ಕರ್ನಾಟಕ

karnataka

ETV Bharat / entertainment

'RCB'ಗಾಗಿ ಲಾಂಗ್​ ಹಿಡಿದ ಶಿವಣ್ಣ: ಜಬರ್​ದಸ್ತ್​ ವಿಡಿಯೋ 'ಅರ್ಥ ಆಯ್ತಾ'? - RCB video

ನಟ ಶಿವರಾಜ್​ಕುಮಾರ್​​ ಅವರ 'ಆರ್​ಸಿಬಿ ಸ್ಪೆಷಲ್​ ವಿಡಿಯೋ' ಅನಾವರಣಗೊಂಡಿದೆ.

Shiva Rajkumar
ನಟ ಶಿವರಾಜ್​ಕುಮಾರ್​​

By ETV Bharat Karnataka Team

Published : Mar 16, 2024, 4:37 PM IST

ಭಾರತದಾದ್ಯಂತ ಕ್ರಿಕೆಟ್​​ ಕ್ರೇಜ್​​ ಜೋರಾಗಿದೆ. 'ಇಂಡಿಯನ್ ಪ್ರೀಮಿಯರ್ ಲೀಗ್' (IPL) ಸೀಸನ್ 17 ಇದೇ ಮಾರ್ಚ್ 22ರಿಂದ ಶುರುವಾಗಲಿದೆ. ಕ್ರಿಕೆಟ್​​ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ತಂಡಗಳು ಭರ್ಜರಿ ಸಿದ್ಧತೆ ನಡೆಸಿವೆ. ಆರ್​ಸಿಬಿ ಅಭಿಮಾನಿಗಳು ಸಖತ್​ ಜೋಶ್​ನಲ್ಲಿದ್ದು, 'ಈ ಬಾರಿ ಕಪ್​ ನಮ್ದೆ' ಅನ್ನೋ​ ಡೈಲಾಗ್​​ ಈ ಬಾರಿಯೂ ಸಖತ್​ ಸದ್ದು ಮಾಡುತ್ತಿದೆ. ಬೆಂಗಳೂರು ತಂಡ ಹೊಸ ಹೆಸರಿನೊಂದಿಗೆ ಬರಲಿದ್ದು, ಸ್ಯಾಂಡಲ್​ವುಡ್​​ ಆರ್​ಸಿಬಿ ಜೊತೆ ಕೈ ಜೋಡಿಸಿದೆ. ಆರ್​ಸಿಬಿ ಹೆಸರಿನಲ್ಲಿ ಬದಲಾವಣೆಯ ಸುಳಿವು ಬಿಟ್ಟುಕೊಟ್ಟಿರುವ ಕಲಾವಿದರ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

ಕಾಂತಾರ ಖ್ಯಾತಿಯ ನಟ - ನಿರ್ದೇಶಕ ರಿಷಬ್​ ಶೆಟ್ಟಿ, ನಿರ್ಮಾಪಕಿ ಅಶ್ವಿನಿ ಪುನೀತ್​ ರಾಜ್​​​ಕುಮಾರ್​ ಅವರ ಆರ್​ಸಿಬಿ ಸ್ಪೆಷಲ್​ ವಿಡಿಯೋಗಳು ಇತ್ತೀಷೆಗಷ್ಟೇ ಅನಾವರಣಗೊಂಡು ಸದ್ದು ಮಾಡಿದ್ದವು. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​​ ಅವರ 'ಅರ್ಥ ಆಯ್ತಾ'? ವಿಡಿಯೋ ಹೊರಬಿದ್ದಿದೆ. ಬ್ಯಾಂಗಲೂರ್​ ಎಂದಿರುವ ಲಾಂಗ್​​ ಕಂಡ ಶಿವಣ್ಣ, ಎಲ್ಲಿವರೆಗೆ ಈ ಲಾಂಗ್​​ ಎಂದು ಹೇಳಿದ್ದಾರೆ. ಬಳಿಕ ನೆಟ್ಟಿಗರತ್ತ ನೋಡುತ್ತಾ 'ಅರ್ಥ ಆಯ್ತಾ'? ಎಂದು ಪ್ರಶ್ನಿಸಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವಂತೆ ಸಖತ್​ ರಗಡ್​ ಲುಕ್​ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದು, ವಿಡಿಯೋ ಜಬರ್​ದಸ್ತ್ ಆಗಿ ಮೂಡಿಬಂದಿದೆ.

ಇದನ್ನೂ ಓದಿ:ಅಶ್ವಿನಿ ಪುನೀತ್​ ರಾಜ್​ಕುಮಾರ್​ 'RCB' ವಿಡಿಯೋ ಅರ್ಥ ಆಯ್ತಾ?

