IND vs WiI, Women ODI: ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನು 3-0ಯ ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.
ಇಂದು (ಶುಕ್ರವಾರ) ನಡೆದ ಅಂತಿಮ ಪಂದ್ಯದಲ್ಲಿ ಭಾರತದ ವನಿತೇಯರು 5 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದರು. ವೆಸ್ಟ್ ಇಂಡೀಸ್ ನೀಡಿದ್ದ 163 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ, 28.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ವಿಜಯದ ಕೇಕೆ ಹಾಕಿತು.
𝙒𝙄𝙉𝙉𝙀𝙍𝙎!
— BCCI Women (@BCCIWomen) December 27, 2024
Congratulations #TeamIndia on winning the #INDvWI ODI series 3️⃣-0️⃣ 👏👏 🏆@IDFCFIRSTBank pic.twitter.com/ki0aw8Jjks
ಭಾರತ ಪರ ಹರ್ಮನ್‌ಪ್ರೀತ್ ಕೌರ್ (32), ಜೆಮಿಮಾ ರಾಡ್ರಿಗಸ್ (29), ದೀಪ್ತಿ ಶರ್ಮಾ (39) ರನ್ ಗಳಿಸಿ ಮಿಂಚಿದರು. ವೆಸ್ಟ್ ಇಂಡೀಸ್ ಬೌಲರ್‌ಗಳಲ್ಲಿ ಡಾಟಿನ್, ಅಲೆನಿ, ಮ್ಯಾಥ್ಯೂಸ್, ಫ್ಲೆಚರ್, ಕರಿಷ್ಮಾ ತಲಾ 1 ವಿಕೆಟ್ ಉರುಳಿಸಿದರು.
ವಡೋದರದ ಕೌತುಂಬಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ದೀಪ್ತಿ ಶರ್ಮಾ ಮತ್ತು ರೇಣುಕಾ ಸಿಂಗ್ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಕೆರಿಬಿಯನ್ನರು, 9 ರನ್ಗಳಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡರು.
ಆರಂಭಿಕ ಇಬ್ಬರು ಬ್ಯಾಟರ್ಗಳಾದ ಜೋಸೆಫ್, ಹೇಲಿ ಮ್ಯಾಥ್ಯೂಸ್, ರೇಣುಕಾ ಸಿಂಗ್ ಎಸೆತದಲ್ಲಿ ಡಕ್ ಔಟ್ಆಗಿ ಪೆವಿಲಿಯನ್ ಸೇರಿದರೆ, ಡಿಯೇಂಡ್ರ ಡೆಟ್ಟಿನ್ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ತಂಡದ ಪರ ಚಿನ್ನಲ್ಲೇ ಹೆನ್ರಿ (64), ಕ್ಯಾಂಪ್ಬೆಲ್ಲೆ (46), ಅಲ್ಲೇನೆ (21) ಹೊರತುಪಡಿಸಿ ಉಳಿದ ಬ್ಯಾಟರ್ಗಳು ಎರಡಂಕಿ ಗಳಿಸಲು ಸಾಧ್ಯವಾಗದೇ ಪೆವಿಲಿಯನ್ ದಾರಿ ಹಿಡಿದರು. ಇದರಿಂದಾಗಿ ವೆಸ್ಟ್ ಇಂಡೀಸ್ ಅಲ್ಪಮೊತಕ್ಕೆ ಕುಸಿಯಿತು.
ಭಾರತದ ಪರ ದೀಪ್ತಿ ಶರ್ಮಾ 6 ವಿಕೆಟ್, ರೇಣುಕಾ ಸಿಂಗ್ 4 ವಿಕೆಟ್ ಪಡೆದರು.
𝐑𝐢𝐜𝐡𝐚 𝐆𝐡𝐨𝐬𝐡 𝐟𝐢𝐧𝐢𝐬𝐡𝐞𝐬 𝐢𝐭 𝐨𝐟𝐟 𝐢𝐧 𝐬𝐭𝐲𝐥𝐞 🔥#TeamIndia win the 3rd ODI by 5 wickets & cleansweep the series 3-0 🙌🙌
— BCCI Women (@BCCIWomen) December 27, 2024
Scorecard ▶️ https://t.co/3gyGzj5fNU#INDvWI | @IDFCFIRSTBank | @13richaghosh pic.twitter.com/XIAUChwJJ2
ದೀಪ್ತಿ ಶರ್ಮಾ ಆಲ್ರೌಂಡರ್ ಪ್ರದರ್ಶನ: ದೀಪ್ತಿ ಶರ್ಮಾ ಆಲ್ರೌಂಡರ್ ಪ್ರದರ್ಶನ ತೋರಿದರು. ಬೌಲಿಂಗ್ನಲ್ಲಿ ಕ್ಯಾಂಪ್ಬೆಲ್ಲೆ, ಝೈದಾ ಜೇಮ್ಸ್, ಅಲ್ಲೇನೆ, ಫ್ಲೆಚ್ಚರ್, ಮುನಿಸರ್ ಅವರ ವಿಕೆಟ್ ಪಡೆದರು. ಬ್ಯಾಟಿಂಗ್ನಲ್ಲೂ ತಂಡಕ್ಕೆ ಆಸರೆಯಾದರು. ಚೇಸಿಂಗ್ ಆರಂಭಿಸಿದ ಭಾರತ 73 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡಕ್ಕೆ ನೆರವಾದ ದೀಪ್ತಿ ಅಜೇಯ 39 ರನ್ ಕಲೆಹಾಕುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದರಿಂದಾಗಿ ಭಾರತ ವಿಂಡೀಸ್ ತಂಡವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು. ದೀಪ್ತಿ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: ಕ್ರಿಕೆಟ್ ಆಡುತ್ತಿರುವಾಗಲೇ ಕುಸಿದು ಬಿದ್ದು ಆಟಗಾರ ಸಾವು: ಶೋಕ ಸಾಗರದಲ್ಲಿ ಕ್ರಿಕೆಟ್ಲೋಕ!