ಕನ್ನಡದ ಬಿಗ್ ಬಾಸ್ ಮನೆಯೀಗ 'ಬಿಗ್ ಬಾಸ್ ಸಾಮಾಜ್ಯ'ವಾಗಿ ಬದಲಾಗಿದೆ. ಉಗ್ರಂ ಮಂಜು ಅವರು ಬಿಗ್ ಬಾಸ್ ಸಾಮ್ರಾಜ್ಯದ ಅಧಿಪತಿಯಾಗಿ ಅಧಿಕಾರ ಕೈಗೆತ್ತಿಕೊಂಡಿದ್ದಾರೆ. ಬಿಗ್ ಬಾಸ್ ಆದೇಶದಂತೆ ಕೊಂಚ ಕಠೋರವಾಗಿ, ವರಟನಾಗಿಯೂ ಅಧಿಕಾರ ನಡೆಸುತ್ತಿದ್ದಾರೆ. ಇದು ಟಾಸ್ಕ್ ಆಗಿದ್ದು, ಅವರ ನಡೆ ನುಡಿ ವೈಯಕ್ತಿಕ ಮನಸ್ತಾಪಗಳನ್ನು ಅವಲಂಬಿಸಿದೆಯೇ? ಎಂಬುದನ್ನು ನೀವೇ ನಿರ್ಧರಿಸಿ. ಮಂಜು ಆಡಳಿತದಲ್ಲೀಗ ಎಲಿಮಿನೇಷನ್ಗೆ ನಾಮಿನೇಷನ್ ಕೂಡಾ ವಿಭಿನ್ನವಾಗೇ ನಡೆದಿದೆ. ಮನದೊಳಗೆ ಅಡಗಿದ್ದ ಕಿಡಿ ಹೊರಬಂದಿದೆ. ಮೋಕ್ಷಿತಾ ಅವರಿಗೆ ತ್ರಿವಿಕ್ರಮ್ ಅವರು ಎರಡು ತಲೆ ನಾಗರಹಾವು ಎಂದು ಆರೋಪಿಸಿದ್ದಾರೆ.
''ಆರೋಪ-ಪ್ರತ್ಯಾರೋಪಗಳ ಸಮರ, ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ!'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಪ್ರೋಮೋ ಅನಾವರಣಗೊಳಿಸಿದ್ದಾರೆ. ಇದರಲ್ಲಿ ಸ್ಪರ್ಧಿಗಳ ನೇರಾನೇರಾ ಮಾತುಗಳಿವೆ. ಹಿಂದೆ ಆಡಿದ ಮಾತುಗಳು ಎಲ್ಲರ ಸಮ್ಮುಖದಲ್ಲಿ ಸಹ ಸ್ಪರ್ಧಿಗಳಿಂದ ಹೊರಬಂದಿದೆ. ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕಾತರ ಹೆಚ್ಚಾಗಿದೆ.
ಪ್ರಜೆಗಳ ಭಾವಚಿತ್ರವನ್ನು ಬಾಣಕ್ಕೆ ಚುಚ್ಚಿ, ಬಾಣ ಮುಖ್ಯದ್ವಾರದಿಂದ ಹೊರಹೋಗುವಂತೆ ಬಿಡಬೇಕು ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಸೂಚಿಸಿದ್ದಾರೆ. ತ್ರಿವಿಕ್ರಮ್ ಹೆಸರು ತೆಗೆದುಕೊಂಡ ಮೋಕ್ಷಿತಾ, 'ಮಂಜಣ್ಣ ಬಿಲ್ಡ್ ಅಪ್ ಕೊಡ್ತಾನೆ ಬಿಟ್ರೆ ಆಚೆ ಅವನೇನೂ ಅಲ್ಲಾ ಎಂದು ತ್ರಿವಿಕ್ರಮ್ ಹಿಂದೆಯಿಂದ ಮಾತಾಡ್ತಾರೆ' ಅಂತಾ ತಮ್ಮ ಕಾರಣ ಒದಗಿಸಿದ್ದಾರೆ. ಅದಕ್ಕೆ ಮಂಜು, ಅದು ನಂಬಿಕೆ ದ್ರೋಹಾನೇ ಎಂದು ತಿಳಿಸಿದ್ದಾರೆ.
ನಂತರ, ತ್ರಿವಿಕ್ರಮ್ ಅವರ ಸರದಿ ಬಂದಾಗ ಮೋಕ್ಷಿತಾ ಅವರ ಹೆಸರನ್ನು ಎಲಿಮಿನೇಷನ್ಗೆ ನಾಮಿನೇಟ್ ಮಾಡಿದ್ದಾರೆ. ''ನಾನು ಮ್ಯಾನಿಪುಲೇಟ್ ಮಾಡ್ತಾರೆ ಅಂತಾರೆ. ಆದ್ರೆ ನಿಜವಾಗಿಯೂ ಮ್ಯಾನುಪುಲೇಟ್ ಮಾಡುವವರು ಮೋಕ್ಷಿತಾ. ಗೌತಮಿ ಅವರು ನಾವಂದುಕೊಂಡಷ್ಟು ಪಾಸಿಟಿವಿಟಿ ಏನಿಲ್ಲ, ಅದು ಇದು ಅಂತಾ ಅವ್ರು ಹಿಂದಿನಿಂದ ಮಾತಾಡ್ತಾರೆ. ನನ್ನ ಗೋಮುಖ ವ್ಯಾಘ್ರ ಅಂತಾರೆ, ಆದ್ರೆ ಇವರು ಎರಡು ತಲೆ ನಾಗರಹಾವು'' ಎಂದು ತಮ್ಮ ಒಳಗಿದ್ದ ಆಕ್ರೋಶ ಹೊರಹಾಕಿದ್ದಾರೆ.