ಕರ್ನಾಟಕ

karnataka

ETV Bharat / entertainment

ಹೊಸಬರ ಮರ್ಡರ್ ಮಿಸ್ಟರಿ 'ಆಪರೇಷನ್ ಡಿ' ಸಿನಿಮಾಗೆ ಸಿಕ್ತು ಆ್ಯಕ್ಷನ್ ಪ್ರಿನ್ಸ್ ಬಲ - Operation D Teaser - OPERATION D TEASER

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು 'ಆಪರೇಷನ್ ಡಿ' ಚಿತ್ರದ ಟೀಸರ್ ಅನಾವರಣಗೊಳಿಸಿದ್ದಾರೆ.

Dhruva Sarja supports Operation D
'ಆಪರೇಷನ್ ಡಿ' ತಂಡಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ (ETV Bharat)

By ETV Bharat Entertainment Team

Published : Oct 7, 2024, 4:35 PM IST

ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಕಂಟೆಂಟ್ ಜೊತೆಗೆ ಟ್ಯಾಲೆಂಟೆಡ್ ನಟರು ಹಾಗು ನಿರ್ದೇಶಕರ ಆಗಮನ ಮುಂದುವರಿದಿದೆ. ಇದೀಗ 'ಆಪರೇಷನ್ ಡಿ' ಅನ್ನೋ ಕ್ಯಾಚೀ ಟೈಟಲ್ ಇಟ್ಟುಕೊಂಡು ಹೊಸಬರ ಟೀಂ ಗಾಂಧಿನಗರ ಪ್ರವೇಶಿಸಿದೆ.

ಯುವ ನಿರ್ದೇಶಕ ತಿರುಮಲೇಶ್ ವಿ. ನಿರ್ದೇಶನದ ಆಪರೇಷನ್ ಡಿ ಬಹುತೇಕ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಸ್ಯಾಂಡಲ್​ವುಡ್​ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರದ ಟೀಸರ್ ರಿಲೀಸ್ ಮಾಡಿ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಇತ್ತೀಚೆಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿತು.

ನಿರ್ದೇಶಕ ತಿರುಮಲೇಶ್ ವಿ. ಮಾತನಾಡಿ, "ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾರಿಗೆ ಧನ್ಯವಾದಗಳು. ಆಪರೇಷನ್ ಡಿ ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥೆ ಆಧರಿಸಿದ ಚಿತ್ರ. ಮರ್ಡರ್ ಮಿಸ್ಟರಿ ಆದರೂ, ಒಂದು ಕಡೆಯೂ ರಕ್ತ ಕಾಣುವುದಿಲ್ಲ ಹಾಗೂ ಆ್ಯಕ್ಷನ್ ಸನ್ನಿವೇಶಗಳಿಲ್ಲ. 2018 ಹಾಗೂ 19ರಲ್ಲಿ ಹುಟ್ಟಿದ ಈ ಕಾಲ್ಪನಿಕ ಕಥೆ, 2022ರಲ್ಲಿ ಸಿನಿಮಾ ರೂಪ ಪಡೆದುಕೊಂಡಿತ್ತು. ನನ್ನ ಕಥೆಯನ್ನು ಸಿನಿಮಾವಾಗಿಸಲು ಕುಟುಂಬದವರು ಹಾಗೂ ಮಿತ್ರರು ಸಹಕಾರಿಯಾದರು" ಎಂದರು.

