ETV Bharat / entertainment

ಕಿಚ್ಚನ ಬುದ್ಧಿಮಾತು ತಲೆಗತ್ತಲೇ ಇಲ್ಲ: ಗೌತಮಿಯಿಂದಲೂ ಕಳಪೆ ಸ್ವೀಕರಿಸಿ ಜೈಲಿಗೋದ ಉಗ್ರಂ ಮಂಜು - UGRAM MANJU

ಆರಂಭದಲ್ಲಿ ಟಫೆಸ್ಟ್ ಕಂಟಸ್ಟೆಂಟ್ ಎನಿಸಿಕೊಂಡಿದ್ದ ಉಗ್ರಂ ಮಂಜು ಅವರಿಗ ಕಳಪೆ ಪಟ್ಟ ಸ್ವೀಕರಿಸಿದ್ದಾರೆ.

Ugram Manju
ಉಗ್ರಂ ಮಂಜು (Photo: Bigg boss team)
author img

By ETV Bharat Entertainment Team

Published : 4 hours ago

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಬಿಗ್​ ಬಾಸ್​ ಫಿನಾಲೆ ಸಮೀಪಿಸುತ್ತಿದೆ. ಈ ವಾರ ಟಿಕೆಟ್​ ಟು ಫಿನಾಲೆ ಟಾಸ್ಕ್​​​ಗಳನ್ನು ಆಡಿಸಲಾಗಿದೆ. ಫಿನಾಲೆಗೆ ಎಂಟ್ರಿ ಕೊಡೋದ್ಯಾರು ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ಈ ಬಗ್ಗೆ ಕುತೂಹಲ ವ್ಯಕ್ತಪಡಿಸಿರುವ ಪ್ರೇಕ್ಷಕರಿಗೆ ಆಶ್ಚರ್ಯ ಎಂಬಂತೆ ಒಂದು ಸುದ್ದಿ ಸಿಕ್ಕಿದೆ. ಮೊದಲ ವಾರಗಳಲ್ಲಿ ಅದ್ಭುತವಾಗಿ ಆಡಿ ಗಮನ ಸೆಳೆದಿದ್ದ ಉಗ್ರಂ ಮಂಜು ಅವರಿಗೆ ಕಳಪೆ ಪಟ್ಟ ಸಿಕ್ಕಿದೆ.

ಆಟಗಳಲ್ಲಿ ಉತ್ತಮ ಪರ್ಫಾಮೆನ್ಸ್ ಇದ್ದರೂ ಈ ವಾರದ ಕಳಪೆ ಉಗ್ರಂ ಮಂಜು ಅವರಿಗೆ ಸಿಕ್ಕಿದೆ. ಮನೆಯ ಎಲ್ಲ ಸ್ಪರ್ಧಿಗಳು ಮಂಜು ಅವರ ಹೆಸರನ್ನೇ ತೆಗೆದುಕೊಂಡಿರೋದು ನೋಡುಗರ ಹುಬ್ಬೇರಿಸಿದೆ. 'ಮನೆಯವರೆಲ್ಲರ ಬಾಯಲ್ಲಿ ಬಂದಿದ್ದು ಒಂದೇ ಹೆಸರು!'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ - ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನಡಿ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸೋ ಪ್ರೇಕ್ಷಕರ ಕಾತರ ಹೆಚ್ಚಾಗಿದೆ.

