ಕರ್ನಾಟಕ

karnataka

ETV Bharat / entertainment

'ಗೂಗ್ಲಿ' ಬೆಡಗಿ ಕೃತಿ ಖರಬಂದ ಮದುವೆ: ಸೋಷಿಲ್​ ಮೀಡಿಯಾದಲ್ಲಿ ಆಮಂತ್ರಣ ಪತ್ರಿಕೆ ವೈರಲ್​​ - Kriti Pulkit Marriage Date

ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಖರಬಂದ ಇದೇ ತಿಂಗಳ 13ರಂದು ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ.

Pulkit Samrat- Kriti Kharbanda
ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಖರಬಂದ

By ETV Bharat Karnataka Team

Published : Mar 6, 2024, 1:32 PM IST

ಚಿತ್ರರಂಗದಲ್ಲಿ ಪ್ರೇಮಪಕ್ಷಿಗಳಾಗಿ ಗುರುತಿಸಿಕೊಂಡಿರುವ ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಖರಬಂದ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿದೆ. ಕೆಲ ಸಮಯದಿಂದ ಡೇಟಿಂಗ್‌ನಲ್ಲಿರುವ ಈ ಜೋಡಿ, ಆಗಾಗ್ಗೆ ಈವೆಂಟ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಆಕರ್ಷಕ​ ಪೋಸ್ಟ್ ಮೂಲಕವೂ ಗಮನ ಸೆಳೆಯುತ್ತಿರುತ್ತಾರೆ. ಪರಸ್ಪರ ಪ್ರೀತಿ-ಕಾಳಜಿ ವ್ಯಕ್ತಪಡಿಸುವ ವಿಚಾರದಲ್ಲೂ ಇಬ್ಬರು ಎಂದಿಗೂ ಹಿಂದೆ ಬಿದ್ದಿಲ್ಲ.

ಪ್ರೀತಿಯಲ್ಲಿರುಲ ಈ ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ. ಈ ಜೋಡಿಯ ವಿವಾಹ ಸಮಾರಂಭದ ಆಮಂತ್ರಣ ಪತ್ರಿಕೆಯೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಇದು ಅಭಿಮಾನಿಗಳೇ ಊಹಿಸಿ ರೆಡಿ ಮಾಡಿರುವ ಮ್ಯಾರೇಜ್​​​ ಇನ್ವಿಟೇಶನ್​ ಕಾರ್ಡ್ ಕೂಡ ಆಗಿರಲೂಬಹುದು ಎಂಬ ಸಂಶಯವೂ ಕಾಡುತ್ತಿದೆ.

ವೈರಲ್​ ಆಗುತ್ತಿರುವ ಆಮಂತ್ರಣ ಪತ್ರಿಕೆ ಪ್ರೀತಿ, ಸಂಗೀತ, ಸಮುದ್ರ, ಸಾಕುಪ್ರಾಣಿಗಳ ಅಂಶಗಳನ್ನೊಳಗೊಂಡಿದೆ. ಪ್ರಣಯ ಪಕ್ಷಿಗಳ ಪ್ರಯಾಣವನ್ನು ಸೊಗಸಾಗಿ ಚಿತ್ರಿಸಿದೆ. ಸಂತೋಷ ಮತ್ತು ಅರ್ಥಪೂರ್ಣ ಕ್ಷಣಗಳಿಂದ ತುಂಬಿದ ಆಚರಣೆ ನಡೆಯಲಿದೆ ಎಂದು ಸುಳಿವು ಇದರಲ್ಲಿದೆ. ಆಮಂತ್ರಣದಲ್ಲಿ ಮಾರ್ಚ್ 13ರಂದು ಮದುವೆ ಎಂಬುದಾಗಿದ್ದು, ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.

