ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗೋದಂದ್ರೆ ಸುಲಭದ ಮಾತಲ್ಲ. ಅಭಿಮಾನಿಗಳ ಮೆಚ್ಚುಗೆ ಜೊತೆ ಜೊತೆಗೆ ವಿರೋಧಿಗಳ ಟ್ರೋಲ್ಗಳನ್ನೂ ಎದುರಿಸಬೇಕಾಗುತ್ತದೆ. ಎಲ್ಲವನ್ನೂ ಎದುರಿಸಿ, ಸೋಷಿಯಲ್ ಮೀಡಿಯಾ ಸ್ಟಾರ್ ಅನ್ನೋ ಪಟ್ಟ ಗಿಟ್ಟಿಸಿಕೊಳ್ಳಬೇಕಾಗುತ್ತದೆ. ಹೀಗೆ ಕನ್ನಡದಲ್ಲಿ ವ್ಯಾಪಕವಾಗಿ ಗಮನ ಸೆಳೆದಿರುವ ಸಾಮಾಜಿಕ ಜಾಲತಾಣ ಪ್ರಭಾವಿ ಅಂದ್ರೆ ಅವರು ನಿವೇದಿತಾ ಗೌಡ. ಹೌದು, ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ತಮ್ಮದೇ ಆದ ಜನಪ್ರಿಯತೆ ಸಂಪಾದಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಇವರ ಹೊಸ ಪೋಸ್ಟ್ ನೆಟ್ಟಿಗರನ್ನು ಬಹುವಾಗಿ ಸೆಳೆದಿದೆ.
ಹೊಸ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲೇನಿದೆ? ತಮ್ಮ ಸುಂದರ ವಿಡಿಯೋ ಹಂಚಿಕೊಂಡಿರುವ ನಟಿ, ''ನನ್ನ ಬೆಸ್ಟ್ ಫ್ರೆಂಡ್ ಚಿಂತನಾ ಲಹರಿಯನ್ನು ಎಷ್ಟು ಎತ್ತರಕ್ಕೆ ಏರಿಸಿದರೆಂದರೆ, ನಾನೀಗ ಸಿಂಹಾಸನ, ಕಿರೀಟ ಮತ್ತು ಅದಕ್ಕೆ ಹೊಂದಿಕೆಯಾಗುವ ಇಡೀ ರಾಜ್ಯವನ್ನೇ ಹೊಂದಿರುವ ವ್ಯಕ್ತಿ ನನ್ನೆದುರು ಬರಬೇಕೆಂದು ನಿರೀಕ್ಷಿಸುತ್ತಿದ್ದೇನೆ'' (My best friend set the bar so high that now I expect a man to come with a throne, a crown and a whole kingdom to match) ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರಿನ ಫೇಮಸ್ ಒರಾಯನ್ ಮಾಲ್ ಎದುರು ಕ್ಲಿಕ್ಕಿಸಿಕೊಂಡಿರುವಂತೆ ತೋರಿರುವ ವಿಡಿಯೋದಲ್ಲಿ ನಿವೇದಿತಾ ಗೌಡ ಬ್ಲ್ಯಾಕ್ ಮಾರ್ಡನ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಅವರ ಬೆಸ್ಟ್ ಫ್ರೆಂಡ್ ಸೆರೆ ಹಿಡಿದಿದ್ದಾರೆ. ಜೊತೆಗೆ ನಿವೇದಿತಾ ಅವರನ್ನು ದೇವತೆಗೆ ಹೋಲಿಸಿದ್ದಾರೆ.
ವಿಡಿಯೋ ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ನಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ವರ್ಷ ತಮ್ಮ ವಿಚ್ಛೇದನ ಘೋಷಿಸಿರುವ ನಿವೇದಿತಾ ಸದ್ಯ ರಾಜನ ಆಗಮನಕ್ಕೆ ಎದುರು ನೋಡುತ್ತಿದ್ದಾರೆ. ಹಾಗಾಗಿ ಅವರು ಮಾಜಿ ಪತಿ ಚಂದನ್ ಶೆಟ್ಟಿ ಅವರ ಬಗ್ಗೆ ಮಾತನಾಡುತ್ತಿದ್ದಾರೋ ಅಥವಾ ಹೊಸ ಬದುಕಿನ ಆಸೆ ಹೊತ್ತಿದ್ದಾರೋ ಎಂಬ ಗೊಂದಲದಲ್ಲಿ ನೆಟ್ಟಿಗರಿದ್ದಾರೆ. ಒಳ್ಳೆಯದಾಗಲಿ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.