ಕರ್ನಾಟಕ

karnataka

ETV Bharat / entertainment

'ಬಘೀರ'​ ಸೇರಿ ಒಟಿಟಿ ಪ್ರವೇಶಿಸಿದ ಕನ್ನಡದ ಹಿಟ್​​ ಚಿತ್ರಗಳಿವು - OTT RELEASE THIS WEEK

ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಂಡ ಬಘೀರ ಒಟಿಟಿಯಲ್ಲಿ ಕನ್ನಡ, ತೆಲುಗು ಸೇರಿ ತಮಿಳು ಮತ್ತು ಮಲಯಾಳಂನಲ್ಲೂ ಸ್ಟ್ರೀಮಿಂಗ್​ ಆಗುತ್ತಿದೆ.

Bagheera poster
ಬಘೀರ ಪೋಸ್ಟರ್ (Film Poster)

By ETV Bharat Entertainment Team

Published : Nov 22, 2024, 2:06 PM IST

ಚಂದನವನದಲ್ಲಿ ಕಂಟೆಂಟ್​ ಓರಿಯೆಂಟೆಡ್ ಸಿನಿಮಾಗಳ ಜೊತೆಗೆ​ ಪ್ಯಾನ್ ಇಂಡಿಯಾ ಸಂಸ್ಕೃತಿಯೂ ಹೆಚ್ಚಾಗಿದೆ. ಈ ಬೆನ್ನಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸ್ಟಾರ್ ಸಿನಿಮಾಗಳಿಂದ ಹಿಡಿದು ಹೊಸಬರ ಚಿತ್ರಗಳೂ ಕೂಡಾ ಒಂದೇ ತಿಂಗಳಲ್ಲಿ ಒಟಿಟಿ ಪ್ರವೇಶಿಸುತ್ತಿದೆ. ಈ ವಾರ, ಇತ್ತೀಚೆಗೆ ಒಟಿಟಿ ಪ್ರವೇಶಿಸಿದ ಕನ್ನಡದ ಹಿಟ್​​ ಚಿತ್ರಗಳ ಜೊತೆಗೆ ಒಟಿಟಿ ಪ್ರವೇಶಿಸಲು ಸಜ್ಜಾಗಿರುವ ಸಿನಿಮಾಗಳ ಮಾಹಿತಿ ಇಲ್ಲಿದೆ.

ಬಘೀರ: ಮನರಂಜನಾ ಕ್ಷೇತ್ರಕ್ಕೆ ಸೂಪರ್ ಹಿಟ್​ ಸಿನಿಮಾಗಳನ್ನು ನೀಡಿರುವ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಬಘೀರ ಕಳೆದ ಅಕ್ಟೋಬರ್​ 31ರಂದು ಬಿಡುಗಡೆ ಆಯಿತು. ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡ ಒಂದೇ ತಿಂಗಳೊಳಗೆ ಒಟಿಟಿ ಪ್ರವೇಶಿಸಿದೆ. ಕಳೆದ ದಿನವಷ್ಟೇ ಹೊಂಬಾಳೆ ಫಿಲ್ಮ್ಸ್ ಈ ಘೋಷಣೆ ಮಾಡಿದೆ. ರೋರಿಂಗ್​ ಸ್ಟಾರ್ ಶ್ರೀಮುರುಳಿ ಮತ್ತು ಚೆಲುವೆ ರುಕ್ಮಿಣಿ ವಸಂತ್​ ಅಭಿನಯದ ಸಿನಿಮಾ 'ನೆಟ್​ಫ್ಲಿಕ್ಸ್​​'ನಲ್ಲಿ ಪ್ರಸಾರ ಪ್ರಾರಂಭಿಸಿದೆ. ಚಿತ್ರಮಂದಿರಗಳಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಂಡ ಬಘೀರ ಒಟಿಟಿಯಲ್ಲಿ ಕನ್ನಡ, ತೆಲುಗು ಸೇರಿ ತಮಿಳು ಮತ್ತು ಮಲಯಾಳಂನಲ್ಲೂ ಸ್ಟ್ರೀಮಿಂಗ್​ ಆಗುತ್ತಿದೆ.

