ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಕನ್ನಡ ಸೀಸನ್ 11' ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈಗಾಗಲೇ 100 ದಿನಗಳನ್ನು ಪೂರ್ಣಗೊಳಿಸಿರುವ ಕಾರ್ಯಕ್ರಮದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ರಜತ್ ಕಿಶನ್ ಅವರ ಬೆವರಿಳಿಸಲಾಗಿದೆ. ನನ್ನದು ನೇರನುಡಿ, ಮೋಸ ಮಾಡೋನಲ್ಲ, ಬಕೇಟ್ ಹಿಡಿಯೋನಲ್ಲ ಅನ್ನೋ ರಜತ್ ಕಿಶನ್ ಅವರ ಉಸ್ತುವಾರಿ ಬಗ್ಗೆ ಪ್ರೇಕ್ಷಕರಲ್ಲಿ ಹಲವು ಪ್ರಶ್ನೆಗಳೆದ್ದಿದ್ದವು.
ಇಂದಿನ ಸಂಚಿಕೆಯಲ್ಲಿ ಅದೇ ವಿಚಾರ ಚರ್ಚೆಯಾಗಲಿದೆ. ನಿರೂಪಕ ಸುದೀಪ್ ಅವರು ಉಸ್ತುವಾರಿಯಲ್ಲಿ ಎಡವಿದ ರಜತ್ ಅವರ ಬೆವರಿಳಿಸಿದ್ದು, ಸಪೋರ್ಟ್ ಪಡೆದುಕೊಂಡಿದ್ದರು ಎನ್ನಲಾದ ಭವ್ಯಾ ಕೂಡಾ ಕಣ್ಣೀರಿಟ್ಟಿದ್ದಾರೆ. ಇದರ ಒಂದು ಸುಳಿವನ್ನು 'ವಾರದ ಕಥೆಯಲ್ಲಿ ಕಿಚ್ಚನ ಲೀಡರ್‌ಶಿಪ್ ಲೆಸನ್' ವಾರದ ಕಥೆ ಕಿಚ್ಚನ ಜೊತೆ, ಇಂದು ರಾತ್ರಿ 9ಕ್ಕೆ ಅನ್ನೋ ಕ್ಯಾಪ್ಷನ್ನಡಿ ಅನಾವರಣಗೊಂಡಿರುವ ಪ್ರೋಮೋದಲ್ಲಿ ಕಾಣಬಹುದು.
ಪ್ರೋಮೋದಲ್ಲಿ, 'ರಜತ್ ಅವ್ರು ತಮ್ಮ ಉಸ್ತುವಾರಿ ಜವಾಬ್ದಾರಿಯನ್ನು ಕರೆಟ್ಟಾಗಿ ಮಾಡಿದ್ದಾರೆ' ಅನ್ನೋ ಸ್ಟೇಟ್ಮೆಂಟ್ ಕೊಟ್ಟ ನಿರೂಪಕ ಸುದೀಪ್ ಸ್ಪರ್ಧಿಗಳ ಅಭಿಪ್ರಾಯ ಕೇಳಿದ್ದಾರೆ. ಕಾನ್ಸಟ್ರೇಶನ್ ನಮ್ ಮೇಲೆ ಜಾಸ್ತಿ ಇತ್ತು ಅನ್ಸುತ್ತೆ ಅಂತಾ ಗೌತಮಿ ತಿಳಿಸಿದ್ದಾರೆ. ಮತ್ತೊಂದೆಡೆ ಮಂಜು ಮಾತನಾಡಿ, ಫೇವರಿಸಮ್ ಇತ್ತಣ್ಣ ಎಂದು ತಿಳಿಸಿದ್ದಾರೆ. ಅಸಮಧಾನಗೊಂಡ ರಜತ್ ಕಿಶನ್ ಫೇವರಿಸಂ ನಾನ್ ಯಾವ್ದೇ ಕಾರಣಕ್ಕೂ ಮಾಡಲ್ಲ ಸರ್ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ನನ್ನ ಸಮುದ್ರ ನೀವು, ಶೀಘ್ರವೇ ವಾಪಸ್ಸಾಗಲಿದ್ದೇನೆ': ಅಭಿಮಾನಿಗಳಿಗೆ ಸಿಕ್ತು ಶಿವಣ್ಣನ ಸಂದೇಶ; ಫೋಟೋ ವಿಡಿಯೋಗಳು ವೈರಲ್
