ಭೈರತಿ ರಣಗಲ್ ಮೇಕಿಂಗ್ ವಿಡಿಯೋ (ETV Bharat) ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟನೆಯ, ಮಫ್ತಿ ಖ್ಯಾತಿಯ ನರ್ತನ್ ಆ್ಯಕ್ಷನ್ ಕಟ್ ಹೇಳಿರುವ ಬಹುನಿರೀಕ್ಷಿತ 'ಭೈರತಿ ರಣಗಲ್' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಕಲರ್ಫುಲ್ ಮೇಕಿಂಗ್ ರಿವೀಲ್ ಆಗಿದೆ. ಚಿತ್ರ ಆ.15ರಂದು ಬಿಡುಗಡೆ ಆಗಬೇಕಿತ್ತು. ಆದರೆ, ಶಿವ ರಾಜ್ಕುಮಾರ್ ಭಾಗದ ಚಿತ್ರೀಕರಣ ಬಾಕಿ ಇರುವ ಹಿನ್ನೆಲೆಯಲ್ಲಿ ರಿಲೀಸ್ ತಡವಾಗಿದೆ.
ಶಿವಣ್ಣ ಭೈರತಿ ರಣಗಲ್ ಆಗಿ ಬೆಳ್ಳಿ ತೆರೆ ಮೇಲೆ ಯಾವ ರೀತಿ ಕಾಣಿಸಿಕೊಳ್ಳುತ್ತಾರೆ ಅನ್ನೋದು ಅವರ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಸಖತ್ ಟಾಕ್ ಆಗುತ್ತಿರುವ ಚಿತ್ರ ಇದಾಗಿದ್ದರಿಂದ ನಿರೀಕ್ಷೆ ಹೆಚ್ಚೇ ಇದೆ.
ಮೇಕಿಂಗ್ನಲ್ಲಿ ಶಿವ ರಾಜ್ಕುಮಾರ್, ನಿರ್ಮಾಪಕಿ ಗೀತಾ ಶಿವರಾಜ್, ಮಗಳು ನಿವೇದಿತಾ, ನಿರ್ದೇಶಕ ನರ್ತನ್ ಸೇರಿದಂತೆ ಇಡೀ 'ಭೈರತಿ ರಣಗಲ್' ಚಿತ್ರತಂಡ ಸಮ್ಮುಖದಲ್ಲಿ ಕುಂಬಳಕಾಯಿ ಒಡೆಯುವ ಮೂಲಕ ಇದೇ ಜುಲೈ 12ಕ್ಕೆ ಬಿಗ್ ಅನೌನ್ಸ್ಮೆಂಟ್ ಇದೆ ಎಂದು ತಿಳಿಸಲಾಗಿದೆ.
2017ರಲ್ಲಿ ಬಂದ 'ಮಫ್ತಿ' ಚಿತ್ರದಲ್ಲಿ 'ಭೈರತಿ ರಣಗಲ್' ಪವರ್ಫುಲ್ ಪಾತ್ರವಾಗಿತ್ತು. ಆ ಪಾತ್ರದ ಹೆಸರೇ ಈಗ 'ಭೈರತಿ ರಣಗಲ್' ಚಿತ್ರವಾಗಿದೆ. ಆದರೆ, 'ಮಫ್ತಿ' ಚಿತ್ರದ ಮುಂದುವರೆದ ಭಾಗ ಅಲ್ಲ. 'ಭೈರತಿ ರಣಗಲ್' ಕಥೆಯೇ ಬೇರೆ. ಈ ಚಿತ್ರದಲ್ಲಿ 'ಭೈರತಿ ರಣಗಲ್' ಗ್ಯಾಂಗ್‍ಸ್ಟರ್ ಆಗಿದ್ದು ಹೇಗೆ? ಆ ಬ್ಲಾಕ್ ಡ್ರೆಸ್ ಯಾಕೆ ಹಾಕುತ್ತಾರೆ ಎನ್ನುವುದೇ ಹೈಲೆಟ್ಸ್ ಎಂದು ಹೇಳಲಾಗುತ್ತಿದೆ.
ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್, ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಮುಂತಾದವರು ಅಭಿನಯಿಸುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ಮತ್ತು ರವಿ ಬಸ್ರೂರು ಸಂಗೀತವಿದೆ.
ನಿರ್ಮಾಪಕಿ ಗೀತಾ ಶಿವರಾಜ್ ಬಹು ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಶಿವ ರಾಜ್ಕುಮಾರ್ ಹುಟ್ಟುಹಬ್ಬದ ದಿನ ತಮ್ಮ ಹೋಂ ಬ್ಯಾನರ್ ಅಡಿ ಸಣ್ಣ ಟೀಸರ್ ಜೊತೆಗೆ ಬಿಡುಗಡೆ ದಿನಾಂಕವನ್ನೂ ಸಹ ಘೋಷಣೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ನಿವೇದಿತಾ ಶಿವ ರಾಜ್ಕುಮಾರ್ ನಿರ್ಮಾಣದ 'ಫೈರ್ ಫ್ಲೈ' ಚಿತ್ರದಲ್ಲಿ ಅಚ್ಯುತ್ ಕುಮಾರ್ ಅಭಿನಯ - Fire Fly Movie