ರಿಷಬ್ ಶೆಟ್ಟಿ. ಕಾಂತಾರ ಎಂಬ ಅದ್ಭುತ ಚಿತ್ರದ ಮೂಲಕ ವಿಶ್ವವಿಖ್ಯಾತರಾದ ಕನ್ನಡ ಚಿತ್ರರಂಗದ ನಟ. ಕಾಂತಾರ ಸ್ಟಾರ್ ಎಂದೇ ಜನಪ್ರಿಯರು. ಅಮೋಘ ಅಭಿನಯದ ಮೂಲಕ ಕನ್ನಡಿಗರು ಮಾತ್ರವಲ್ಲದೇ ಇಡೀ ಭಾರತದ ಸಿನಿಪ್ರಿಯರ ಗಮನ ಸೆಳೆದವರು. ಡಿವೈನ್ ಸ್ಟಾರ್ ಓರ್ವ ಉತ್ತಮ ನಟ-ನಿರ್ದೇಶಕ ಮಾತ್ರವಲ್ಲದೇ, ಫ್ಯಾಮಿಲಿ ಮ್ಯಾನ್ ಆಗಿಯೂ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆಗಾಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋ-ವಿಡಿಯೋಗಳನ್ನು ಶೇರ್ ಮಾಡೋ ಮುಖೇನ ನೆಟ್ಟಿಗರ ಹೃದಯ ಗೆಲ್ಲುತ್ತಾರೆ. ಇದೀಗ ಹೊಸದಾಗಿ ಹಂಚಿಕೊಂಡಿರುವ ಮುದ್ದು ಮಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.
ಪ್ರಗತಿ ಶೆಟ್ಟಿ, ರಿಷಬ್ ಶೆಟ್ಟಿ ಪತ್ನಿ. ಪ್ರೀತಿಸಿದಾಕೆಯ ಕೈ ಹಿಡಿದು, ಸುಖಸಂಸಾರ ಸಾಗಿಸುತ್ತಿದ್ದಾರೆ. ಮಾದರಿ ದಂಪತಿಯಾಗಿ ರಿಷಬ್-ಪ್ರಗತಿ ಜೋಡಿ ಗುರುತಿಸಿಕೊಂಡಿದೆ. ಮೇಡ್ ಫಾರ್ ಈಚ್ ಅದರ್ ಅಂತಾರೆ ಅಭಿಮಾನಿಗಳು. ಈ ಪ್ರೇಮಕ್ಷಿಗಳಿಗೆ ರನ್ವಿತ್ ಮತ್ತು ರಾಧ್ಯಾ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ರಾಧ್ಯಾ ಎರಡನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಸೋಮವಾರ ರಾತ್ರಿ ರಿಷಬ್ ಮತ್ತು ಪ್ರಗತಿ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಸುಂದರ ವಿಡಿಯೋ ಹಂಚಿಕೊಂಡಿದ್ದಾರೆ. ಪೋಸ್ಟ್ಗೆ, ''ತೊದಲು ಮಾತು, ಮುದ್ದು ನಗುವಿಂದ ಮನೆಗೆ, ಮನಕೆ ಹರ್ಷ ತರುವ ನಮ್ಮ ಪುಟ್ಟ ರಾಧ್ಯಾಗೆ ಎರಡು ತುಂಬಿದ ಸಂಭ್ರಮ! ಹಾರೈಕೆಗಳಿರಲಿ'' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ರಾಧ್ಯಾಳ ಅಪರೂಪದ ಕ್ಷಣಗಳು ಈ ದೃಶ್ಯದಲ್ಲಿದೆ. ವಿಡಿಯೋ ನೋಡಿದವರು ಸೋ ಕ್ಯೂಟ್ ಅಂತಿದ್ದಾರೆ. ಈ ಎರಡು ವರ್ಷಗಳ ಕೆಲ ಸುಂದರ ಕ್ಷಣಗಳನ್ನೆಲ್ಲ ಒಟ್ಟಿಗೆ ಸೇರಿಸಿ ವಿಡಿಯೋ ಮಾಡಲಾಗಿದೆ.
ಇದನ್ನೂ ಓದಿ:ಮಂಗಳೂರಿಗೆ ಮತ್ತೊಂದು ಸೌಂದರ್ಯ ಪ್ರಶಸ್ತಿ; ಈಶಿಕಾ ಶೆಟ್ಟಿಗೆ 'ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ' ಗರಿ