ಸುದೀಪ್ ಮಾತನಾಡಿ, ಇಡೀ ವಾರ ಪ್ಯಾಟ್ರನ್ ತರ ಕಾಣ್ಸಿದೆ ರಜತ್ ನಿಮ್ಮ ಬಗ್ಗೆ. ಎವ್ರಿಟೈಮ್ ಭವ್ಯಾ ಈಸ್ ದೇರ್ ಎಂದು ತಿಳಿಸಿದ್ದಾರೆ. ಭವ್ಯಾ ಮಾತನಾಡಿ, ಉಸ್ತುವಾರಿ ಬಳಿ ಎರಡು ಕೈಗಳಲ್ಲಿ ಹಿಡಿಯಬಹುದಾ ಎಂದು ಕೇಳಿದ್ದೇನೆಂದು ತಿಳಿಸಿದ್ದಾರೆ. ಅಸಮಧಾನಗೊಂಡ ಸುದೀಪ್, ನೋ ಯು ಡಿಡ್ನಾಟ್. ನೀವೇನ್ ಯೋಚಿಸ್ತೀರಾ, ನಾನು ಸಾಟರ್ಡೇ ಬರೋಕು ಮುನ್ನ ಎಷ್ಟು ಝೂಮ್ ಹಾಕಿ ನೋಡಿರಲ್ಲ ನಿಮ್ಮುನ್ನ ಎಂದು ತಿಳಿಸುತ್ತಿದ್ದಂತೆ ಭವ್ಯಾ ಕಣ್ಣೀರಿಟ್ಟಿದ್ದಾರೆ. ಉಸ್ತುವಾರಿ ಮಾಡೋ ಮಿಸ್ಟೇಕ್ ಅಲ್ಲಿ ಎಷ್ಟು ಜನ ತಮ್ಮ ಅವಕಾಶ ಕಳೆದುಕೊಳ್ತಾರೆ. ಆ ಲೀಡರ್‌ಶಿಪ್ ಕ್ವಾಲಿಟಿ ಕಾಣಲ್ಲ ರಜತ್ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗಾಯಗೊಂಡ ರಶ್ಮಿಕಾ ಮಂದಣ್ಣ: ಸಿಕಂದರ್ ಶೂಟಿಂಗ್ ಸ್ಥಗಿತ, ವಿಶ್ರಾಂತಿ ಪಡೆಯುತ್ತಿರುವ ನಟಿ
ಇದಕ್ಕೂ ಮುನ್ನ ವೇಗದ ಮಿತಿಮೀರಿ, ಆಟದ ಗತಿ ತಪ್ಪಿಸಿದೋರು ಯಾರು? ಎಂಬ ಕ್ಯಾಪ್ಷನ್ನಡಿ ಪ್ರೋಮೋ ಅನಾವರಣಗೊಂಡಿತ್ತು. ಗೆಲುವಿನ ಗುರಿ ಹತ್ರ ಬರುತ್ತಿದ್ದಂತೆ ವೇಗದ ಮಿತಿ ಮೀರಿ ಆಟದ ಗತಿ ತಪ್ಪಿಸ್ದೋರ್ಯಾರು. ಕಣ್ಮುಚ್ಚಿ ನಿರ್ಧಾರ ತೆಗೆದುಕೊಂಡೋರಾರು ಎಂದು ಸುದೀಪ್ ಪ್ರಶ್ನಿಸಿರೋದನ್ನು ಕಾಣಬುದು. ರಜತ್ ಉಸ್ತುವಾರಿ ಬಗ್ಗೆ ಬಿಗ್ ಬಾಸ್ ಮನೆ ಸೇರಿದಂತೆ ವೀಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅವೆಲ್ಲದ್ದಕ್ಕೂ ಇಂದು ಉತ್ತರ ಅಥವಾ ಸ್ಪಷ್ಟನೆ ಸಿಗಲಿದೆ