ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಸದ್ಯ ಸರಣಿ ಸಿನಿಮಾಗಳಲ್ಲಿ ಬ್ಯುಸಿ. ಇವರ ಬಳಿ ಹಲವು ಪ್ರೊಜೆಕ್ಟ್ಗಳಿದ್ದು, ಒಂದೊಂದನ್ನೇ ಪೂರ್ಣಗೊಳಿಸುತ್ತಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ತಮ್ಮ ಮುಂಬರುವ ಚಿತ್ರ 'ದಿ ಬ್ಲಫ್' (The Bluff) ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇದೀಗ, ಶೂಟಿಂಗ್ ಸೆಟ್‌ನಲ್ಲಿ ಗಾಯಗೊಂಡಿದ್ದು, ಫೋಟೋ ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಮ್ ಸ್ಟೋರಿ (Priyanka Chopra Instagram) ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಇರುವ ನಟಿ. ವೃತ್ತಿ ಮತ್ತು ವೈಯಕ್ತಿಕ ಜೀವನದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಗಾಗ್ಗೆ ಸಿನಿಮಾ ಅಪ್‌ಡೇಟ್ಸ್ ಕೊಡುತ್ತಿರುತ್ತಾರೆ. ಇದೀಗ ತಮ್ಮ ವೃತ್ತಿಪರ ಸಾಹಸಗಳ ಒಂದು ನೋಟವನ್ನು ಒದಗಿಸಿದ್ದಾರೆ. ಜೊತೆಗೆ, ಮಗಳ ಫೋಟೋವನ್ನೂ ಪೋಸ್ಟ್ ಮಾಡಿದ್ದಾರೆ.
ಇಂದು ಪ್ರಿಯಾಂಕಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನ ಸ್ಟೋರಿ ಸೆಕ್ಷನ್ನಲ್ಲಿ ಕೆಲವು ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಒಂದು ಚಿತ್ರದಲ್ಲಿ ನಟಿ ಗಾಯಗೊಂಡಿರುವುದನ್ನು ಕಾಣಬಹುದು. ಕತ್ತಿನ ಭಾಗದಲ್ಲಿ ಉದ್ದವಾದ ಗಾಯವಾಗಿದೆ. 'ದಿ ಬ್ಲಫ್' ಚಿತ್ರದ ಸೆಟ್‌ನಲ್ಲಿ ಸ್ಟಂಟ್ ಸೀಕ್ವೆನ್ಸ್ ಶೂಟಿಂಗ್ ಮಾಡುವಾಗ ಗಾಯಗೊಂಡಿರುವುದಾಗಿ ನಟಿಯೇ ತಿಳಿಸಿದ್ದಾರೆ.
ಇದಲ್ಲದೇ, ಪ್ರಿಯಾಂಕಾ ತಮ್ಮ ಪ್ರೀತಿಯ ಪುತ್ರಿ ಮಾಲ್ತಿ ಮೇರಿ ಚೋಪ್ರಾ ಜೋನಾಸ್ಳ ಸುಂದರ ಚಿತ್ರವನ್ನೂ ಸಹ ಶೇರ್ ಮಾಡಿದ್ದಾರೆ. ಇದರಲ್ಲಿ, ಮಾಲ್ತಿ ತನ್ನ ಫ್ರೆಂಡ್ ಥಿಯಾನ್ ದತ್ ಜೊತೆ ಕಾಣಿಸಿಕೊಂಡಿದ್ದಾಳೆ. ಮಕ್ಕಳಿಬ್ಬರೂ ಪೇಂಟಿಂಗ್ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾಲ್ತಿ ರೈನ್ಬೋ ಡಿಸೈನ್ ಡ್ರೆಸ್ನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾಳೆ. ಫೋಟೋ ಹಂಚಿಕೊಂಡ ನಟಿ, ರಿಯುನೈಟೆಡ್ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.
ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಮ್ ಸ್ಟೋರಿ (Priyanka Chopra Instagram) ಇದನ್ನೂ ಓದಿ:ಸಲ್ಮಾನ್-ರಶ್ಮಿಕಾ 'ಸಿಖಂದರ್' ಶೂಟಿಂಗ್: ಸೆಟ್ನಿಂದ ಸಲ್ಲು ನ್ಯೂ ಲುಕ್ ರಿವೀಲ್ - Sikandar
ಪ್ರಿಯಾಂಕಾ ಸಿನಿಮಾ ವಿಚಾರ ಗಮನಿಸುವುದಾದರೆ, 'ದಿ ಬ್ಲಫ್' ಚಿತ್ರದಲ್ಲಿ ಸಾಹಸಮಯ ಸೀನ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ 'ಹೆಡ್ಸ್ ಆಫ್ ಸ್ಟೇಟ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ರಿಚರ್ಡ್ ಮ್ಯಾಡೆನ್ ಜೊತೆ ತೆರೆ ಹಂಚಿಕೊಂಡಿರುವ ಆ್ಯಕ್ಷನ್ ಥ್ರಿಲ್ಲರ್ ಸರಣಿ ಸಿಟಾಡೆಲ್ ಏಪ್ರಿಲ್ ಕೊನೆಗೆ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಯ್ತು.
ಇದನ್ನೂ ಓದಿ:'ಕಲ್ಕಿ 2898 ಎಡಿ': ಭರ್ಜರಿ ಪ್ರೀ-ಬುಕಿಂಗ್, ಆರ್ಆರ್ಆರ್ ದಾಖಲೆ ಪುಡಿ ಪುಡಿ - Kalki 2898 AD