ಕರ್ನಾಟಕ

karnataka

ETV Bharat / entertainment

ತಿರುಪತಿಯಲ್ಲಿ ರಾಮ್ ಚರಣ್ ಮಗಳ ಫೇಸ್ ರಿವೀಲ್: ಫೋಟೋ - ವಿಡಿಯೋ ವೈರಲ್ - Ram Charan Daughter - RAM CHARAN DAUGHTER

ರಾಮ್ ಚರಣ್ ಹಾಗೂ ಉಪಾಸನಾ ದಂಪತಿಯ ಪುತ್ರಿ ಕ್ಲಿನ್ ಕಾರಾ ಕೊನಿಡೆಲಾಳ ಮುದ್ದು ಮುಖ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.

Ram charan Upasana Daughter
ಕ್ಲಿನ್ ಕಾರಾ ಕೊನಿಡೆಲಾ

By ETV Bharat Karnataka Team

Published : Mar 27, 2024, 2:18 PM IST

Updated : Mar 27, 2024, 3:28 PM IST

ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಕಳೆದ ವರ್ಷ ಪೋಷಕರಾಗಿ ಬಡ್ತಿ ಪಡೆದಿರುವುದು ನಿಮಗೆ ತಿಳಿದಿರುವ ವಿಚಾರವೇ. ಇವರ ಮುದ್ದು ಮಗುವಿಗೆ ಕ್ಲಿನ್ ಕಾರಾ ಕೊನಿಡೆಲಾ ಎಂದು ಹೆಸರಿಡಲಾಗಿದೆ. ಆದರೆ, ಮಗು ಜನಿಸಿ 9 ತಿಂಗಳು ಕಳೆದರೂ ಮಗುವಿನ ಮುಖ ಬಹಿರಂಗವಾಗಿರಲಿಲ್ಲ. ದಂಪತಿ ಮಗಳನ್ನು ಎಲ್ಲೇ ಕರೆದುಕೊಂಡು ಹೋದರೂ, ಮುಖ ಕಾಣದಂತೆ ವಿಶೇಷ ಜಾಗ್ರತೆ ವಹಿಸುತ್ತಿದ್ದರು.

ಆದರೆ, ಇಂದು ರಾಮ್ ಚರಣ್ ಹುಟ್ಟುಹಬ್ಬದ ಸಲುವಾಗಿ, ದಂಪತಿ ಮಗಳೊಂದಿಗೆ ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ದಂಪತಿ ದೇವಾಲಯ ಪ್ರವೇಶಿಸುವ ವೇಳೆ ಕ್ಲಿನ್ ಕಾರಾ ಕೊನಿಡೆಲಾ ಮುಖ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಕ್ಷಣಾರ್ಧದಲ್ಲಿ ಫೋಟೋ - ವಿಡಿಯೋ ವೈರಲ್​ ಆಗಿದೆ. ಮುದ್ದು ಮಗುವಿನ ಮುಖ ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಮಗುವಿನ ಕಣ್ಣುಗಳು ರಾಮ್ ಚರಣ್ ಅವರನ್ನು ಹೋಲುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ರಾಮ್ ಚರಣ್ ಇಂದು ತಮ್ಮ 39ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕುಟುಂಬಸ್ಥರು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ವೆಂಕಟೇಶ್ವರನ ಆಶೀರ್ವಾದ ಪಡೆದಿದ್ದಾರೆ. ನಟನ ಜೊತೆಗೆ ಪತ್ನಿ ಉಪಾಸನಾ ಕಾಮಿನೇನಿ, ಮಗಳು ಕ್ಲಿನ್ ಕಾರಾ ಕೊನಿಡೆಲಾ, ಉಪಾಸನಾ ಅವರ ತಾಯಿ ಶೋಬನಾ ಕಾಮಿನೇನಿ ಸೇರಿದಂತೆ ಕುಟುಂಬಸ್ಥರು ಇದ್ದರು.

ಇದನ್ನೂ ಓದಿ:ದೇವಸ್ಥಾನದಲ್ಲಿ ಮದುವೆಯಾದ ಸಿದ್ಧಾರ್ಥ್ - ಅದಿತಿ ರಾವ್ ಹೈದರಿ ಜೋಡಿ ; ವರದಿ - Aditi Siddharth Marriage

ರಾಮ್ ಚರಣ್ ತಮ್ಮ ಹುಟ್ಟುಹಬ್ಬವನ್ನು ವೆಂಕಟೇಶ್ವರನ ದರ್ಶನದೊಂದಿಗೆ ಪ್ರಾರಂಭಿಸಿದ್ದಾರೆ. ತಿರುಪತಿ ದೇವಸ್ಥಾನದಿಂದ ಫೋಟೋ-ವಿಡಿಯೋಗಳು ಹೊರಬಿದ್ದಿವೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಸ್ಟಾರ್ ಫ್ಯಾಮಿಲಿಯ ವಿಡಿಯೋಗಳು ವೈರಲ್ ಆಗುತ್ತಿದೆ. ದೇವಸ್ಥಾನದಿಂದ ಹೊರಡುವಾಗ ದಂಪತಿ ಕ್ಯಾಮರಾಗಳಿಗೆ ಪೋಸ್ ನೀಡಿದ್ದಾರೆ. ದೇವಸ್ಥಾನದಿಂದ ಹೊರ ಬರುತ್ತಿದ್ದಂತೆ ಇವರನ್ನು ತಂಡದ ಸದಸ್ಯರು ಮತ್ತು ಅಭಿಮಾನಿಗಳು ಸುತ್ತುವರೆದಿದ್ದರು.

ಇದನ್ನೂ ಓದಿ:ನಟ ರಾಮ್​ ಚರಣ್​​ ಜನ್ಮದಿನ: ಪತ್ನಿ, ಪುತ್ರಿಯೊಂದಿಗೆ ತಿರುಪತಿ ದೇಗುಲಕ್ಕೆ ಭೇಟಿ - Ram Charan

ರಾಮ್ ಮತ್ತು ಉಪಾಸನಾ ದೇವಾಲಯಕ್ಕೆ ಆಗಮಿಸುವಾಗ ಸಾಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡರು. ರಾಮ್​ ಚರಣ್​ ರೇಷ್ಮೆ ಕುರ್ತಾ ಮತ್ತು ಧೋತಿ ಧರಿಸಿದ್ದರೆ, ಉಪಾಸನಾ ಗುಲಾಬಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡರು. ದಂಪತಿ ಮುಂಜಾನೆಯೇ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಉಪಾಸನಾ ಮಗಳನ್ನು ತಮ್ಮ ಸೀರೆ ಸೆರಗಿನಿಂದ ಕವರ್ ಮಾಡಿದ್ದರು. ಎಂದಿನಂತೆ, ಎಲ್ಲಿಯೂ ಮಗಳ ಮುಖ ಕಾಣದಂತೆ ನೋಡಿಕೊಂಡರು. ಅದಾಗ್ಯೂ, ಒಂದೆಡೆ ಕಂದಮ್ಮನ ಮುಖ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಸೋ ಕ್ಯೂಟ್ ಅಂತಿದ್ದಾರೆ ಅಭಿಮಾನಿಗಳು.

Last Updated : Mar 27, 2024, 3:28 PM IST

ABOUT THE AUTHOR

...view details