ETV Bharat / state

ನಕ್ಸಲರನ್ನು ಸಿಎಂ ಕಚೇರಿಯಲ್ಲಿ ಶರಣಾಗತಿ ಮಾಡಿಸಿದ್ದು ಸರಿಯಲ್ಲ: ನಿವೃತ್ತ ಐಪಿಎಸ್ ಅಧಿಕಾರಿ ಬೇಸರ - JYOTI PRAKASH MIRJI REACTION

ನಾವು ಕೂಡ ಈ ಹಿಂದೆ ಅನೇಕ ನಕ್ಸಲರನ್ನು ಅರೆಸ್ಟ್​ ಮಾಡಿದ್ದೇವೆ. ಆದರೆ, ಯಾರನ್ನೂ ಮಂತ್ರಿಗಳ ಹತ್ತಿರ ಕರೆದುಕೊಂಡು ಹೋಗುವ ಕೆಲಸ ಮಾಡಿಲ್ಲ ಎಂದು ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಜ್ಯೋತಿ ಪ್ರಕಾಶ್​ ಮಿರ್ಜಿ ಹೇಳಿದರು.

Retired IPS officer Jyothi Prakash Mirji
ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್​ ಮಿರ್ಜಿ (ETV Bharat)
author img

By ETV Bharat Karnataka Team

Published : Jan 11, 2025, 12:22 PM IST

ಧಾರವಾಡ: "ನಕ್ಸಲರನ್ನು ಸರೆಂಡರ್ ಮಾಡಿದ್ದು ಒಳ್ಳೆಯ ಕೆಲಸ. ಇಂಟಲಿಜೆನ್ಸ್ ನಿಂಬಾಳ್ಕರ್ ಅವರು ಅದರಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಸಿಎಂ ಗೃಹ ಕಚೇರಿಯಲ್ಲಿ ಅವರನ್ನು ಸರೆಂಡರ್‌ ಮಾಡಿಸಿದ್ದು ಸರಿಯಲ್ಲ. ಪೊಲೀಸ್ ಠಾಣೆ ಅಥವಾ ಕೋರ್ಟ್​ನಲ್ಲಿ ಸೆರೆಂಡರ್ ಮಾಡಿಸಬೇಕಿತ್ತು" ಎಂದು ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್​ ಮಿರ್ಜಿ ಹೇಳಿದರು.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಿಎಂ ಕಚೇರಿಯಲ್ಲಿ ಮಾಡಿ, ಅದರಲ್ಲಿ ಪಾಲಿಟಿಕ್ಸ್ ಮಾಡಿ ಲಾಭ ಪಡೆಯೋದು ಸರಿಯಲ್ಲ. ಈ ರೀತಿ ಬಹಳಷ್ಟು ತಪ್ಪು ಮಾಡಿಕೊಂಡು ಹೊರಟಿದ್ದಾರೆ. ನಾವು ಹಿಂದೆ ಎಷ್ಟೋ ಟೆರರಿಸ್ಟ್​ಗಳನ್ನು ಅರೆಸ್ಟ್ ಮಾಡಿದ್ದೇವೆ. ಆಗ ಠಾಣೆಯಲ್ಲಿ ಅವರ ತಂದೆ ತಾಯಿಗಳಿಗೆ ಭೇಟಿ ಮಾಡಿ ಮಾತಾಡಲು ಅವಕಾಶ ಕೊಟ್ಟಿದ್ದೆವು. ಆದರೆ, ಅವರನ್ನು ಮಂತ್ರಿಗಳ ಹತ್ತಿರ ಗೃಹ ಸಚಿವರ ಬಳಿ ಕರೆದುಕೊಂಡು ಹೋಗುವ ಕೆಲಸ ಮಾಡಿಲ್ಲ" ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಿರ್ಜಿ ಅಸಮಾಧಾನ ವ್ಯಕ್ತಪಡಿಸಿದರು.

ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್​ ಮಿರ್ಜಿ (ETV Bharat)

"ಈಗ ಸರ್ಕಾರ ಸೆರೆಂಡರ್ ಮಾಡಿಸಿದ್ದು ಸರಿ ಇದೆ. ಆದರೆ ಅದನ್ನು ಪ್ರಚಾರಕ್ಕೆ ಮಾಡಿದ್ದು ತಪ್ಪು ಸಂದೇಶ ಕೊಟ್ಟಿದೆ. ಅದರ ಕ್ರೆಡಿಟ್ ಪಡೆಯಲು ಹೋಗಿ ಅದು‌ ಉಲ್ಟಾ ಆಗಿದೆ. ನಕ್ಸಲರ ಹಾಗೂ ಸರ್ಕಾರದ ನಡುವೆ ಏನು ಮಾತುಕತೆ ಆಗಿದೆ‌ಯೋ ಗೊತ್ತಿಲ್ಲ. ಪರಿಹಾರ ಏನು ಕೊಡಬೇಕು ಎಂದು ಮಧ್ಯಸ್ಥಿಕೆ ವಹಿಸಿದವರಿಗೆ ಗೊತ್ತಿರುತ್ತದೆ. ಅದಾದ ನಂತರವು ಅವರು ಸೆರೆಂಡರ್ ಆದ ಮೇಲೆ ಏನೇ ಕೊಟ್ಟರೂ ತಪ್ಪಲ್ಲ. ಇದು ಇಂಟೆಲಿಜೆನ್ಸ್ ಆಪರೇಷನ್, ಅದರ ಚೀಫ್ ನಿಂಬಾಳ್ಕರ್ ನಕ್ಸಲರನ್ನು ವಿಧಾನಸೌಧದಲ್ಲಿ ಕೂಡಾ ಸೆರೆಂಡರ್‌ ಮಾಡಿಸಬಹುದಿತ್ತು. ಒಂದೊಂದಕ್ಕೆ ಒಂದೊಂದು ಸ್ಥಾನ ಇರುತ್ತದೆ. ಹೆಚ್ಚಾಗಿ ಜಿಲ್ಲೆಯಲ್ಲಿ ಸೆರೆಂಡರ್ ಆಗಬೇಕು. ಜಿಲ್ಲಾಧಿಕಾರಿ ಕಡೆ ಹೋಗಿ ಸೆರೆಂಡರ್ ಆಗಬೇಕು. ಜಿಲ್ಲಾಧಿಕಾರಿ ಜಿಲ್ಲೆಗೆ ಧಣಿ. ಸಿಎಂ ಅಥವಾ ಗೃಹ ಸಚಿವರ ಪ್ರಯತ್ನದಿಂದ ಹೀಗಾಗಿದೆಯೋ ಗೊತ್ತಿಲ್ಲ" ಎಂದರು.

"ಕೆಲ ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್ ಜೊತೆ ನಂಟು ಇದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಇದನ್ನು ಹೇಳಿದ್ದಾರೆ ಎಂದರೆ ನಿಜಾನೇ ಇರಬೇಕು. ಅವರು ಹೇಳಿದ್ದಾರೆ ಎಂದರೆ ನಾವು ಅದು ಸರಿ ಎಂದೇ ಅನ್ನಬೇಕಲ್ಲ. ಪಕ್ಷ ಬಿಡುವುದು, ವಾಪಸ್ ಬರುವುದು ಸತತ ಇದ್ದೇ ಇರುತ್ತದೆ" ಎಂದು ಜೆಡಿಎಸ್‌ ಉಪಾಧ್ಯಕ್ಷರು ಹೇಳಿದರು.

ಇದನ್ನೂ ಓದಿ: ನಕ್ಸಲರು ಸಿಎಂ ಕಚೇರಿಗೆ ಬಂದು ಶರಣಾಗುವುದರಲ್ಲಿ ತಪ್ಪೇನಿದೆ : ಗೃಹ ಸಚಿವ ಪರಮೇಶ್ವರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.