ಕೆಜಿಎಫ್, ಕಾಂತಾರಗಳಂತಹ ಬ್ಲಾಕ್ಬಸ್ಟರ್ ಚಿತ್ರಗಳಿಂದಾಗಿ ಕನ್ನಡ ಚಿತ್ರರಂಗದ ಕೀರ್ತಿ ದುಪ್ಪಟ್ಟಾಗಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರೂ ಸೇರಿದಂತೆ ಇತರೆ ಸಿನಿರಂಗದ ಗಣ್ಯರೂ ಕೂಡಾ ಒಂದೊಳ್ಳೆ ಸಿನಿಮಾವನ್ನು ಸ್ಯಾಂಡಲ್ವುಡ್ನಿಂದ ನಿರೀಕ್ಷಿಸುತ್ತಾರೆ. ಅದರಂತೆ, ಬಂದ ಹಲವು ಚಿತ್ರಗಳು ಸಿನಿಪ್ರಿಯರನ್ನು ತಲುಪುವಲ್ಲಿ ಯಶಸ್ವಿಯಾಗಿವೆ. ಹೀಗೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ 'ಯುಐ' ಕೂಡಾ ಸಖತ್ ಸದ್ದು ಮಾಡಿದೆ.
ಕನ್ನಡ ಚಿತ್ರರಂಗದ 'ಬುದ್ಧಿವಂತ' ನಟ-ನಿರ್ದೇಶಕ ಎಂದೇ ಜನಪ್ರಿಯರಾಗಿರುವ ಉಪೇಂದ್ರ ಸಾರಥ್ಯದ ಬಹುನಿರೀಕ್ಷಿತ ಸಿನಿಮಾ 'ಯುಐ' (U I) ಕಳೆದ ಶುಕ್ರವಾರ ಬಹಳ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದೆ. ಬುದ್ದಿವಂತನ ಪ್ರಾಜೆಕ್ಟ್ ಅಂದ್ಮೇಲೆ ಸಾಮಾನ್ಯ ಸಿನಿಮಾವನ್ನೊಂತೂ ನಿರೀಕ್ಷಿಸೋಕಾಗಲ್ಲ. ಅದರಂತೆ ಬೆಟ್ಟದಷ್ಟು ನಿರೀಕ್ಷೆಗಳೊಂದಿಗೆ ಬಂದ ಯುಐ ಸಿನಿಪ್ರಿಯರಿಂದ ವಿಭಿನ್ನ ಪ್ರತಿಕ್ರಿಯೆ ಸ್ವೀಕರಿಸಿದ್ದಲ್ಲದೇ ಬಾಕ್ಸ್ ಆಫೀಸ್ನಲ್ಲೂ ಉತ್ತಮ ಗಳಿಕೆ ಮಾಡಿದೆ.
ಬಾಕ್ಸ್ ಆಫೀಸ್ ಕಲೆಕ್ಷನ್:
ದಿನ | ಕಲೆಕ್ಷನ್ |
ಮೊದಲ ದಿನ | 6.95 ಕೋಟಿ ರೂ. |
ಎರಡನೇ ದಿನ | 5.6 ಕೋಟಿ ರೂ. |
ಮೂರನೇ ದಿನ | 5.95 ಕೋಟಿ ರೂ. |
ನಾಲ್ಕನೇ ದಿನ | 2.3 ಕೋಟಿ ರೂ. |
ಐದನೇ ದಿನ | 2.1 ಕೋಟಿ ರೂ. |
ಆರನೇ ದಿನ | 2.35 ಕೋಟಿ ರೂ. |
ಏಳನೇ ದಿನ | 1.10 ಕೋಟಿ ರೂ. |
ಒಟ್ಟು | 26.35 ಕೋಟಿ ರೂ. |
(ಡಾಟಾ ಮೂಲ: ಸ್ಯಾಕ್ನಿಲ್ಕ್).
ಇದನ್ನೂ ಓದಿ: 2ನೇ ದಿನ ಗಳಿಕೆಯಲ್ಲಿ ಇಳಿಕೆ: ಸುದೀಪ್ 'ಮ್ಯಾಕ್ಸ್' ಒಟ್ಟು ಕಲೆಕ್ಷನ್ ಎಷ್ಟು?