ಪಂಚೆ, ಶರ್ಟ್ ಧರಿಸಿ ಮಾಸ್​​ ಲುಕ್​ನಲ್ಲಿ ಎಂಟ್ರಿಯಾಗೋ ಶಿವಣ್ಣ, ಗುರಿಯತ್ತ ಕಣ್ಣಾಯಿಸಿ ನಂತರ ತಮ್ಮ ಬಳಿ ಇದ್ದ ಮೂರು ಲಾಂಗ್​​ಗಳನ್ನು ನೋಡುತ್ತಾರೆ. ಮೊದಲ ಲಾಂಗ್​ ಮೇಲೆ ರಾಯಲ್​, ಎರಡನೇ ಲಾಂಗ್​​ ಮೇಲೆ ಚಾಲೆಂಜರ್ಸ್, ಮೂರನೇ ಲಾಂಗ್​ ಮೇಲೆ ಬ್ಯಾಂಗಲೂರ್​ ಎಂದು ಬರೆದಿರುತ್ತದೆ. ರಾಯಲ್​ ಮತ್ತು ಚಾಲೆಂಜರ್ಸ್ ಲಾಂಗ್​ ಅನ್ನು ಗುರಿಯತ್ತ ಬೀಸುವಲ್ಲಿ ಯಶಸ್ವಿಯಾಗುತ್ತಾರೆ. ಬ್ಯಾಂಗಲೂರ್​ ಎಂದು ಬರೆಯಲಾದ ಲಾಂಗ್​ ನೋಡಿ ''how long.... this long'' ಎಂದು ಹೇಳಿ ಅದನ್ನು ಅಲ್ಲೇ ಬಿಟ್ಟಿದ್ದಾರೆ. ನಂತರ ಕೆಂಡದಂತಿರೋ ಕಣ್ಣುಗಳಿಂದ ನೆಟ್ಟಿಗರನ್ನು ದಿಟ್ಟಿಸಿ, ಅರ್ಥ ಆಯ್ತಾ? ಎಂದು ಕೇಳಿದ್ದಾರೆ. ಅಲ್ಲಿಗೆ ಇನ್ಮುಂದೆ ರಾಯಲ್​ ಚಾಲೆಂಜರ್ಸ್ ಬ್ಯಾಂಗಲೂರ್ ಬದಲಿಗೆ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಅನ್ನೋದು ಪಕ್ಕಾ ಆಗಿದೆ. ಎಲ್ಲದಕ್ಕೂ ಮಾರ್ಚ್ 19ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಅನ್​ಬಾಕ್ಸ್​ ಕಾರ್ಯಕ್ರಮದಲ್ಲಿ ಸ್ಪಷ್ಟ, ಅಧಿಕೃತ ಮಾಹಿತಿ ಸಿಗಲಿದೆ.

ಇದನ್ನೂ ಓದಿ:'RCB' ಕೋಣಗಳೊಂದಿಗೆ 'ಕಾಂತಾರ' ಶಿವ! ರಿಷಬ್​​ ಶೆಟ್ಟಿ ಹೇಳಿದ್ದು ಅರ್ಥವಾಯ್ತಾ?

ಶಿವಣ್ಣನಿಗೂ ಮೊದಲು ರಿಷಬ್​ ಶೆಟ್ಟಿ ಮತ್ತು ಅಶ್ವಿನಿ ಪುನೀತ್​ ರಾಜ್​​​ಕುಮಾರ್ ಅವರ ವಿಶೇಷ ವಿಡಿಯೋ ಅನಾವರಣಗೊಂಡಿದೆ. ಈ ಹಿಂದೆ ಪುನೀತ್ ರಾಜ್‍ಕುಮಾರ್ ಬೆಂಗಳೂರು ತಂಡದ ಬ್ರ್ಯಾಂಡ್​ ಅಂಬಾಸಿಡರ್ ಆಗಿದ್ದರು. ಅಪ್ಪು ಅಗಲಿಕೆ ಹಿನ್ನೆಲೆ, ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಫ್ಯಾನ್ಸ್ ಎದುರು ಬಂದಿದ್ದಾರೆ. ಅಶ್ವಿನಿ ಅವರ ವಿಶೇಷ ವಿಡಿಯೋದಲ್ಲೂ ''ಆರ್ ಸಿ ಬಿ'' ಹೆಸರಿನಲ್ಲಿ ಬದಲಾವಣೆಯ ಸುಳಿವಿದೆ. ಇನ್ನೂ, ಮೂರು ಕೋಣಗಳೊಂದಿಗೆ 'ಕಾಂತಾರ'ದ ಶಿವನ ಅವತಾರದಲ್ಲಿ ಬಂದ ರಿಷಬ್​ ಶೆಟ್ಟಿ, ಬ್ಯಾಂಗಲೂರ್ ಎಂದು ಬರೆದಿದ್ದ ಕೋಣವನ್ನು ಚೆನ್ನಾಗಿಲ್ಲ ಎಂದು ಹೇಳಿ ಅಲ್ಲಿಂದ ಕಳುಹಿಸಿದ್ದರು. ಹೀಗೆ ಬ್ಯಾಂಗಲೂರ್ ಬದಲಿಗೆ ಬೆಂಗಳೂರು ಆಗುವ ಸುಳಿವು ಈ ವಿಡಿಯೋಗಳಲ್ಲಿದೆ.

ABOUT THE AUTHOR

...view details