ಕರ್ನಾಟಕ

karnataka

ETV Bharat / entertainment

9 ನಟಿಯರಿಂದ 'ಮರ್ಫಿ' ಟ್ರೇಲರ್ ಅನಾವರಣ - MURPHY TRAILER

ಮೋಹಕ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ಕೊಟ್ಟಿರುವ 'ಮರ್ಫಿ' ಚಿತ್ರತಂಡ ಟ್ರೇಲರ್ ಮೂಲಕ ನಿರೀಕ್ಷೆ ಇಮ್ಮಡಿಗೊಳಿಸಿದೆ.

Murphy Trailer release event
'ಮರ್ಫಿ' ಟ್ರೇಲರ್ ರಿಲೀಸ್​​ ಈವೆಂಟ್​​ (ETV Bharat)

By ETV Bharat Entertainment Team

Published : Oct 10, 2024, 8:26 PM IST

ಆರಂಭದಿಂದಲೂ ರೋಮಾಂಚಕ ವಾತಾವರಣ ಸೃಷ್ಟಿಸಿಕೊಂಡು ಬಂದಿರುವ ಕನ್ನಡದ ಬಹುನಿರೀಕ್ಷಿತ ಚಿತ್ರ 'ಮರ್ಫಿ'. ಮನಮೋಹಕ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ನೀಡಿರುವ ಚಿತ್ರತಂಡವೀಗ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿದೆ.

ಬೆಂಗಳೂರಿನ ಒರಾಯನ್ ಮಾಲ್​​ನಲ್ಲಿ ಮರ್ಫಿ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಮರ್ಫಿ ಟ್ರೇಲರ್ ಲಾಂಚ್ ಈವೆಂಟ್​ನ ಪ್ರಮುಖ ಆಕರ್ಷಣೆಯಾಗಿದ್ದು, ಚಿತ್ರರಂಗದ 9 ನಟಿಮಣಿಯರು.

ನವರಾತ್ರಿ ಹಬ್ಬದ ಸುಸಂದರ್ಭದಲ್ಲಿ ಚಿತ್ರತಂಡ ಚಂದನವನದ ಚೆಲುವೆಯರಾದ ಪ್ರಿಯಾಂಕಾ ಉಪೇಂದ್ರ, ಅಮೃತಾ ಅಯ್ಯಂಗಾರ್, ರಾಗಿಣಿ ದ್ವಿವೇದಿ, ಖುಷಿ ರವಿ, ಮೇಘನಾ ಗಾಂವಕರ್, ಸಪ್ತಮಿ ಗೌಡ, ಧನ್ಯಾ ರಾಮ್ ಕುಮಾರ್, ರೀಶ್ಮಾ ನಾಣಯ್ಯ, ಅಂಕಿತಾ ಅಮರ್ ಅವರಿಂದ ಟ್ರೇಲರ್ ಲಾಂಚ್ ಮಾಡಿಸಿದೆ. ಎಲ್ಲ ನಟಿಯರು ಮರ್ಫಿ ಚಿತ್ರದ ಯಶಸ್ಸಿಗೆ ಹಾರೈಸಿದರು.

'ಮರ್ಫಿ' ಟ್ರೇಲರ್ ರಿಲೀಸ್​​ ಈವೆಂಟ್​​ (ETV Bharat)

ಟ್ರೇಲರ್ ಬಿಡುಗಡೆ ಬಳಿಕ ನಾಯಕ ಪ್ರಭು ಮುಂಡ್ಕುರ್ ವರ್ಮಾ ಮಾತನಾಡಿ, "ಕೆಲವೊಮ್ಮೆ ನಟರಿಗೆ ಒಂದು ಕಥೆ ಕಾಡುತ್ತಿರುತ್ತದೆ. ಇದೇ ರೀತಿಯ ಕಥೆಯೊಂದನ್ನು ಮಾಡಬೇಕು ಅನಿಸುತ್ತದೆ. ಮರ್ಫಿ ಕಥೆ ಸಹ ನನ್ನನ್ನು ತುಂಬಾನೇ ಕಾಡಿತ್ತು. ಚಿತ್ರದ ಟ್ರೇಲರ್ ಲಾಂಚ್ ಮಾಡಿದ್ದೇವೆ. 9 ನಟಿಯರು ನನ್ನ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಮರ್ಫಿ ಜನರಿಗೆ ಒಂದೊಳ್ಳೆ ಸಿನಿಮ್ಯಾಟಿಕ್ ಫೀಲ್ ಕೊಡುತ್ತದೆ. ಇದಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ. ಅದ್ಭುತ ಟೆಕ್ನಿಕಲ್ ಟೀಂ ನಮ್ಮ ಚಿತ್ರದಲ್ಲಿ ದುಡಿದಿದೆ. ಪ್ರತಿಯೊಬ್ಬರು ಈ ಸಿನಿಮಾ ನೋಡಿ ಬೆಂಬಲಿಸಿ" ಎಂದರು.

