ಹಲವು ಈವೆಂಟ್​ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾಗ್ಯೂ, ಈವರೆಗೆ ವದಂತಿಗಳಿಗೆ ಪ್ರತಿಕ್ರಿಯಿಸಿಲ್ಲ. ಈ ಈವೆಂಟ್​ನಲ್ಲಿ ರಾಹುಲ್ ಮೋದಿ ಅವರೊಂದಿಗಿನ ಸಂಬಂಧದ ಬಗ್ಗೆ ಪರೋಕ್ಷವಾಗಿ ಪ್ರಶ್ನಿಸಲಾಯಿತು. ಸಖತ್​​ ಸ್ಮಾರ್ಟ್ ಆಗಿ ಉತ್ತರಿಸಿದ ಶ್ರದ್ಧಾ, "ವೋ ಸ್ತ್ರೀ ಹೈ, ಉಸ್ಸೆ ಜಬ್ ದುಲ್ಹನ್ ಬನ್ನಾ ಹೈ ವೋ ಬನೇಗಿ" (ಅವಳು ಸ್ತ್ರೀ. ಅವಳಿಗೆ ಯಾವಾಗ ಮದುಮಗಳಾಗಬೇಕು ಎನಿಸುತ್ತದೋ ಆಗ ಆಗುತ್ತಾಳೆ) ಎಂದು ತಿಳಿಸಿದರು. ಶ್ರದ್ಧಾ ಅವರ ಈ ಕಾನ್ಫಿಡೆಂಟ್​​ ಸ್ಟೇಟ್​​ಮೆಂಟ್​​ ಪ್ರೇಕ್ಷಕರ ಚಪ್ಪಾಳೆಗೆ ಪಾತ್ರವಾಯಿತು.

ಜೂನ್‌ನಲ್ಲಿ ಶ್ರದ್ಧಾ, ರಾಹುಲ್ ಮೋದಿ ಅವರೊಂದಿಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಬಹುತೇಕ ದೃಢಪಡಿಸಿದರು. ಅದಾಗ್ಯೂ, ಸ್ಪಷ್ಟ - ಅಧಿಕೃತ ಹೇಳಿಕೆಗಳಿಗೆ ಕಾಯಲಾಗುತ್ತಿದೆ. ಫೋಟೋದಲ್ಲಿ ಈ ಜೋಡಿ ಮ್ಯಾಚಿಂಗ್​​ ವೈಟ್​​ ಡ್ರೆಸ್​​​​ನಲ್ಲಿ ಕಂಗೊಳಿಸಿದ್ದಾರೆ. ಫೋಟೋ ಶೇರ್​ ಮಾಡಿದ ಚೆಲುವೆ, "ದಿಲ್ ರಖ್ ಲೇ, ನೀಂದ್ ತೋ ವಾಪಸ್ ದೆ ದೆ ಯಾರ್ " (ನನ್ನ ದಿಲ್​​ ಇಟ್ಟುಕೊಳ್ಳಿ, ಆದ್ರೆ ನನ್ನ ನಿದ್ರೆಯನ್ನು ಮರಳಿಸಿ) ಎಂದು ಸ್ಮೈಲಿ, ರೆಡ್​ ಹಾರ್ಟ್ ಎಮೋಜಿಗಳೊಂದಿಗೆ ಬರೆದುಕೊಂಡಿದ್ದರು. ಜೊತೆಗೆ ರಾಹುಲ್ ಮೋದಿ ಇನ್​​ಸ್ಟಾ ಐಡಿಗೆ ಟ್ಯಾಗ್​ ಮಾಡಿದ್ದರು. ಪೋಸ್ಟ್‌ ಇಷ್ಕ್ ಚಿತ್ರದ "ನೀಂದ್ ಚುರಾಯೀ ಮೇರಿ" ಹಾಡನ್ನು ಸಹ ಒಳಗೊಂಡಿತ್ತು. ರೊಮ್ಯಾಂಟಿಕ್ ಪೋಸ್ಟ್​​ ಸಾಕಷ್ಟು ಮೆಚ್ಚುಗೆಗಳನ್ನು ಪಡೆದುಕೊಂಡಿತ್ತು.

ಇದನ್ನೂ ಓದಿ:'ಸ್ತ್ರೀ 2' ಟ್ರೇಲರ್​ ರಿಲೀಸ್: ಶ್ರದ್ಧಾ ಕಪೂರ್, ರಾಜ್​ಕುಮಾರ್​​​ ರಾವ್​ ಸಿನಿಮಾ ಮೇಲೆ ಗರಿಗೆದರಿದ ಕುತೂಹಲ - Stree 2 Trailer

'ಸ್ತ್ರೀ 2' ಟ್ರೇಲರ್​​ ರಿಲೀಸ್​ ಈವೆಂಟ್​ನಲ್ಲಿ ರೆಡ್​ ಆ್ಯಂಡ್​​ ಗೋಲ್ಡನ್ ಸೀರೆಯಲ್ಲಿ ಶ್ರದ್ಧಾ ಸೊಗಸಾಗಿ ಕಾಣಿಸಿಕೊಂಡಿದ್ದಾರೆ. ಮನಮೋಹಕ ಮೇಕ್ಅಪ್, ಹೆಣೆಯಲ್ಪಟ್ಟ ಕೇಶರಾಶಿ ನಟಿಯ ಸೌಂದರ್ಯ ಹೆಚ್ಚಿಸಿತ್ತು. ಮುಂಬೈನಲ್ಲಿ ನಡೆದ ಈವೆಂಟ್​ನಲ್ಲಿ ರಾಜ್‌ಕುಮಾರ್ ರಾವ್, ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ ಮತ್ತು ಅಪರಶಕ್ತಿ ಖುರಾನಾ ಸೇರಿದಂತೆ 'ಸ್ತ್ರೀ 2'ನ ತಾರಾಗಣ, ತಂಡದವರು ಉಪಸ್ಥಿತರಿದ್ದರು. ಅಮರ್ ಕೌಶಿಕ್ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರವನ್ನು ದಿನೇಶ್ ವಿಜನ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದು, ಜಿಯೋ ಸ್ಟುಡಿಯೋಸ್ ಮತ್ತು ಮ್ಯಾಡಾಕ್ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿದೆ. ಚಿತ್ರ ಆಗಸ್ಟ್ 15 ರಂದು ತೆರೆ ಕಾಣಲಿದೆ. ಮೊದಲ ಭಾಗ 2018ರಲ್ಲಿ ಬಿಡುಗಡೆ ಆಗಿತ್ತು.

ಇದನ್ನೂ ಓದಿ:ಹಾರ್ದಿಕ್​ ​ -ನತಾಶಾ ಡಿವೋರ್ಸ್: ಈ ಜೋಡಿಯ ಜೀವನದ ಒಂದು ನೋಟ - Hardik Natasa

ABOUT THE AUTHOR

...view details