ಕರ್ನಾಟಕ

karnataka

ETV Bharat / entertainment

ತಾಯಿ, ಪತಿ, ಪುತ್ರಿ ಜೊತೆ ಅಯೋಧ್ಯೆಗೆ ಭೇಟಿ ಕೊಟ್ಟ ಪ್ರಿಯಾಂಕಾ ಚೋಪ್ರಾ: ವಿಡಿಯೋ - Ram Mandir

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಕುಟುಂಬ ಅಯೋಧ್ಯೆಗೆ ಭೇಟಿ ಕೊಟ್ಟಿದೆ.

Priyanka Chopra and Nick Jonas visits Ayodhya with Daughter Malti Marie
ಅಯೋಧ್ಯೆಗೆ ಭೇಟಿ ಕೊಟ್ಟ ಪ್ರಿಯಾಂಕಾ ಚೋಪ್ರಾ

By ETV Bharat Karnataka Team

Published : Mar 20, 2024, 4:41 PM IST

ಅಯೋಧ್ಯೆಗೆ ಭೇಟಿ ಕೊಟ್ಟ ಪ್ರಿಯಾಂಕಾ ಚೋಪ್ರಾ

ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಸದ್ಯ ತಮ್ಮ ತವರು ದೇಶ ಭಾರತದಲ್ಲಿದ್ದಾರೆ. ನಿನ್ನೆ ಸಂಜೆ ಮುಂಬೈನಲ್ಲಿ ಜರುಗಿದ 'ಪ್ರೈಮ್ ವಿಡಿಯೋ' ಈವೆಂಟ್​ನಲ್ಲಿ ಕಾಣಿಸಿಕೊಂಡ ಬಾಲಿವುಡ್​ - ಹಾಲಿವುಡ್​ ತಾರೆ ಇಂದು ಅಯೋಧ್ಯೆಗೆ ಭೇಟಿ ಕೊಟ್ಟಿದ್ದಾರೆ. ಪತಿ, ಗಾಯಕ ನಿಕ್ ಜೋನಾಸ್, ಪುತ್ರಿ ಮಾಲ್ತಿ ಮೇರಿ ಜೊತೆ ಉತ್ತರ ಪ್ರದೇಶದ ಅಯೋಧ್ಯೆಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಪ್ರಿಯಾಂಕಾ ಅವರ ತಾಯಿ ಡಾ. ಮಧು ಚೋಪ್ರಾ ಕೂಡ ಜೊತೆಗಿದ್ದರು. ಅಯೋಧ್ಯೆಗೆ ಆಗಮಿಸಿದ ಮತ್ತು ಹೊರಟ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್​ ಆಗಿದೆ. ಮಂದಿರದೊಳಗಿನ ಫೋಟೋ ಸಹ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