'ಮರ್ಫಿ' ಟ್ರೇಲರ್ ರಿಲೀಸ್​​ ಈವೆಂಟ್​​ (ETV Bharat)

ನಿರ್ದೇಶಕರಾದ ಬಿಎಸ್​​ಪಿ ವರ್ಮಾ ಮಾತನಾಡಿ, "ಅದ್ಭುತ ತಂಡದ ಜೊತೆ ಕೆಲಸ ಮಾಡಿರುವ ಖುಷಿ ನನ್ನಲ್ಲಿದೆ. ಇದೇ 18ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ನಿಮ್ಮ ಆಶೀರ್ವಾದ ನಮ್ಮ ಚಿತ್ರದ ಮೇಲೆ ಇರಲಿ" ಎಂದು ಹೇಳಿದರು.

ಇದನ್ನೂ ಓದಿ:ಸಸ್ಪೆನ್ಸ್, ಥ್ರಿಲ್ಲರ್ ಕಥೆಯ 'ಸಂಗೀತ ಸಂತೋಷ' ಸಿನಿಮಾ ಟ್ರೇಲರ್ ರಿಲೀಸ್ ಮಾಡಿದ ಚಂದ್ರಶೇಖರ ಶಿವರಾಧ್ಯ ಸ್ವಾಮೀಜಿ

ಪ್ರೀತಿ ಭಾವನೆ, ನೆನಪುಗಳ ಸುತ್ತ ಸಾಗುವ ರೋಮ್ಯಾಂಟಿಕ್ ಪ್ರೇಮಕಥಾಹಂದರಕ್ಕೆ ಬಿಎಸ್​ಪಿ ವರ್ಮಾ ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರಭು ಮುಂಡ್ಕುರ್ ವರ್ಮಾ ಚಿತ್ರಕಥೆ ಬರೆಯುವುದರ ಜೊತೆಗೆ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ರೋಶಿನಿ ಪ್ರಕಾಶ್, ಇಳಾ ವೀರಮಲ್ಲ ಜೊತೆಗೆ ದತ್ತಣ್ಣ, ಅಶ್ವಿನಿ ರಾವ್ ಪಲ್ಲಕ್ಕಿ, ಮಹಾಂತೇಶ್ ಹೀರೇಮಠ್, ರಾಮಪ್ರಸಾದ್ ಬಾಣಾವರ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ನವೀನ್ ರೆಡ್ಡಿ, ಪ್ರಭು, ವರ್ಮಾ ಸಂಭಾಷಣೆ ಬರೆದಿದ್ದು, ಮಹೇಶ ತೊಗಟ ಸಂಕಲನ, ಆದರ್ಶ ಆರ್ ಕ್ಯಾಮರಾ ಹಿಡಿದ್ದಾರೆ.

'ಮರ್ಫಿ' ಟ್ರೇಲರ್ ರಿಲೀಸ್​​ ಈವೆಂಟ್​​ (ETV Bharat)

ಇದನ್ನೂ ಓದಿ:'ತಮಟೆ' ಚಿತ್ರದ ಮೂಲಕ ಶೋಷಿತ ಜನಾಂಗದ ಬದುಕು ಅನಾವರಣ: ಡಿಸಿಎಂ ಡಿ.ಕೆ.ಶಿವಕುಮಾರ್

ಸೋಮಣ್ಣ ಟಾಕೀಸ್ ಮತ್ತು ವರ್ಣಸಿಂಧು ಸ್ಟುಡಿಯೋಸ್ ಬ್ಯಾನರ್ ನಡಿ ರಾಮ್ ಕೋ ಸೋಮಣ್ಣ ಹಾಗೂ ಬಿಎಸ್​ಪಿ ವರ್ಮಾ ಮರ್ಫಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮರ್ಫಿಯಲ್ಲಿ ಏಳು ಹಾಡುಗಳಿದ್ದು, ಅರ್ಜುನ್ ಜನ್ಯ, ರಜತ್ ಹೆಗ್ಡೆ, ಕೀರ್ತನ್ ಹೊಳ್ಳ ಮತ್ತು ಸಿಲ್ವೆಸ್ಟರ್ ಪ್ರದೀಪ್ ಸಂಗೀತ ನಿರ್ದೇಶನ ಮಾಡಿದ್ದು, ಸಿಲ್ವೆಸ್ಟರ್ ಪ್ರದೀಪ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.

ಮರ್ಫಿ ಸಿನಿಮಾ ಅಕ್ಟೋಬರ್ 18ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಡಾಲಿ ಧನಂಜಯ್, ಪನ್ನಗಭರಣ ಚಿತ್ರ ನೋಡಿ ಇಷ್ಟಪಟ್ಟಿದ್ದು, ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್, ರಕ್ಷಿತಾ ಪ್ರೇಮ್, ನಿರ್ದೇಶಕ ಹೇಮಂತ್ ಎಂ.ರಾವ್ ಮತ್ತು ರಾಜ್ ಬಿ.ಶೆಟ್ಟಿ ಮರ್ಫಿ ಟ್ರೇಲರ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details