ETV Bharat / entertainment

ಕೋವಿಡ್​ ನಂತರ ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾ 'ಪುಷ್ಪ 2' - PUSHPA 2 COLLECTION

ಅಲ್ಲು ಅರ್ಜುನ್​​ ನಟನೆಯ 'ಪುಷ್ಪ 2' ಕೋವಿಡ್​ ನಂತರ ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾ.

Pushpa 2 poster
'ಪುಷ್ಪ 2' ಸಿನಿಮಾ ನಾಯಕ ಅಲ್ಲು ಅರ್ಜುನ್​ (Photo: Film poster/ETV Bharat)
author img

By ETV Bharat Entertainment Team

Published : Dec 18, 2024, 3:52 PM IST

ಸೌತ್​ ಸೂಪರ್​ ಸ್ಟಾರ್​ ಅಲ್ಲು ಅರ್ಜುನ್​​ ಮುಖ್ಯಭೂಮಿಕೆಯ 'ಪುಷ್ಪ: ದಿ ರೈಸ್' ಚಿತ್ರಮಂದಿರಗಳಲ್ಲಿ ಅಬ್ಬರಿಸಿ ಮೂರು ವರ್ಷಗಳಾಗಿವೆ. 2021ರ ಡಿಸೆಂಬರ್ 17ರಂದು ತೆರೆಕಂಡ ಚಿತ್ರದ ಮುಂದಿನ ಭಾಗ ಈ ಸಾಲಿನ ಡಿಸೆಂಬರ್​​​ನಲ್ಲಿ ಬಿಡುಗಡೆಯಾಗಿ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡಿದೆ.

ಇದರೊಂದಿಗೆ ಐಕಾನ್​​​ ಸ್ಟಾರ್​​​ನ ಪ್ಯಾನ್-ಇಂಡಿಯನ್ ಸೂಪರ್‌ಸ್ಟಾರ್ ಸ್ಥಾನಮಾನವನ್ನು ಭದ್ರಪಡಿಸಿದೆ. 'ಪುಷ್ಪ 2: ದಿ ರೂಲ್' ಚಿತ್ರದ ಅಭೂತಪೂರ್ವ ಯಶಸ್ಸು ಚಿತ್ರತಂಡ ಸೇರಿದಂತೆ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟಿರುವ ಈ ಚಿತ್ರ ಸ್ಕ್ರೀನ್​ಕೌಂಟ್​​ ಮತ್ತು ಬಾಕ್ಸ್​ಆಫೀಸ್​​ ಪರ್ಫಾಮೆನ್ಸ್​​ ಎರಡರಲ್ಲೂ ವರ್ಷದ ಅತೀ ದೊಡ್ಡ ಭಾರತೀಯ ಚಿತ್ರವಾಗಿ ಹೊರಹೊಮ್ಮಿತು.

ದೇಶೀಯ ಮಾರುಕಟ್ಟೆಯ ಗಳಿಕೆ: ಮೊದಲ ಭಾಗದ ಅದ್ಭುತ ಯಶಸ್ಸಿನ ನಂತರ, ಪುಷ್ಪ 2 ಸುತ್ತಲಿನ ನಿರೀಕ್ಷೆ ಬಹಳ ದೊಡ್ಡ ಮಟ್ಟದಲ್ಲಿತ್ತು. ಅಲ್ಲು ಅರ್ಜುನ್ ತಮ್ಮ ಇತರೆ ಪ್ರಾಜೆಕ್ಟ್‌ಗಳಿಂದ ಬ್ರೇಕ್​ ಪಡೆದು ಈ ಸೀಕ್ವೆಲ್‌ಗಾಗಿ ತಮ್ಮ ಸಂಪೂರ್ಣ ಮೂರು ವರ್ಷಗಳನ್ನು ಮೀಸಲಿಟ್ಟರು. ಸಿನಿಮಾ ಕ್ವಾಲಿಟಿ ಬಗ್ಗೆ ಸಾಕಷ್ಟು ಗಮನ ವಹಿಸಿದ್ದರು. ಸುಕುಮಾರ್ ನಿರ್ದೇಶನದ ಪುಷ್ಪ 2 ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾಯಿತು. ತೆರೆಕಂಡ 13ನೇ ದಿನದ ಹೊತ್ತಿಗೆ, 'ಪುಷ್ಪ 2' ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 953.3 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಿದೆ.

