ಕರ್ನಾಟಕ

karnataka

ETV Bharat / entertainment

ಪುಷ್ಪ 2 vs ಛಾವಾ: ರಶ್ಮಿಕಾರ ಎರಡೂ ಸಿನಿಮಾಗಳು ಒಂದೇ ದಿನ ತೆರೆಗೆ; ಬಾಕ್ಸ್ ಆಫೀಸ್ ಫೈಟ್​ ಪಕ್ಕಾ - Pushpa 2 Vs Chhava - PUSHPA 2 VS CHHAVA

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರ ನಿರ್ವಹಿಸಿರುವ 'ಪುಷ್ಪ 2: ರೂಲ್' ಮತ್ತು ಛಾವಾ ಚಿತ್ರಗಳು ಒಂದೇ ದಿನ ಬಿಡುಗಡೆ ಆಗುತ್ತಿದ್ದು, ಬಾಕ್ಸ್​ ಆಫೀಸ್​ ಫೈಟ್​ ನ್ಯಾಷನಲ್​ ಕ್ರಶ್​ಗೆ ಸಮಸ್ಯೆ ತಂದೊಡ್ಡುವ ಸಾಧ್ಯತೆಗಳಿವೆ.

Pushpa 2 Vs Chhava
ಪುಷ್ಪ 2 vs ಛಾವಾ (Film posters/ETV Bharat)

By ETV Bharat Karnataka Team

Published : Jun 18, 2024, 12:56 PM IST

ಪ್ರತಿಷ್ಠಿತ ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಮುಖ್ಯಭೂಮಿಕೆಯ ಮುಂದಿನ ಸಿನಿಮಾ 'ಪುಷ್ಪ 2: ರೂಲ್' ಚಿತ್ರದ ಬದಲಾದ ದಿನಾಂಕವನ್ನು ಚಿತ್ರತಂಡ ಈಗಾಗಲೇ ಘೋಷಿಸಿದೆ. ಮೂಲತಃ ಈ ಬಹುನಿರೀಕ್ಷಿತ ಸಿನಿಮಾವನ್ನು ಈ ಸಾಲಿನ ಸ್ವಾತಂತ್ರ್ಯ ದಿನದಂದು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಚಿತ್ರವನ್ನು ಡಿಸೆಂಬರ್ 6ಕ್ಕೆ ಮುಂದೂಡಲಾಗಿದೆ ಎಂದು ಚಿತ್ರತಂಡ ನಿನ್ನೆಯಷ್ಟೇ ಅಧಿಕೃತವಾಗಿ ಘೋಷಿಸಿದೆ. ಇದು ಪುಷ್ಪ 2 (Pushpa 2: The Rule) ಮತ್ತು ಛಾವಾ (Chhava) ಚಿತ್ರಗಳ ನಾಯಕಿ ರಶ್ಮಿಕಾ ಮಂದಣ್ಣ ಅವರಿಗೆ ತೊಂದರೆಯಾಗುವ ಸಾಧ್ಯತೆಗಳಿವೆ.

ನಿರಂತರ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಂದ ಪುಷ್ಪ ಸೀಕ್ವೆಲ್​ ಬಿಡುಗಡೆ ತಡವಾಗಲಿದೆ ಎಂದು ಚಿತ್ರತಂಡ ಸ್ಪಷ್ಟನೆ ಕೊಟ್ಟಿದೆ. ಹೊಸ ಬಿಡುಗಡೆ ದಿನಾಂಕ ಪ್ರಕಟಗೊಂಡಿದ್ದು, 'ಪುಷ್ಪ 2' ಸಿನಿಮಾ 'ಛಾವಾ'ದೊಂದಿಗೆ ಬಾಕ್ಸ್​ ಆಫೀಸ್ ಫೈಟ್​​ ಎದುರಿಸಲು ಸಜ್ಜಾಗಿದೆ. ಛಾವಾ ಚಿತ್ರದಲ್ಲಿ ರಶ್ಮಿಕಾ ಜೊತೆಗೆ ವಿಕ್ಕಿ ಕೌಶಲ್ ನಟಿಸಿದ್ದಾರೆ. ಈ ಕಾಂಬಿನೇಶನ್​ನ ಸಿನಿಮಾ ವೀಕ್ಷಿಸಲು ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳೀಗ ಎರಡರಲ್ಲಿ ಒಂದು ಚಿತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೋ? ಅಥವಾ ಒಂದಾದ ಬಳಿಕ ಒಂದು ಎಂಬಂತೆ ಎರಡೂ ಚಿತ್ರವನ್ನು ವೀಕ್ಷಿಸುತ್ತಾರೋ? ಎಂಬುದನ್ನು ಕಾದು ನೋಡಬೇಕಿದೆ.