ಉಪ್ಪಿ ಸಿನಿಮಾ ತನ್ನ ಆರನೇ ದಿನ ಬುಧವಾರದಂದು 2.35 ಕೊಟಿ ರೂ. ವ್ಯವಹಾರ ನಡೆಸಿತ್ತು. ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ 'ಮ್ಯಾಕ್ಸ್' ಅಬ್ಬರದ ನಡುವೆಯೂ ಕ್ರಿಸ್ಮಸ್ ರಜೆಯನ್ನು ಸದುಪಯೋಗಪಡಿಸಿಕೊಂಡ ಯುಐ ಬಾಕ್ಸ್ ಆಫೀಸ್ನಲ್ಲಿ ಬಳ್ಳೆ ವ್ಯವಹಾರ ನಡೆಸಿತ್ತು. ಆದ್ರೆ ಗುರುವಾರದಂದು 0.34 ಕೊಟಿ ರೂಪಾಯಿ ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದ್ರೆ ಏಳನೇ ದಿನ 1.10 ಕೋಟಿ ರೂಪಾಯಿ ಆಗಿದೆ. ಅಲ್ಲಿಗೆ ಮ್ಯಾಕ್ಸ್ ಮತ್ತು ಯುಐ ಎರಡೂ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದ್ದು, ಕನ್ನಡ ಚಿತ್ರರಂಗ 2024ನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಭರವಸೆ ಇದೆ.
ಉಪೇಂದ್ರ ಅವರೇ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ, ಮುರಳಿ ಶರ್ಮಾ, ಜಿಶು ಸೇನ್ಗುಪ್ತಾ, ನಿಧಿ ಸುಬ್ಬಯ್ಯ, ಸಾಧು ಕೋಕಿಲ, ಮುರಳಿ ಕೃಷ್ಣ ಮತ್ತು ಇಂದ್ರಜಿತ್ ಲಂಕೇಶ್ ಸೇರಿ ಹಲವರು ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: 35 ಕೋಟಿ ಬಜೆಟ್, 90 ಕೋಟಿಗೂ ಅಧಿಕ ಕಲೆಕ್ಷನ್: ಈ ಸಿನಿಮಾ ಸೆಟ್ನಲ್ಲಿ 35 ಸೀರೆಗಳನ್ನು ವಿತರಿಸಿದ್ದ ಸಲ್ಮಾನ್ ಖಾನ್
''ಕಾತುರದಿಂದ ಕಾಯುತ್ತಿದ್ದೇನೆ. UI ಚಿತ್ರದ ಎಷ್ಟು ಸೀನ್ಗಳನ್ನು ಡೀಕೋಡ್ ಮಾಡುತ್ತೀರಾ ಮತ್ತು ಕೊನೆಯ ಶಾಟ್ ಡಿಕೋಡ್ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತೀರಾ'' ಅಂತಾ ಸಿನಿಮಾ ಬಿಡುಗಡೆ ಆದ ಬೆನ್ನಲ್ಲೇ ರಿಯಲ್ ಸ್ಟಾರ್ ಉಪೇಂದ್ರ ಪೋಸ್ಟ್ ಶೇರ್ ಮಾಡಿದ್ದರು. ಇದಾದ ನಂತರ, ''ನಿಜವಾದ ಬುದ್ಧಿವಂತರು ದಡ್ಡರ ತರ ಇರ್ತಾರೆ, ಆದ್ರೆ ದಡ್ಡರು ತಾವು ಬುದ್ಧಿವಂತರು ಅಂತ ಎಗರಾಡ್ತಿರ್ತಾರೆ...'' ಎಂಬ ಸಾಲುಗಳು ಯುಐ ಸಿನಿಮಾ ಸ್ಕ್ರೀನ್ ಮೇಲೆ ಬಂದಿದ್ದು, ಈ ಪೋಟೋ ಹಂಚಿಕೊಂಡ ರಿಯಲ್ ಸ್ಟಾರ್ ಪರದೆ ಮೇಲೆ ಕಾಣಿಸಿದ ಇದರ ಬಗ್ಗೆ ಯಾರೂ ಏಕೆ ಮಾತಾಡುತ್ತಿಲ್ಲ?!! ಎಂದು ಕೇಳಿದ್ದಾರೆ. ಹೀಗೆ ಅಭಿಮಾನಿಗಳ ತಲೆಗೆ ಕೆಲಸ ಕೊಡುವಲ್ಲಿ ರಿಯಲ್ ಸ್ಟಾರ್ ಯಶಸ್ವಿಯಾಗಿದ್ದು, ತನ್ನ ಉತ್ತಮ ಪ್ರದರ್ಶನ ಮುಂದುವರಿಸಿದೆ.