ರಾಮಮಂದಿರಕ್ಕೆ ಭೇಟಿ ನೀಡುವ ಸಂದರ್ಭ ಪ್ರಿಯಾಂಕಾ ಹಸಿರು ಸೀರೆ ಧರಿಸಿದ್ದರು. ನಿಕ್ ಕುರ್ತಾದಲ್ಲಿ ಸಾಂಪ್ರದಾಯಿಕ ನೋಟ ಬೀರಿದರು. ಜನವರಿಯಲ್ಲಿ ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ಜರುಗಿದ 'ರಾಮನ ಪ್ರಾಣ ಪ್ರತಿಷ್ಠಾಪನಾ' ಸಮಾರಂಭ ಸಂದರ್ಭ ಪ್ರಿಯಾಂಕಾ ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ. ಅಂದು ಅಮಿತಾಭ್ ಬಚ್ಚನ್, ರಣ್​​ಬೀರ್ ಕಪೂರ್, ಆಲಿಯಾ ಭಟ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ರಜನಿಕಾಂತ್, ಅಭಿಷೇಕ್ ಬಚ್ಚನ್, ರಿಷಬ್​ ಶೆಟ್ಟಿ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಪ್ರಿಯಾಂಕಾ ಮತ್ತು ನಿಕ್ ದಂಪತಿ ಕೆಲ ದಿನಗಳಿಂದ ಭಾರತದಲ್ಲಿದ್ದಾರೆ. ಪ್ರಿಯಾಂಕಾ ಗುರುವಾರ ರಾತ್ರಿ ಮಗಳೊಂದಿಗೆ ಆಗಮಿಸಿ, ಮುಂಬೈನಲ್ಲಿ ನಡೆದ ಬ್ಲಗರಿ ಸ್ಟೋರ್ ಲಾಂಚ್‌ ಈವೆಂಟ್​ನಲ್ಲಿ ಭಾಗಿಯಾಗಿದ್ದರು. 'Bvlgari' ಬ್ರ್ಯಾಂಡ್​ನ ಜಾಗತಿಕ ರಾಯಭಾರಿಯಾಗಿ ಪ್ರಿಯಾಂಕಾ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದ ನಂತರ, ಇಶಾ ಅಂಬಾನಿಯವರ ಪ್ರೀ ಹೋಳಿ ಪಾರ್ಟಿಗೆ ಹೋಗಿದ್ದರು. ಒಂದೆರಡು ದಿನಗಳ ನಂತರ ಪತಿ ನಿಕ್ ಜೋನಾಸ್ ಭಾರತಕ್ಕೆ ಆಗಮಿಸಿದರು. ರಿತೇಶ್ ಸಿಧ್ವಾನಿ ಅವರ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಇದಾದ ಬಳಿಕ ಎಕ್ಸೆಲ್ ಎಂಟರ್‌ಟೈನ್‌ಮೆಂಟ್‌ ಜೊತೆ ಪ್ರಿಯಾಂಕಾ ಸಿನಿಮಾ 'ಜೀ ಲೆ ಝರಾ' ಮತ್ತೆ ಸದ್ದು ಮಾಡಲು ಪ್ರಾರಂಭಿಸಿದೆ.

ಇದನ್ನೂ ಓದಿ:'ಇಳಯರಾಜ ಬಯೋಪಿಕ್' ಲಾಂಚ್ ಈವೆಂಟ್: ಧನುಷ್ ಭಾವುಕ; ಶೀಘ್ರದಲ್ಲೇ ಶೂಟಿಂಗ್​ ಶುರು

ಮಂಗಳವಾರ ಸಂಜೆ ಮುಂಬೈನಲ್ಲಿ ನಡೆದ ಅಮೆಜಾನ್ ಪ್ರೈಮ್ ವಿಡಿಯೋ ಕಾರ್ಯಕ್ರಮದಲ್ಲಿ ಕೂಡಾ ಕ್ರಿಯಾಂಕಾ ಚೋಪ್ರಾ ಭಾಗವಹಿಸಿದ್ದರು. ವುಮೆನ್ ಆಫ್ ಮೈ ಬಿಲಿಯನ್ ಚಿತ್ರದ ಬಗ್ಗೆ ಮಾತನಾಡಿದರು. ಈವೆಂಟ್​ನಲ್ಲಿ, ಪ್ಯಾಂಟ್‌ಸೂಟ್‌ ಧರಿಸಿ ಲೇಡಿ ಬಾಸ್​​ನಂತೆ ಕಾಣಿಸಿಕೊಂಡರು. ಇನ್ನೂ, ಸಿನಿಮಾ ವಿಚಾರ ಗಮನಿಸೋದಾದರೆ, ಪ್ರಿಯಾಂಕಾ ಚೋಪ್ರಾ ಅವರು ಜಾನ್ ಸೀನಾ ಮತ್ತು ಇದ್ರಿಸ್ ಎಲ್ಬಾ ಅವರೊಂದಿಗೆ ''ಹೆಡ್ಸ್ ಆಫ್ ಸ್ಟೇಟ್'' ಪ್ರೊಜೆಕ್ಟ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ವಿಜಯ್​​ ದೇವರಕೊಂಡ ಚುಂಬಿಸಿದ ಶಾಹಿದ್​ ಕಪೂರ್​: ಬ್ರೊಮ್ಯಾನ್ಸ್ ವಿಡಿಯೋ ವೈರಲ್​

ABOUT THE AUTHOR

...view details