ಬಾಲಿವುಡ್ ನಟ ಶಾರುಖ್ ಖಾನ್ ಕಳೆದ ವರ್ಷ ಸೌತ್ ಸಿನಿಮಾ ಇಂಡಸ್ಟ್ರಿಯ ಜನಪ್ರಿಯ ನಟಿ ನಯನತಾರಾ ಜೊತೆ ತೆರೆ ಹಂಚಿಕೊಂಡಿದ್ದರು. ಇದೀಗ ದಕ್ಷಿಣದ ಮತ್ತೋರ್ವ ಸ್ಟಾರ್ ನಟಿಯೊಂದಿಗೆ ಸಿನಿಮಾ ಮಾಡಹೊರಟಿದ್ದಾರೆ ಎಂದು ವರದಿಯಾಗಿದೆ.
ಸೂಪರ್ ಹಿಟ್ 'ಪಿ.ಕೆ' ಖ್ಯಾತಿಯ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಸಿನಿಮಾದಲ್ಲಿ ಶಾರುಖ್ ಮತ್ತು ಸಮಂತಾ ಅಭಿನಯಿಸಲಿದ್ದಾರೆ. 2023ರ ಹಿಟ್ 'ಡಂಕಿ'ಯಲ್ಲಿ ಮೊದಲ ಬಾರಿಗೆ ಶಾರುಖ್ ಮತ್ತು ರಾಜ್‌ಕುಮಾರ್ ಹಿರಾನಿ ಕೆಲಸ ಮಾಡಿದ್ದರು. ಇದೀಗ ವರದಿಯಾಗಿರುವ ಹೊಸ ಪ್ರೊಜೆಕ್ಟ್ ಅಧಿಕೃತವಾದರೆ, ಖಾನ್-ಹಿರಾನಿ ಕಾಂಬೋದ ಎರಡನೇ ಚಿತ್ರವಾಗಲಿದೆ. ಸಾಹಸಮಯ, ದೇಶಭಕ್ತಿ ಕಥೆಯಾಧರಿತ ಚಿತ್ರ ಇದೆಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.