ಇದೇ ಜುಲೈ ನಡುವಲ್ಲಿ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಜೋಡಿಯ ಅದ್ಧೂರಿ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಿದ್ದ ಸೂಪರ್ ಸ್ಟಾರ್ ಶಾರುಖ್ ಖಾನ್ ನಂತರ ಲಂಡನ್‌ಗೆ ಪ್ರಯಾಣ ಬೆಳೆಸಿದ್ದರು. ಕೆಲ ದಿನಗಳ ಪ್ರವಾಸವನ್ನು ಎಂಜಾಯ್ ಮಾಡಿದ ಕಿಂಗ್ ಖಾನ್ ಕುಟುಂಬ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದೆ. ದೇಶಕ್ಕೆ ವಾಪಸ್ ಆಗಿದ್ದ, ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋ ವಿಡಿಯೋಗಳು ಸದ್ದು ಮಾಡುತ್ತಿವೆ.
ಎಸ್‌ಆರ್‌ಕೆ ಜೊತೆ ಪತ್ನಿ ಗೌರಿ ಖಾನ್ ಮತ್ತು ಕಿರಿಯ ಮಗ ಅಬ್ರಾಂ ಖಾನ್ ಇದ್ದರು. ಎಸ್‌ಆರ್‌ಕೆ, ಮುದ್ದು ಮಗ ಅಬ್ರಾಂನ ಕೈಹಿಡಿದು ನಡೆದರೆ, ಗೌರಿ ಖಾನ್ ಕೂಡ ಬಹಳ ಹತ್ತಿರದಲ್ಲೇ ಸಾಗಿದರು. ಸ್ಟಾರ್ ಕುಟುಂಬ ಡೈರೆಕ್ಟ್ ಅಗಿ ತಮ್ಮ ಕಾರಿಗೆ ಕಡೆ ಹೋಗುತ್ತಿರುವುದು ಕಂಡುಬಂತು. ನಟನ ಮ್ಯಾನೇಜರ್ ಪೂಜಾ ದದ್ಲಾನಿ, ಬಾಡಿಗಾರ್ಡ್ ರವಿ ಸಿಂಗ್ ಸಹ ಜೊತೆಗಿದ್ದರು.
ಶಾರುಖ್ ಖಾನ್ ಬ್ಲ್ಯಾಕ್ ಟಿ-ಶರ್ಟ್, ಜೀನ್ಸ್, ಶೂಸ್ ಧರಿಸಿ ಕ್ಯಾಶುವಲ್ ಆಗಿ ಕಾಣಿಸಿಕೊಂಡರು. ಸನ್‌ಗ್ಲಾಸ್ ಧರಿಸಿದ್ದ ನಟ ಬ್ಯಾಗ್ ಹಿಡಿದಿದ್ದರು. ಗೌರಿ ವೈಟ್ ಡ್ರೆಸ್, ಜಾಕೆಟ್, ಶೂಸ್, ಕ್ಯಾಪ್, ಸನ್‌ಗ್ಲಾಸ್ ಧರಿಸಿ ಸ್ಟೈಲಿಶ್ ಲುಕ್ ಕೊಟ್ಟರು. ಇನ್ನು, ಮಗ ಅಬ್ರಾಂ ಬ್ಲ್ಯೂ ಟಿ-ಶರ್ಟ್, ಶಾರ್ಟ್ಸ್, ಶೂಸ್ ಧರಿಸಿ ಮುದ್ದಾಗಿ ಕಾಣಿಸಿಕೊಂಡರು.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ, ಶಾರುಖ್ ಮತ್ತು ಗೌರಿ ಲಂಡನ್‌ಗೆ ಪ್ರಯಾಣ ಬೆಳೆಸಿದರು. ಅಂಬಾನಿ ಕುಟುಂಬದ 'ಮಂಗಲ್ ಉತ್ಸವ'ದಲ್ಲಿ ಭಾಗಿಯಾಗಿರಲಿಲ್ಲ. ಅದಾಗ್ಯೂ, ನವವಿವಾಹಿತರ ಶುಭ ವಿವಾಹ ಸಮಾರಂಭದಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ:ಆ್ಯಕ್ಷನ್ ಟು ರೊಮ್ಯಾನ್ಸ್: ಹನು ರಾಘವಪುಡಿ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್; ಶೀಘ್ರದಲ್ಲೇ ಶೂಟಿಂಗ್ ಶುರು - Prabhas New Movie