'ಆಪರೇಷನ್ ಡಿ' ತಂಡ (ETV Bharat)

ಮುಂದುವರೆದು, "ಟೀಸರ್​ನಲ್ಲಿ ಬರುವ ನಾರಾಯಣ, ಲಕ್ಷ್ಮೀ ಹಾಗೂ ನಾರದ ಪಾತ್ರಗಳಿಗೆ ನಿರ್ದೇಶಕ, ನಟ ಶ್ರೀನಿ, ನಟಿ ಸಂಗೀತಾ ಭಟ್ ಹಾಗೂ ಸುದರ್ಶನ್ ರಂಗಪ್ರಸಾದ್ ಧ್ವನಿ ನೀಡಿದ್ದಾರೆ. ಸಿರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್​ನಲ್ಲಿ ಬಿಡುಗಡೆಯಾಗಿರುವ ಟೀಸರ್​​ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಚಿತ್ರ ಚೆನ್ನಾಗಿ ಮೂಡಿಬರಲು ಚಿತ್ರತಂಡದವರ ಪಾಲು ಹೆಚ್ಚಿದೆ" ಎಂದು ಹೇಳಿದರು.‌

ಇದನ್ನೂ ಓದಿ:ಅರೆಮಲೆನಾಡಿನ ಕಾಡಲ್ಲೊಂದು ಪ್ರೇಮಕಥೆ, ಅರಣ್ಯದಲ್ಲೇ ಚಿತ್ರೀಕರಣ: ಯಶ್ ಶೆಟ್ಟಿ 'ಜಂಗಲ್ ಮಂಗಲ್'ಗೆ ಸಿಂಪಲ್ ಸುನಿ ಸಾಥ್ - Jungle Mangal

ರುದ್ರೇಶ್ ಬೂದನೂರು, ಸುಹಾಸ್ ಆತ್ರೇಯ, ವಿನೋದ್ ದೇವ್, ಸ್ನೇಹ ಭಟ್, ಇಂಚರ ಭರತ್ ರಾಜ್, ಮಹೇಶ್ ಎಸ್ ಕಲಿ, ಶ್ರೀಧರ್, ಪೃಥ್ವಿ ಬನವಾಸಿ, ಶಿವಾನಂದ್, ಸಂಚಯ ನಾಗರಾಜ್, ವೆಂಕಟಾಚಲ, ಶಿವಮಂಜು, ಕ್ರೇಜಿ ನಾಗರಾಜ್, ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:'ರೇಷ್ಮೆ ಬೆಳೆಗಾರನಾಗಿ ಅಭಿನಯಿಸಿರೋದು ಖುಷಿ ಕೊಟ್ಟಿದೆ': ಸಂಜು ವೆಡ್ಸ್ ಗೀತಾ 2 ನಟ ಶ್ರೀನಗರ ಕಿಟ್ಟಿ - Habibi song

ಗೀತರಚನೆಕಾರ ಕೆಂಪಗಿರಿ ಹಾಗೂ ತಿರುಮಲೇಶ್ ಹಾಡುಗಳನ್ನು ಬರೆದಿದ್ದು, ನಾಲ್ಕು ಹಾಡುಗಳಿವೆ. ವಿಕ್ರಮ್ ಶ್ರೀಧರ್ ಸಂಕಲನ ನಿರ್ವಹಿಸಿದ್ದಾರೆ. ಕಾರ್ತಿಕ್ ಪ್ರಸಾದ್ ಕ್ಯಾಮರಾ ವರ್ಕ್, ಜೈಹರಿಪ್ರಸಾದ್ ನೃತ್ಯ ಸಂಯೋಜಿಸಿದ್ದಾರೆ. ಅದ್ವಿತ ಫಿಲಂ ಫ್ಯಾಕ್ಟರಿ ಹಾಗೂ ಮಸ್ಕ್ಯುಲರ್ ಗ್ರೂಪ್ ಲಾಂಛನದಲ್ಲಿ ಭಾರ್ಗವಿ ಮುರಳಿ ಹಾಗೂ ರಂಗನಾಥ್ ಬಿ. ನಿರ್ಮಿಸಿದ್ದಾರೆ. ಸದ್ಯದಲ್ಲೇ ಚಿತ್ರ ಸೆನ್ಸಾರ್​ಗೆ ಹೋಗಲಿದ್ದು, ವರ್ಷದ ಕೊನೆಯಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

ABOUT THE AUTHOR

...view details