ಪುಲ್ಕಿತ್ ಮತ್ತು ಕೃತಿ ಸುಮಾರು ಮೂರು ವರ್ಷಗಳಿಂದ ಡೇಟಿಂಗ್​ನಲ್ಲಿದ್ದಾರೆ. ವೀರೇ ಕಿ ವೆಡ್ಡಿಂಗ್, ತೈಶ್ ಮತ್ತು ಪಾಗಲ್ಪಂತಿ ಸೇರಿದಂತೆ ಕೆಲ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಅಭಿನಯಿಸಿದ್ದಾರೆ. ಪುಲ್ಕಿತ್ ಕೊನೆಯದಾಗಿ 2023ರಲ್ಲಿ ಫುಕ್ರೆ 3ರಲ್ಲಿ ಕಾಣಿಸಿಕೊಂಡರು. ಮೃಘ್​ದೀಪ್​ ಸಿಂಗ್ ಲಂಬಾ ನಿರ್ದೇಶಿಸಿದ ಈ ಚಿತ್ರವನ್ನು ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಮೂಲಕ ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ ನಿರ್ಮಿಸಿದ್ದರು. ಚಿತ್ರದಲ್ಲಿ ವರುಣ್ ಶರ್ಮಾ, ರಿಚಾ ಚಡ್ಡಾ, ಮಂಜೋತ್ ಸಿಂಗ್ ಮತ್ತು ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ಹಸೆಮಣೆ ಏರಲು ಸಜ್ಜಾದ್ರಾ ಕೃತಿ ಖರಬಂದ - ಪುಲ್ಕಿತ್ ಸಾಮ್ರಾಟ್?!

ಫುಕ್ರೆ 3 ಸೆಪ್ಟೆಂಬರ್ 28ರಂದು ಬಿಡುಗಡೆಯಾಗಿ, ಅಭಿಮಾನಿಗಳಿಂದ ಬಹುತೇಕ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿತು. 2013ರಲ್ಲಿ ಫುಕ್ರೆ ಮತ್ತು 2017ರಲ್ಲಿ ಫುಕ್ರೆ ರಿಟರ್ನ್ಸ್ ತೆರೆಕಂಡು ಯಶಸ್ವಿಯಾಗಿತ್ತು. ಇನ್ನೂ ಕೃತಿ ಖರಬಂದ ಅಬಿರ್ ಸೇನ್‌ಗುಪ್ತಾ ಅವರ ಕಾಮಿಡಿ ಸಿನಿಮಾ ರಿಸ್ಕಿ ರೋಮಿಯೋದಲ್ಲಿ ಸನ್ನಿ ಸಿಂಗ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಜಾಹ್ನವಿ ಜನ್ಮದಿನ: ರಾಮ್​​ ಚರಣ್​ ಜೊತೆ ಹೊಸ ಸಿನಿಮಾ- ಅಧಿಕೃತ ಘೋಷಣೆ

ಅನೀಸ್ ಬಾಜ್ಮೀ ನಿರ್ದೇಶನದ 'ಪಾಗಲ್ಪಂತಿ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.​​ ಸೆಟ್‌ನಲ್ಲಿ ಇಬ್ಬರಿಗೆ ಪ್ರೇಮಾಂಕುರವಾಗಿತ್ತು ಎಂದು ಹೇಳಲಾಗಿದೆ. ಇದೇ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ತಮ್ಮ ಪ್ರೋತಿಯನ್ನು ಪರೋಕ್ಷವಾಗಿ ದೃಢಪಡಿಸಿದ್ದರು. ಸಂದರ್ಶನದಲ್ಲಿ, ವದಂತಿಗಳನ್ನುದ್ದೇಶಿಸಿ ಮಾತನಾಡಿದ್ದ ನಟಿ ಕೃತಿ ಖರಬಂದ, "ಇಲ್ಲ, ಅವುಗಳು ಕೇವಲ ವದಂತಿಗಳಲ್ಲ" ಎಂದು ಹೇಳಿಕೊಂಡಿದ್ದರು.

ABOUT THE AUTHOR

...view details