ಭೈರತಿ ರಣಗಲ್​: ಕರುನಾಡ ಚಕ್ರವರ್ತಿ ಶಿವರಾಜ್​​​ಕುಮಾರ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ ''ಭೈರತಿ ರಣಗಲ್'' ನವೆಂಬರ್ 15ರಂದು ಬಿಡುಗಡೆ ಆಗಿ ಜಯಭೇರಿ ಬಾರಿಸಿದೆ. ಚಿತ್ರತಂಡ ಇತ್ತೀಚೆಗಷ್ಟೇ ಸಕ್ಸಸ್ ಮೀಟ್​ ಆಯೋಜಿಸಿತ್ತು. ಸಿನಿಮಾ ಅದ್ಯಾವಾಗ ಒಟಿಟಿ ಪ್ರವೇಶಿಸಲಿದೆ ಎಂದು ಅಭಿಮಾನಿಗಳು ಕಾತರರಾಗಿದ್ದಾರೆ. ಆದ್ರೆ ಚಿತ್ರತಂಡದಿಂದ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಝೀ5 ನಲ್ಲಿ ಅತಿ ಶೀಘ್ರದಲ್ಲೇ ಸ್ಟ್ರೀಮ್​​ ಆಗಲಿದೆ. ಡಿಸೆಂಬರ್​ ಕೊನೆಗೆ ಒಟಿಟಿ ಪ್ರವೇಶಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:'ಹುಡುಗೀರ ಕೈ ಹಿಡಿದು ಓಡಾಡಿದಷ್ಟು ಸುಲಭವಲ್ಲ ಬಿಗ್​ ಬಾಸ್​​ ಗೆಲ್ಲೋದು': ಇಂಥದ್ದೊಂದು ಹೇಳಿಕೆ ಬಂದಿದ್ದೇಕೆ?

ಮಾರ್ಟಿನ್​​: ಸ್ಯಾಂಡಲ್​ವುಡ್​ನ ಬಹುಬೇಡಿಕೆ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯಭೂಮಿಕೆಯ 'ಮಾರ್ಟಿನ್' ಸಿನಿಮಾವನ್ನು ಪ್ರೈಮ್​ ವಿಡಿಯೋದಲ್ಲಿ ವೀಕ್ಷಿಸಬಹುದಾಗಿದೆ. ಎ.ಪಿ.ಅರ್ಜುನ್​ ನಿರ್ದೇಶನದ ಈ ಚಿತ್ರ ಅಕ್ಟೋಬರ್​​ 11ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ.

ಇದನ್ನೂ ಓದಿ:ಆರಂಭದಲ್ಲೇ ರಜತ್​, ಶೋಭಾ ಆರ್ಭಟ: ಉಗ್ರಂ ಮಂಜು ವಿರುದ್ಧ ಆಕ್ರೋಶ; ಬಿಗ್​ ಬಾಸ್​ ಬಗ್ಗೆ ನಿಮ್ಮ ಅಭಿಪ್ರಾಯವೇನು

ಇಬ್ಬನಿ ತಬ್ಬಿದ ಇಳೆಯಲಿ: ವಿಹಾನ್, ಅಂಕಿತಾ ಅಮರ್ ಮತ್ತು ಮಯೂರಿ ನಟರಾಜ್ ಅಭಿನಯದ ಸುಂದರ ಪ್ರೇಮಕಾವ್ಯ ಇಬ್ಬನಿ ತಬ್ಬಿದ ಇಳೆಯಲಿ ಈ ತಿಂಗಳ ಆರಂಭದಲ್ಲಿ ಒಟಿಟಿ ವೇದಿಕೆ ಪ್ರೈಮ್​ ವಿಡಿಯೋ ತಲುಪಿದೆ. ರಕ್ಷಿತ್ ಶೆಟ್ಟಿ ನಿರ್ಮಾಣದ ಈ ಚಿತ್ರ ಸೆಪ್ಟೆಂಬರ್ 5ರಂದು ಚಿತ್ರಮಂದಿರ ಪ್ರವೇಶಿಸಿ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ. ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ಪರಂವಃ ಸ್ಟುಡಿಯೋಸ್​ ಮೂಲಕ ನಿರ್ಮಾಣಗೊಂಡ ಈ ಚಿತ್ರಕ್ಕೆ ಚಂದ್ರಜಿತ್ ಬೆಳ್ಳಿಯಪ್ಪ ಆ್ಯಕ್ಷನ್​ ಕಟ್​ ಹೇಳಿದ್ದರು.

ABOUT THE AUTHOR

...view details