ಈ ಹಿಂದಿನ ವರದಿಗಳು, 'ಛಾವಾ' 2024ರ ಡಿಸೆಂಬರ್ 6ರಂದು ಬಿಡುಗಡೆ ಆಗಲಿದೆ ಎಂಬುದನ್ನು ದೃಢಪಡಿಸಿದ್ದವು. ಪುಷ್ಪ 2 ಸ್ವಾತಂತ್ಯ ದಿನಾಚರಣೆ ಸಂದರ್ಭ ತೆರೆಕಾಣಲು ರೆಡಿಯಾಗಿತ್ತು. ಆದರೆ ನಿನ್ನೆಯಷ್ಟೇ ಪುಷ್ಪರಾಜ್​ನ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟ ವಿಚಾರ ಬಹಿರಂಗಗೊಂಡಿತು. ಇದರಿಂದ ಬಾಕ್ಸ್​ ಆಫೀಸ್​ ಫೈಟ್​​ ಪಕ್ಕಾ ಆಯಿತು. ಗಲ್ಲಾಪೆಟ್ಟಿಗೆಯ ಘರ್ಷಣೆಯನ್ನು ತಪ್ಪಿಸಲು ಛಾವಾ ಬಿಡುಗಡೆ ದಿನಾಂಕವನ್ನು ಬದಲಿಸಬೇಕೇನೋ ಎಂಬ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ನಡೆಯುತ್ತಿದೆ.

ಇದನ್ನೂ ಓದಿ:ಸದ್ಯಕ್ಕೆ ಪುಷ್ಪ 2 ಬಿಡುಗಡೆ ಇಲ್ಲ: ಅಲ್ಲು ಅರ್ಜುನ್ ಅಭಿಮಾನಿಗಳೆಗೆ ನಿರಾಸೆ - Pushpa 2 Release Postponed

'ಪುಷ್ಪ 2' ಮತ್ತು 'ಛಾವಾ' ಎರಡೂ ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳನ್ನು ನಿರ್ವಹಿಸಿರೋ ಹಿನ್ನೆಲೆ, ಈ ಬಿಡುಗಡೆ ದಿನಾಂಕ ಕುತೂಹಲ ಮೂಡಿಸಿದೆ. ಆಗಸ್ಟ್ 15ಕ್ಕೆ ನಿಗದಿಯಾಗಿದ್ದ ಪುಷ್ಪ 2ರ ಬಿಡುಗಡೆಯ ದಿನಾಂಕ ಬದಲಾವಣೆ ಆಗಿದ್ದು, ಇತರ ಚಿತ್ರಗಳ ಮೇಲೂ ಪರಿಣಾಮ ಬೀರಿದೆ ಅಂತಾರೆ ಸಿನಿಪ್ರಿಯರು. ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅವರ ಸ್ತ್ರೀ 2 ಆಗಸ್ಟ್ 15ಕ್ಕೆ ಬಿಡುಗಡೆಗೊಳ್ಳಲಿದ್ದು, ಅಂದಿನ ರಜೆಯನ್ನು ಸದುಪಯೋಗಪಡಿಸಿಕೊಳ್ಳಲಿದೆ.

ಇದನ್ನೂ ಓದಿ:ಮುಂದುವರೆದ​ 'ಪುಷ್ಪ-2' ಕ್ರೇಜ್​​​: ಬದಲಾಯ್ತು ಬಾಲಿವುಡ್​ನ 'ಸಿಂಗಮ್​ ಅಗೈನ್' ರಿಲೀಸ್​ ಡೇಟ್ - Singham Again Release Postponed

ಅದೇ ರೀತಿ, ಕಮಲ್ ಹಾಸನ್ ಅವರ ಇಂಡಿಯನ್ 2 ಸಹ ಸ್ವಾತಂತ್ರ್ಯ ದಿನದಂದೇ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ. ಜಾನ್ ಅಬ್ರಹಾಂ ಈಗಾಗಲೇ ತಮ್ಮ ಚಿತ್ರ ವೇದಾವನ್ನು ಸ್ವಾತಂತ್ರ್ಯ ದಿನದಂದು ರಿಲೀಸ್​ ಮಾಡುವುದಾಗಿ ಘೋಷಿಸಿದ್ದಾರೆ. ಬಾಲಿವುಡ್​​ನ ಸೂಪರ್ ಸ್ಟಾರ್​ಗಳಾದ ಅಜಯ್ ದೇವ್​ಗನ್, ಅಕ್ಷಯ್ ಕುಮಾರ್, ರಣ್​ವೀರ್ ಸಿಂಗ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್ ಖಾನ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಅವರ ಸಿಂಗಮ್​ ಎಗೈನ್​ ಕೂಡ ಆಗಸ್ಟ್ 15ರಂದೇ ತೆರೆಕಾಣಲು ನಿರ್ಧಾರವಾಗಿತ್ತು. ಆದ್ರೆ ಇತ್ತೀಚೆಗೆ ಈ ಚಿತ್ರದ ರಿಲೀಸ್​ ಡೇಟ್ ಕೂಡ ಮುಂದೂಡಿಕೆಯಾಗಿದೆ. ರೋಹಿತ್ ಶೆಟ್ಟಿ ಆ್ಯಕ್ಷನ್​ ಕಟ್ ಹೇಳಿರುವ ಸಿಂಗಮ್ ಸರಣಿಯ ಮೂರನೇ ಭಾಗ ದೀಪಾವಳಿಗೆ ತೆರೆಗಪ್ಪಳಿಸಲಿದೆ.

ABOUT THE AUTHOR

...view details