2022 ಮತ್ತು 2023ನೇ ಸಾಲಿನ ಗೌರವಾನ್ವಿತ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ ಅನಾವರಣಗೊಂಡಿದೆ. ಅಕಾಡೆಮಿಯು ಬುಧವಾರದಂದು ವಿಜೇತರ ಹೆಸರು ಘೋಷಿಸಿದೆ. ಅಕಾಡೆಮಿ ರತ್ನ ಮತ್ತು ಅಕಾಡೆಮಿ ಪುರಸ್ಕಾರವನ್ನು ರಾಷ್ಟ್ರಪತಿ ಅವರು ಪ್ರದಾನ ಮಾಡಲಿದ್ದಾರೆ.
ವಿಶೇಷ ಪ್ರಶಸ್ತಿ ಪುರಸ್ಕೃತರಲ್ಲಿ ನಟರಾದ ರಾಜೀವ್ ವರ್ಮಾ, ಅಶೋಕ್ ಸರಫ್ ಮತ್ತು ಗಾಯಕರಾದ ಬಾಂಬೆ ಜಯಶ್ರೀ ಅವರ ಹೆಸರುಗಳಿವೆ. ಸಂಗೀತ, ನೃತ್ಯ ಮತ್ತು ನಾಟಕಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಕಾಡೆಮಿಯು ಅಕಾಡೆಮಿ ಫೆಲೋಗಳನ್ನೂ ಆಯ್ಕೆ ಮಾಡಿದೆ.
ಹೊಸದಾಗಿ ಆಯ್ಕೆಯಾಗಿರುವ ಫೆಲೋ ಪ್ರಶಸ್ತಿ (ಅಕಾಡೆಮಿ ರತ್ನ) ವಿಜೇತರ ಪೈಕಿ, ಪೈಕಿ ಪ್ರತಿಭಾವಂತ ವೀಣಾವಾದಕ ಆರ್ ವಿಶ್ವೇಶ್ವರನ್, ಕಥಕ್ ನೃತ್ಯಗಾರ್ತಿ ಸುನಯನಾ ಹಝಾರಿಲಾಲ್ ಮತ್ತು ಹೆಸರಾಂತ ಕೂಚಿಪುಡಿ ಜೋಡಿ ರಾಜಾ ಮತ್ತು ರಾಧಾ ರೆಡ್ಡಿ ಸೇರಿದ್ದಾರೆ. ಜಾನಪದ ತಜ್ಞ ಮತ್ತು ಲೇಖಕ ವಿನಾಯಕ್ ಖೇಡೇಕರ್, ರಂಗಭೂಮಿ ನಿರ್ದೇಶಕ ದುಲಾಲ್ ರಾಯ್ ಮತ್ತು ನಾಟಕಕಾರ ಡಿ.ಪಿ. ಸಿನ್ಹಾ ಅವರಂತಹ ಗಣ್ಯರು ಕೂಡ ಅಕಾಡೆಮಿ ಫೆಲೋಗಳಾಗಿ ಆಯ್ಕೆಯಾಗಿದ್ದಾರೆ. ಸಂಗೀತ ನಾಟಕ ಅಕಾಡೆಮಿಯ ಜನರಲ್ ಕೌನ್ಸಿಲ್ ತನ್ನ ಹೇಳಿಕೆಯಲ್ಲಿ, ಅಕಾಡೆಮಿ ಫೆಲೋಶಿಪ್ ಅನ್ನು ಪ್ರತಿಷ್ಠಿತ ಮತ್ತು ಅಪರೂಪದ ಗೌರವ ಎಂದು ಒತ್ತಿಹೇಳಿದೆ. ಪ್ರತೀ ಬಾರಿ ಸುಮಾರು 40 ಜನ ಪ್ರತಿಭಾವಂತರಿಗೆ ಈ ಫೆಲೋಶಿಪ್ ಗೌರವ ಸಲ್ಲುತ್ತದೆ.