ಅಂಬಾನಿ ಕುಟುಂಬದ ಅದ್ಧೂರಿ ಕಾರ್ಯಕ್ರಮದಲ್ಲಿ ಬಾಲಿವುಡ್ನ ಬಹುತೇಕ ಗಣ್ಯರು ಕಾಣಿಸಿಕೊಂಡರು. ಶಾರುಖ್ ನೀತಾ ಅಂಬಾನಿ ಅವರೊಂದಿಗೆ ನೃತ್ಯ ಮಾಡಿ ಗಮನ ಸೆಳೆದಿದ್ದರು. ರಣ್ಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ಜೊತೆಗೆ ಚೈಯಾ ಚೈಯಾ ಸಾಂಗ್ಗೆ ಸ್ಟೆಪ್ ಹಾಕಿದ್ದರು. ಸಲ್ಮಾನ್ ಸೇರಿದಂತೆ ಕೆಲ ಖ್ಯಾತನಾಮರೊಂದಿಗೆ ಡ್ಯಾನ್ಸ್ ಮಾಡಿರುವ ವಿಡಿಯೋಗಳು ವೈರಲ್ ಆಗಿವೆ.
ಇನ್ನೂ ಸೌತ್ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಕೈ ಜೋಡಿಸಿ ಸ್ವಾಗತಿಸಿದರು, ಸಚಿನ್ ತೆಂಡೂಲ್ಕರ್ ಅವರೊಂದಿಗೆ ಉತ್ತಮ ಕ್ಷಣ ಕಳೆದರು, ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರಿಂದ ಆಶೀರ್ವಾದ ಪಡೆದರು. ಹೀಗೆ ಸರ್ವರೊಂದಿಗೂ ಗೌರವಯುತವಾಗಿ ನಡೆದುಕೊಂಡ ಕಿಂಗ್ ಖಾನ್ ಸರಳತೆಗೆ ಕೋಟ್ಯಂತರ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಎರಡನೇ ಮಗುವಿನ ನಿರೀಕ್ಷೆಯಲ್ಲಿ ಪ್ರಣಿತಾ: ಬೇಬಿ ಬಂಪ್ ಫೋಟೋ ಶೇರ್ ಮಾಡಿದ ನಟಿ - Pranitha Subhash Pregnant
ನಟನ ಸಿನಿಮಾ ವಿಚಾರ ಗಮನಿಸುವುದಾದರೆ, 2023ರಲ್ಲಿ ಪಠಾಣ್, ಜವಾನ್, ಡಂಕಿ ಶೀರ್ಷಿಕೆಯ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಮಗಳು ಸುಹಾನಾ ಖಾನ್ ಜೊತೆ ಚಿತ್ರವೊಂದಕ್ಕೆ ಸಜ್ಜಾಗುತ್ತಿದ್ದಾರೆ. ಈ ಸಿನಿಮಾದ ಟೈಟಲ್ 'ಕಿಂಗ್' ಎಂದು ವರದಿಯಾಗಿದೆ. ಸುಜೋಯ್ ಘೋಷ್ ನಿರ್ದೇಶನದ ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ, ಅವರ ಬಹು ನಿರೀಕ್ಷಿತ ಪ್ರೊಜೆಕ್ಟ್ 'ಟೈಗರ್ ವರ್ಸಸ್ ಪಠಾಣ್'ನಲ್ಲಿ ಸಲ್ಮಾನ್ ಖಾನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.