ಕರ್ನಾಟಕ

karnataka

ETV Bharat / entertainment

ಸಲ್ಮಾನ್​​ ಖಾನ್ ಮನೆ ಶೂಟೌಟ್​ ಪ್ರಕರಣದ ಆರೋಪಿ ಆತ್ಮಹತ್ಯೆ ವಿಚಾರ: ಪೊಲೀಸರಿಂದಲೇ 'ಕೊಲೆ' ಎಂದು ಕುಟುಂಬಸ್ಥರ ಆರೋಪ - lockup suicide - LOCKUP SUICIDE

ನಟ ಸಲ್ಮಾನ್​​ ಖಾನ್​ ಮನೆಯ ಹೊರಗೆ ಗುಂಡು ಹಾರಿಸಿದ ಕೇಸ್​ನ ಆರೋಪಿ ಲಾಕಪ್​ ಸೂಸೈಡ್​ ಬಗ್ಗೆ ಮೃತ ಆರೋಪಿಯ ಕುಟುಂಬ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದೆ.

ಸಲ್ಮಾನ್​​ ಖಾನ್ ಮನೆ ಶೂಟೌಟ್​ ಪ್ರಕರಣ
ಸಲ್ಮಾನ್​​ ಖಾನ್ ಮನೆ ಶೂಟೌಟ್​ ಪ್ರಕರಣ

By ETV Bharat Karnataka Team

Published : May 2, 2024, 10:26 AM IST

ಹೈದರಾಬಾದ್​​: ನಟ ಸಲ್ಮಾನ್​​ ಖಾನ್​ ಮನೆಯ ಹೊರಗೆ ಗುಂಡು ಹಾರಿಸಿದ ಪ್ರಕರಣದ ಆರೋಪಿ ಅನುಜ್ ಥಾಪನ್ ಲಾಕಪ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ.

ಮೃತ ಆರೋಪಿಯ ಸಹೋದರ ಅಭಿಷೇಕ್ ಥಾಪನ್, "ಅನುಜ್ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಆತನ ಮರಣೋತ್ತರ ಪರೀಕ್ಷೆಯನ್ನು ಮುಂಬೈನ ಹೊರಗೆ ಮಾಡಬೇಕು ಎಂದು ಒತ್ತಾಯಿಸಿ ನ್ಯಾಯಕ್ಕಾಗಿ ಕೋರಿದ್ದಾರೆ. ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಅಭಿಷೇಕ್, 'ಅನುಜ್​​ನ್ನು 6-7 ದಿನಗಳ ಹಿಂದೆ ಸಂಗ್ರೂರ್​ನಿಂದ ಮುಂಬೈ ಪೊಲೀಸರು ಬಂಧಿಸಿದ್ದರು. ಅನುಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಮಗೆ ಇಂದು ಸುದ್ದಿ ಬಂದಿದೆ. ಆದರೆ, ಆತ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿ ಅಲ್ಲ. ಅನುಜ್​ ಪೊಲೀಸರಿಂದ ಕೊಲ್ಲಲ್ಪಟ್ಟಿದ್ದಾನೆ. ನಮಗೆ ನ್ಯಾಯ ಬೇಕು. ಅನುಜ್​ ಟ್ರಕ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದ" ಎಂದು ಹೇಳಿಕೆ ನೀಡಿದ್ದಾರೆ.

ಈ ಕುರಿತು ಮೃತ ಆರೋಪಿಯ ಗ್ರಾಮದ ಸರಪಂಚ ಮನೋಜ್​​ ಗೋದಾರ ಮಾತನಾಡಿ ಈ ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆರೋಪಿ ಕೇವಲ ಕೂಲಿ ಕಾರ್ಮಿಕನಾಗಿದ್ದ. ಆತನ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗಿದೆ ಎಂದು ಆರೋಪಿಸಿದ್ದಾರೆ.

"ಈ ಪ್ರಕರಣವು ಮೊದಲಿನಿಂದಲೂ ಅನುಮಾನಾಸ್ಪದವಾಗಿದೆ. ಅನುಜ್ ಥಾಪನ್ ಗೆ ಒಬ್ಬ ಸಹೋದರ, ಒಬ್ಬ ಸಹೋದರಿ ಮತ್ತು ತಾಯಿ ಇದ್ದಾರೆ. ತಂದೆ ಇಲ್ಲ. ಅನುಜ್ ಟ್ರಕ್ ಡ್ರೈವರ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಮುಂಬೈ ಪೊಲೀಸರು ಪಂಚಾಯತ್‌ಗೆ ಮಾಹಿತಿ ನೀಡದೇ ಆತನನ್ನು ಬಂಧಿಸಿದ್ದರು. 1-2 ದಿನಗಳ ನಂತರ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಯಿತು. ಈ ಪೊಲೀಸ್​ ಕಸ್ಟಡಿ ಎಷ್ಟು ಸುರಕ್ಷಿತವೆಂಬುದು ಗೊತ್ತು ಎಂದು ಪರೋಕ್ಷವಾಗಿ ಪೊಲೀಸ್​ ವ್ಯವಸ್ಥೆ ಸುರಕ್ಷಿತವಲ್ಲ ಎಂಬ ರೀತಿ ಹೇಳಿಕೆ ನೀಡಿದರು. ಇದಲ್ಲದೇ ಗೋದಾರ, ಒಂದು ಕಡೆ ಸಲ್ಮಾನ್ ಖಾನ್, ಇನ್ನೊಂದು ಕಡೆ ಕೆಲಸಗಾರರು. ಎಲ್ಲಾ ಒತ್ತಡಕ್ಕೆ ಮಣಿದು ಪೊಲೀಸರು ಅನುಜ್​ನನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ"ಎಂದು ಆರೋಪಿಸಿದ್ದಾರೆ.

ಇನ್ನು ಆರೋಪಿ ಅನುಜ್ ಥಾಪನ್ ಮುಂಬೈ ಪೊಲೀಸ್​ ಇಲಾಖೆಯ ಅಪರಾಧ ವಿಭಾಗದ ಲಾಕಪ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಗೋಕುಲ್​ ದಾಸ್​ ತೇಜ್​ಪಾಲ್​ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ವೇಳೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಂದ್ರಾದಲ್ಲಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಮನೆಯ ಹೊರಗೆ ಏಪ್ರಿಲ್​ 14 ರ ನಸುಕಿನ ಜಾವ 4:50ರ ಸುಮಾರಿಗೆ ಬೈಕ್​ನಲ್ಲಿ ಹೆಲ್ಮೆಟ್​​ ಧರಿಸಿ ಬಂದ ಇಬ್ಬರು ಬಂದೂಕಿನಿಂದ ಗಾಳಿಯಲ್ಲಿ ಫೈರಿಂಗ್ ಮಾಡಿದ್ದರು.

ಇದನ್ನೂ ಓದಿ:ಸಲ್ಮಾನ್​ ಖಾನ್​ ನಿವಾಸದ ಮೇಲೆ ಗುಂಡಿನ ದಾಳಿ ಕೇಸ್​: ಲಾಕಪ್​ನಲ್ಲಿ ಆರೋಪಿ ಆತ್ಮಹತ್ಯೆ - Salman Khan House Firing Case

ABOUT THE AUTHOR

...view details