ಕರ್ನಾಟಕ

karnataka

ETV Bharat / entertainment

'ಮುಂದಿನ ದಾಳಿ ಗುರಿ ತಪ್ಪಲ್ಲ': ಸಲ್ಮಾನ್​ಖಾನ್​ ಮನೆ ಮೇಲೆ ದಾಳಿ ನಡೆಸಿದ ​ಬಿಷ್ಣೋಯ್​ ಗ್ಯಾಂಗ್​ನಿಂದ ಮತ್ತೆ ಬೆದರಿಕೆ - bishnoi gang

ಬಾಲಿವುಡ್​ ನಟ ಸಲ್ಮಾನ್​ ಖಾನ್​ ಮನೆ ಮೇಲೆ ನಡೆದ ದಾಳಿ ತನ್ನ ಕೃತ್ಯ ಎಂದು ಗ್ಯಾಂಗ್​ಸ್ಟರ್​ ಲಾರೆನ್ ಬಿಷ್ಣೋಯ್​ ಗ್ಯಾಂಗ್​ ಒಪ್ಪಿಕೊಂಡಿದೆ.

ಸಲ್ಮಾನ್​ಖಾನ್​ ಮನೆ ಮೇಲೆ ದಾಳಿ ನಡೆಸಿದ ​ಬಿಷ್ಣೋಯ್​ ಗ್ಯಾಂಗ್​
ಸಲ್ಮಾನ್​ಖಾನ್​ ಮನೆ ಮೇಲೆ ದಾಳಿ ನಡೆಸಿದ ​ಬಿಷ್ಣೋಯ್​ ಗ್ಯಾಂಗ್​

By ETV Bharat Karnataka Team

Published : Apr 15, 2024, 7:45 AM IST

Updated : Apr 15, 2024, 9:07 AM IST

ಹೈದರಾಬಾದ್:ಬಾಲಿವುಡ್​ ನಟ ಸಲ್ಮಾನ್​ ಖಾನ್​ ಮನೆ ಮೇಲೆ ನಡೆದ ಗುಂಡಿನ ದಾಳಿಯ ಹೊಣೆಯನ್ನು ಗ್ಯಾಂಗ್​ಸ್ಟರ್​ ಲಾರೆನ್​​ ಬಿಷ್ಣೋಯ್​ ಗುಂಪು ಹೊತ್ತುಕೊಂಡಿದೆ. "ಇದು ಟ್ರೈಲರ್​ ಆಗಿದ್ದು, ಮುಂದಿನ ಟಾರ್ಗೆಟ್​ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ನಟನಿಗೆ ಮತ್ತೆ ಬೆದರಿಕೆ ಹಾಕಲಾಗಿದೆ.

ಲಾರೆನ್ಸ್​ ಬಿಷ್ಣೋಯ್​ ಸಹೋದರ ಅನ್ಮೋಲ್​ ಬಿಷ್ಣೋಯ್​ ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ದಾಳಿ ನಡೆಸಿದ್ದನ್ನು ಒಪ್ಪಿಕೊಳ್ಳಲಾಗಿದೆ. ಇದು ಮೊದಲ ಮತ್ತು ಕೊನೆಯ ಎಚ್ಚರಿಕೆಯಾಗಿದೆ. ಮುಂದಿನ ದಾಳಿಯು ಗುರಿ ತಪ್ಪುವುದಿಲ್ಲ ಎಂದು ಸಲ್ಮಾನ್​ ಖಾನ್​ಗೆ ಎಚ್ಚರಿಕೆ ನೀಡಲಾಗಿದೆ.

ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿರುವಂತೆ, "ಬಿಷ್ಣೋಯ್ ಗುಂಪಿನ ಪರವಾಗಿ ಈ ಎಚ್ಚರಿಕೆ ನೀಡಲಾಗುತ್ತಿದೆ. ನಾವು ಶಾಂತಿಯನ್ನು ಬಯಸುತ್ತೇವೆ. ಅಗತ್ಯಬಿದ್ದರೆ ಯುದ್ಧಕ್ಕೂ ಸಿದ್ಧ. ನಮ್ಮ ಶಕ್ತಿಯನ್ನು ನೀವು ಅರ್ಥಮಾಡಿಕೊಳ್ಳಬೇಕು. ಭವಿಷ್ಯದಲ್ಲಿ ನಡೆಯುವ ದಾಳಿಗಳು ಖಾಲಿ ಬೆದರಿಕೆಗಳಾಗಿ ಇರುವುದಿಲ್ಲ. ಸಲ್ಮಾನ್ ಖಾನ್, ಇದು ನಿಮಗೆ ಟ್ರೇಲರ್ ಮಾತ್ರ. ನಮ್ಮ ತಾಳ್ಮೆಯನ್ನು ಮತ್ತಷ್ಟು ಪರೀಕ್ಷಿಸಬೇಡಿ. ಇದು ನಿಮಗೆ ಮೊದಲ ಮತ್ತು ಕೊನೆಯ ಎಚ್ಚರಿಕೆಯಾಗಿದೆ. ಮುಂದಿನ ಬಾರಿ ಗೋಡೆಗಳ ಮೇಲೆ ಗುಂಡುಗಳನ್ನು ಹಾರಿಸುವುದಿಲ್ಲ. ನೀವು ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್​ರನ್ನು ದೇವರಂತೆ ಪರಿಗಣಿಸುತ್ತೀರಿ. ಆದರೆ, ನಮಗೆ ಅವರಿಬ್ಬರು ನಾಯಿಗಳಿಗೆ ಸಮಾನ. ನಿಮಗೆ ಈ ಸುಳಿವು ಸಾಕು ಮತ್ತು ಹೆಚ್ಚೇನೂ ಹೇಳಲು ಬಯಸುವುದಿಲ್ಲ" ಎಂದು ಅಮೆರಿಕದಲ್ಲಿ ನೆಲೆಸಿರುವ ಗ್ಯಾಂಗ್​ಸ್ಟರ್​ ಅನ್ಮೋಲ್ ಬಿಷ್ಣೋಯ್ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾನೆ.

ಗೋಡೆ ಮೇಲೆ ಫೈರಿಂಗ್:ಭಾನುವಾರ ಮುಂಜಾವು 5 ಗಂಟೆ ಸುಮಾರಿಗೆ ನಟ ಸಲ್ಮಾನ್ ಖಾನ್ ಅವರ ಬಾಂದ್ರಾ ಮನೆಯ ಮೇಲೆ ದಾಳಿ ಮಾಡಿದ ಇಬ್ಬರು ಅಪರಿಚಿತ ಶೂಟರ್‌ಗಳು 6 ಸುತ್ತಿನ ಗುಂಡು ಹಾರಿಸಿ ಬೈಕ್​ನಲ್ಲಿ ಪರಾರಿಯಾಗಿದ್ದರು. ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಕಟ್ಟಡದ ಮೇಲೆ ಗುಂಡುಗಳು ಬಿದ್ದಿವೆ. ದಾಳಿಕೋರರು ಗುಂಡು ಹಾರಿಸಿ ಪರಾರಿಯಾಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿದೆ.

ಸಲ್ಮಾನ್ ಖಾನ್ ಮತ್ತು ಅವರ ಕುಟುಂಬವು ಪಂಜಾಬ್ ಮೂಲದ ಮಾಫಿಯಾ ಗುಂಪುಗಳಿಂದ ಹಲವು ವರ್ಷಗಳಿಂದ ಬೆದರಿಕೆಗಳನ್ನು ಎದುರಿಸುತ್ತಿದೆ. ಗುಂಡಿನ ದಾಳಿ ಬಳಿಕ ಬಾಂದ್ರಾ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಶೂಟರ್‌ಗಳ ಪತ್ತೆ ಮಾಡಲು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಕ್ರೈಂ ಬ್ರಾಂಚ್ ಪೊಲೀಸರು ಮತ್ತು ಫೋರೆನ್ಸಿಕ್ ತಂಡವು ಸ್ಥಳದಲ್ಲಿ ತನಿಖೆ ನಡೆಸುತ್ತಿದೆ.

ಕೊಲೆ ಯತ್ನ ಕೇಸ್​ ದಾಖಲು:ಸಲ್ಮಾನ್​ ಖಾನ್​ ಮನೆ ದಾಳಿ ಮಾಡಿದವರನ್ನು ಹರಿಯಾಣ ಮೂಲದವರು ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ನಡೆಸಿದ ತನಿಖೆಯಲ್ಲಿ ಇದು ಕಂಡುಬಂದಿದೆ. ಇದಕ್ಕೂ ಮೊದಲು ಇ ಇಬ್ಬರು ಉದ್ಯಮಿ ಸಚಿನ್​ ಮುಂಜಾಲ್​ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಪರಿಚಿತರ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ) ಮತ್ತು ಶಸ್ತ್ರಾಸ್ತ್ರ ಕಾಯಿದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ:ನಟ ಸಲ್ಮಾನ್ ಖಾನ್ ಮನೆಯ ಹೊರಗೆ ಅಪರಿಚಿತರಿಂದ ಗುಂಡಿನ ದಾಳಿ - Firing near Salman khan house

Last Updated : Apr 15, 2024, 9:07 AM IST

ABOUT THE AUTHOR

...view details