ಪ್ರೋಮೋದಲ್ಲಿ, ಧನರಾಜ್​, ಮೋಕ್ಷಿತಾ, ಹನುಮಂತು, ಚೈತ್ರಾ ಕುಂದಾಪುರ, ಗೌತಮಿ ಜಾಧವ್​​ ಅವರುಗಳು ಧನರಾಜ್​​ ಹೆಸರನ್ನು ತೆಗೆದುಕೊಂಡಿದ್ದಾರೆ. ನಂತರ, ಎಲ್ಲೋ ಮಂಜಪ್ಪ ಕಾಕಾ ಕಳೆದು ಹೋಗ್ತಿದ್ದಾರೆ ಎಂದು ಹನುಮಂತು ತಮ್ಮ ಕಾರಣಗಳನ್ನು ಒದಗಿಸಿದ್ದಾರೆ. ಮೋಕ್ಷಿತಾ ಮಾತನಾಡಿ, ಆಟನಾ ಆಟದ ತರ ನೋಡ್ಲಿಲ್ಲ. ತುಂಬಾನೇ ವೈಯಕ್ತಿಕವಾಗಿ ತಗೊಂಡ್​ ಆಡಿದ್ರಿ ಅಂತಾ ನನಗೆ ಅನಿಸ್ತು. ಅದರ ಗಿಫ್ಟ್​ ಇದು ನನಗೆ ಎಂದು ತಮ್ಮ ಕೈಯಲ್ಲಾದ ಗಾಯವನ್ನು ತೋರಿಸಿದರು. ಮತ್ತೊಂದೆಡೆ ಆಪ್ತ ಸ್ನೇಹಿತೆ ಗೌತಮಿ ಜಾಧವ್​ ಮಾತನಾಡಿ, ಈ ಮನೆಯಲ್ಲಿರೋ ಲಾಸ್ಟ್​ ಸೆಕೆಂಡ್​ವರೆಗೂ ನಮಗೆ ನಾವು ನಿಂತ್ಕೊಳ್ಳೇಬೇಕಾಗುತ್ತೆ. ಅದನ್ನು ನೀವು ಮಾಡ್ತಾ ಇಲ್ಲ. ಇನ್ನು ರಜತ್​ ಮಾತನಾಡಿ, ಟಾಸ್ಕ್​ ಅಂತಾ ಬಂದಾಗ ನನಗೆ ಒಂದೊಂದ್​ ಸರಿ ಭಯವಾಗ್ತಿತ್ತು. ಹಿಂಸೆ ಆಗಿ ತಲೆ ಕೆಟ್ಟೋಗಿರೋದೂ ಇದೆ, ನಿಮ್ಮ ಲಾಕ್​​ಗಳಲ್ಲಿ ಎಂದು ತಿಳಿಸಿದ್ದಾರೆ. ನಂತರ ಕಳಪೆ ಔಟ್​ಫಿಟ್​ ಧರಿಸಿ ಜೈಲಿನೊಳಗೆ ಹೋಗಿದ್ದಾರೆ. ಕಳಪೆ ಕೊಟ್ಟಮೇಲೆ ಹೋಗಿ ಮಾತಾಡೋದಕ್ಕೆ ತುಂಬಾನೇ ಹಿಂಸೆ ಆಗುತ್ತೆ ಎಂದು ಭವ್ಯಾ ಅವರು ಚೈತ್ರಾರ ಬಳಿ ಹೇಳಿಕೊಂಡಿದ್ದಾರೆ. ಮಂಜು ಜೈಲಿನೊಳಗಿದ್ದರೆ, ಹೊರಗೆ ಗೆಳತಿ ಗೌತಮಿ ಕುಳಿತು ಸಾಥ್ ನೀಡಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​​ ಸೆಲೆಬ್ರಿಟಿಗಳನ್ನು ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್​: ವಿಡಿಯೋ ನೋಡಿ

ಆರಂಭದಲ್ಲಿ ಟಫೆಸ್ಟ್ ಕಂಟಸ್ಟೆಂಟ್ ಎನಿಸಿಕೊಂಡಿದ್ದ ಉಗ್ರಂ ಮಂಜು ಅವರ ಆಟ ಕೊನೆ ಕೊನೆಗೆ ಡಲ್​ ಆಗುತ್ತಾ ಬಂತು. ಗೆಳೆತನ, ಕಂಫರ್ಟ್ ಝೋನ್​ನಲ್ಲೇ ಕಳೆದು ಹೋಗಿದ್ದರು. ಈ ಬಗ್ಗೆ ಸ್ವತಃ ಸುದೀಪ್​ ಅವರೇ ಕೆಲವು ಬಾರಿ ಮಾತನಾಡಿ ಬುದ್ಧಿವಾದ ಹೇಳಿದ್ದರು. ಮನೆ ಮತ್ತು ಟಾಸ್ಕ್​​ನಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಸಲಹೆ ಕೊಟ್ಟಿದ್ದರು. ಆದರೆ ಮಂಜು ಮತ್ತೆ ಅದೇ ವರಸೆ ತೋರಿದ್ದಾರೆಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದ್ದವು. ಇದೀಗ ಕಳಪೆ ಪಟ್ಟ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: 'ಗೇಮ್ ​​ಚೇಂಜರ್'​ಗೆ ಮಿಶ್ರ ಪ್ರತಿಕ್ರಿಯೆ: ಆರ್​ಆರ್​ಆರ್​ ಯಶಸ್ಸಿನ ರಾಮ್​​ ಚರಣ್​​ಗೆ ಮತ್ತೊಂದು ಹಿಟ್​ ಸಿಗುತ್ತಾ?

ಇದಕ್ಕೂ ಮುನ್ನ ಯಾರಾಗ್ತಾರೆ ನೇರವಾಗಿ ಫಿನಾಲೆ ತಲುಪೋ ಅದೃಷ್ಟಶಾಲಿ ಸ್ಪರ್ಧಿ? ಎಂಬ ಕ್ಯಾಪ್ಷನ್​ನಡಿ ಅನಾವರಣಗೊಂಡಿರೋ ಪ್ರೋಮೋದಲ್ಲಿ ಮನೆಗೆ ನಟ ಶರಣ್​, ಅದಿತಿ ಪ್ರಭುದೇವ ಬಂದಿರೋದನ್ನು ಕಾಣಬಹುದು. ಫಿನಾಲೆ ಪ್ರವೇಶಿಸಲು ಟಾಸ್ಕ್​ ನೀಡಲಾಗಿದ್ದು, ಯಾರು ವಿಜೇತರು ಅನ್ನೋದನ್ನು ತಿಳಿಯಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.