ಕರ್ನಾಟಕ

karnataka

ETV Bharat / entertainment

ನಟ ಆಶಿಶ್ ರೆಡ್ಡಿ ಆರತಕ್ಷತೆಯಲ್ಲಿ ರಶ್ಮಿಕಾ-ವಿಜಯ್​​: ವಿಡಿಯೋ ನೋಡಿ - Rashmika Mandanna

ನವದಂಪತಿ ಆಶಿಶ್ ಅದ್ವಿತಾ ರಿಸೆಪ್ಷನ್​ ಪಾರ್ಟಿಯಲ್ಲಿ ವಿಜಯ್ ದೇವರಕೊಂಡ ಹಾಗೂ​ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

Vijay - Rashmika
ವಿಜಯ್​ ರಶ್ಮಿಕಾ

By ETV Bharat Karnataka Team

Published : Feb 25, 2024, 2:27 PM IST

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಟಾಲಿವುಡ್​ನಲ್ಲಿ ಬೇಡಿಕೆ ಹೊಂದಿರುವ ಕಲಾವಿದರು. ಇವರಿಬ್ಬರ ಡೇಟಿಂಗ್​ ವದಂತಿ ಕೆಲ ದಿನಗಳಿಂದ ಇದೆಯಾದರೂ, ಅಧಿಕೃತವಾಗಿ ಏನನ್ನೂ ಘೋಷಣೆ ಮಾಡಿಲ್ಲ. ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳೋ ಮುಖೇನ ನೆಟ್ಟಿಗರ ಊಹೆಗೆ ತುಪ್ಪ ಸುರಿಯುತ್ತಾರೆ. ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಈ ನಟರ ವಿಡಿಯೋ ವೈರಲ್​​ ಆಗಿದ್ದು, ನೆಟಿಜನ್ಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಫೆಬ್ರವರಿ 14ರಂದು ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಸೋದರಳಿಯ, ನಟ ಆಶಿಶ್ ರೆಡ್ಡಿ ಅವರು ಅದ್ವಿತಾ ರೆಡ್ಡಿ ಅವರೊಂದಿಗೆ ಹಸೆಮಣೆ ಏರಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದರು. ಫೆಬ್ರವರಿ 23ರಂದು ನಡೆದ ಅದ್ಧೂರಿ ವಿವಾಹ ಆರತಕ್ಷತೆ ಸಮಾರಂಭಕ್ಕೆ ತೆಲುಗು ಚಿತ್ರರಂಗದ ಖ್ಯಾತನಾಮರು ಸಾಕ್ಷಿಯಾಗಿದ್ದರು. ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ, ರಾಮ್ ಪೋತಿನೇನಿ, ನಾಗಾರ್ಜುನ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

ಆಶಿಶ್-ಅದ್ವಿತಾ ಅವರ ಆರತಕ್ಷತೆಗೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಕೂಡ ಆಗಮಿಸಿದ್ದರು. ಮಿನುಗುವ ಸೀರೆಯಲ್ಲಿ ಬಹಳ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಆಗಮಿಸಿದ ಕೆಲ ಸಮಯದ ಬಳಿಕ ನಟ ವಿಜಯ್ ದೇವರಕೊಂಡ ಆಗಮಿಸಿದ್ದಾರೆ. ಲೈಗರ್​ ನಟ ಬ್ಲ್ಯಾಕ್​ ವೇರ್​ನಲ್ಲಿ ಸಖತ್​​ ಹ್ಯಾಡ್ಸಂ ಲುಕ್​ ಕೊಟ್ಟಿದ್ದಾರೆ. ಈ ಇಬ್ಬರೂ ಪ್ರತ್ಯೇಕವಾಗಿ ನವದಂಪತಿಗಳೊಂದಿಗೆ ಸಂತಸದ ಕ್ಷಣ ಕಳೆದು, ದಾಂಪತ್ಯ ಜೀವನದ ನವಾರಂಭಕ್ಕೆ ಶುಭ ಹಾರೈಸಿದ್ದಾರೆ. ಜೊತೆಗೆ, ಫೋಟೋ-ವಿಡಿಯೋಗಳಿಗೂ ಪೋಸ್ ಕೊಟ್ಟಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಗರಿ ಗರಿ ದೋಸೆ, ಫಿಲ್ಟರ್ ಕಾಫಿ ಸವಿದು ಸಂಭ್ರಮಿಸಿದ ನಟ ಕಾರ್ತಿಕ್ ಆರ್ಯನ್

ಸಿನಿಮಾ ವಿಚಾರ ಗಮನಿಸೋದಾದರೆ, ವಿಜಯ್ ದೇವರಕೊಂಡ ಅವರು ಪರಶುರಾಮ್ ಪೆಟ್ಲಾ ಅವರ ಮುಂಬರುವ ಚಿತ್ರ 'ಫ್ಯಾಮಿಲಿ ಸ್ಟಾರ್‌'ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಮೃಣಾಲ್ ಠಾಕೂರ್ ಜೊತೆ ಸ್ಕ್ರೀನ್​ ಶೇರ್​ ಮಾಡಿದ್ದು, ಏಪ್ರಿಲ್ 5 ರಂದು ಬಿಡುಗಡೆಯಾಗಲಿದೆ. ಸಿನಿಮಾ ಆ್ಯಕ್ಷನ್​ ಮತ್ತು ಹಾಸ್ಯಭರಿತವಾಗಿರಲಿದೆ. ಅಲ್ಲದೇ, ವಿಜಯ್ 'ವಿಡಿ 12' ಎಂಬ ತಾತ್ಕಾಲಿಕ ಶೀರ್ಷಿಕೆಯುಳ್ಳ ಸಿನಿಮಾದಲ್ಲಿ ಮೊದಲ ಬಾರಿಗೆ ಪೊಲೀಸ್​ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:'ಪುಷ್ಪ 2' ಚಿತ್ರದ ಅತಿಥಿ ಪಾತ್ರದಲ್ಲಿ ಅಲ್ಲು ಅರ್ಜುನ್​​ ಪುತ್ರ

ಇನ್ನೂ ರಶ್ಮಿಕಾ ಮಂದಣ್ಣ, ಸುಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಪುಷ್ಪ 2: ದಿ ರೂಲ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್, ಫಹಾದ್ ಫಾಸಿಲ್, ಜಗಪತಿ ಬಾಬು ಮತ್ತು ಪ್ರಕಾಶ್ ರಾಜ್ ಸೇರಿದಂತೆ ಹಲವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರದ ಮೊದಲ ಭಾಗದ ದೃಶ್ಯ ಎಲ್ಲಿಗೆ ಪೂರ್ಣಗೊಂಡಿದೆಯೋ ಅಲ್ಲಿಂದ ಸೀಕ್ವೆಲ್​​ ಶುರುವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಪುಷ್ಪ 2 ಆಗಸ್ಟ್ 15 ರಂದು ಚಿತ್ರಮಂದಿರ ಪ್ರವೇಶಿಸಲಿದ್ದು, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇದಲ್ಲದೇ, ದಿ ಗರ್ಲ್‌ಫ್ರೆಂಡ್, ರೈನ್‌ಬೋ, ಚಾವಾ ಮತ್ತು ವಿಡಿ 12ರಲ್ಲಿ ಕೂಡ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details