ಹೈದರಾಬಾದ್: ನಟಿ ಸಮಂತಾ ರುತ್ ಪ್ರಭು ಮೈಯೋಸಿಟಿಸ್ ಆರೋಗ್ಯ ಸಮಸ್ಯೆ ಪತ್ತೆಯಾಗುವ ಮುನ್ನ ಅನುಭವಿಸಿದ ಆರೋಗ್ಯದ ಸವಾಲು ಮತ್ತು ನಂತರದಲ್ಲಿನ ಆಕೆಯ ಆರೋಗ್ಯ ಪರಿಸ್ಥಿತಿಗಳ ಕುರಿತು ಮಾತನಾಡಿದ್ದಾರೆ. ರೋಗ ಪತ್ತೆಗೆ ಮುನ್ನ ಆಕೆಯ ಅನುಭವ ಮತ್ತು ಚಿಕಿತ್ಸೆ ಬಳಿಕ ವರ್ಷಗಳ ನಂತರದಲ್ಲಿ ಅನುಭವಿಸಿದ ಶಾಂತತೆ ಕುರಿತು ತಮ್ಮ ಸ್ನೇಹಿತ, ಮ್ಯಾನೇಜರ್ ಹಿಮಾಂಕ್ ಜೊತೆಗಿನ ಮಾತುಕತೆಯ ಸಂದರ್ಭವನ್ನು ಮೆಲುಕು ಹಾಕಿದ್ದಾರೆ.
"ನನಗೆ ಇನ್ನು ನೆನಪಿದೆ ಈ ಸಮಸ್ಯೆಯಾಗುವ ಒಂದು ವರ್ಷ ಮುಂಚೆ ನಾನು ತುಂಬಾ ಕಷ್ಟದಲ್ಲಿದ್ದೆ. ನನ್ನ ಸ್ನೇಹಿತ, ಮ್ಯಾನೇಜರ್ ಹಿಮಾಂಕ್ ಜೊತೆಗೆ ಮುಂಬೈನಿಂದ ಪ್ರಯಾಣಿಸಿದ ಆ ನಿರ್ದಿಷ್ಟದ ದಿನದ ಬಗ್ಗೆ ಹೆಚ್ಚು ನೆನಪಿದೆ. ಹಿಂದಿನ ವರ್ಷದ ಜೂನ್ನಲ್ಲಿ ನಾನು ಇದೀಗ ಅಂತಿಮವಾಗಿ ಶಾಂತವಾಗಿದ್ದೇನೆ ಎಂದು ಆತನಿಗೆ ಹೇಳಿದ್ದೆ. ದೀರ್ಘಕಾಲದ ಬಳಿಕ ನನಗೆ ಕೊಂಚ ವಿಶ್ರಾಮದಾಯಕ ಮತ್ತು ಶಾಂತವಾದ ಅನುಭವವೂ ಉಂಟಾಯಿತು. ಅಂತಿಮವಾಗಿ ನಾನು ಉಸಿರಾಡುತ್ತಿರುವಂತೆ, ಸರಿಯಾಗಿ ನಿದ್ರೆಗೆ ಜಾರುವಂತೆ ಆಯಿತು. ಇದೀಗ ನಾನು ಆರಾಮಗೆ ಏಳಬಹುದು. ನನ್ನ ಕೆಲಸದ ಮೇಲೆ ಉತ್ತಮವಾಗಿ ಗಮನ ಹರಿಸಬಹುದು. ಇದೇ ಪರಿಸ್ಥಿತಿಯಲ್ಲಿಯೇ ಪ್ರತಿದಿನ ಏಳಬಹುದು ಎಂಬ ಅನುಭವ ಉಂಟಾಯಿತು" ಎಂದು ಸಮಂತಾ ತಿಳಿಸಿದ್ದಾರೆ.
ತಮ್ಮ ಪಾಡ್ಕಾಸ್ಟ್ ಸರಣಿ ಟೇಕ್ 20ಯಲ್ಲಿ ಮಾತನಾಡಿರುವ ಅವರು, ತಮ್ಮ ಆರೋಗ್ಯದ ಪ್ರಯಾಣದ ಕುರಿತು ಚರ್ಚಿಸಿದ್ದಾರೆ. ಈ ವೇಳೆ, ತಾವು ಅನುಭವಿಸಿದ ಸಮಸ್ಯೆ ಕುರಿತು ಹೇಳುತ್ತಾ ಜನರು ಆರೋಗ್ಯ ಮತ್ತು ಸುರಕ್ಷತೆಗೆ ಒತ್ತು ನೀಡುವ ಅವಶ್ಯ ಎಂದಿದ್ದಾರೆ. ತಾವು ಪಾಡ್ಕಾಸ್ಟ್ ಮಾಡಲು ಪ್ರಮುಖ ಕಾರಣ ಎಂದರೆ, ಅನುಭವಿಸಿದ ಭಯಾನಕ ಅನುಭವ. ಈ ಸ್ವಯಂ ನಿರೋಧಕ ಸ್ಥಿತಿಯು ಜೀವಮಾನವಿಡೀ ಇರುತ್ತದೆ. ಇಂದಿಗೂ ಕೂಡ ಇವುಗಳ ವಿರುದ್ಧ ಹೋರಾಡುತ್ತಿದ್ದೇನೆ. ಜನರು ಕ್ಷಮಿಸುವುದಕ್ಕಿಂತ ಸುರಕ್ಷಿತವಾಗಿರಲು ನಾನು ಬಯಸುತ್ತೇನೆ ಎಂದರು.