ಪುಷ್ಪ 2 ಬಾಕ್ಸ್ ಆಫೀಸ್ ಒಟ್ಟು ಕಲೆಕ್ಷನ್: ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರ ಎರಡನೇ ಮಂಗಳವಾರ ಕಲೆಕ್ಷನ್‌ ವಿಚಾರದಲ್ಲಿ ಕೊಂಚ ಕುಸಿತ ಕಂಡಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಸಿನಿಮಾ ತನ್ನ 13ನೇ ದಿನ 24.25 ಕೋಟಿ ರೂಪಾಯಿ ಸಂಪಾದಿಸಿದೆ. ಹಿಂದಿನ ದಿನದ ಕಲೆಕ್ಷನ್‌ಗೆ ಹೋಲಿಸಿದರೆ ಶೇ.10.02ರಷ್ಟು ಇಳಿಕೆಯಾಗಿದೆ.

ಇದನ್ನೂ ಓದಿ: ಸಂಜೆ ಅಮೆರಿಕಕ್ಕೆ ತೆರಳಲಿರುವ ನಟ ಶಿವರಾಜ್​ಕುಮಾರ್​​: ಡಿ.24ಕ್ಕೆ ಸರ್ಜರಿ

ಸಿನಿಮಾಗೆ ಹಿಂದಿ ಆವೃತ್ತಿಯಿಂದ ಹೆಚ್ಚು ಕಲೆಕ್ಷನ್​​ ಆಗಿದೆ. ಬಾಲಿವುಡ್​ನಲ್ಲಿ 591 ಕೋಟಿ ರೂಪಾಯಿ ಗಳಿಸಿದೆ. ತೆಲುಗು - 290.9 ಕೋಟಿ ರೂ., ತಮಿಳು 50.65 ಕೋಟಿ ರೂ., ಕನ್ನಡ - 6.87 ಕೋಟಿ ರೂ. ಮತ್ತು ಮಲಯಾಳಂನಿಂದ 13.78 ಕೋಟಿ ರೂಪಾಯಿ ಬಂದಿದೆ. ಕೇವಲ 10-11 ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 953.3 ರೂ.ನ ವ್ಯವಹಾರ ನಡೆದಿದೆ ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ. ಚಿತ್ರದ ಜಾಗತಿಕ ಗಳಿಕೆ 1,409 ಕೋಟಿ ರೂಪಾಯಿ ದಾಟಿದೆ.

ದಿನ/ವಾರಇಂಡಿಯಾ ನೆಟ್​ ಕಲೆಕ್ಷನ್​​
ಮೊದಲ ವಾರ725.8 ಕೋಟಿ ರೂಪಾಯಿ.
ದಿನ 936.4 ಕೋಟಿ ರೂಪಾಯಿ.
ದಿನ 1063.3 ಕೋಟಿ ರೂಪಾಯಿ.
ದಿನ 1176.6 ಕೋಟಿ ರೂಪಾಯಿ.
ದಿನ 1226.95 ಕೋಟಿ ರೂಪಾಯಿ.
ದಿನ 1324.25 ಕೋಟಿ ರೂಪಾಯಿ (ಆರಂಭಿಕ ಅಂದಾಜು)
ಒಟ್ಟು953.3 ಕೋಟಿ ರೂಪಾಯಿ.

ಪುಷ್ಪ 2 ಅಭೂತಪೂರ್ವ ಬಾಕ್ಸ್ ಆಫೀಸ್ ದಾಖಲೆಯೊಂದಿಗೆ ಇತಿಹಾಸ ಸೃಷ್ಟಿಸಿದೆ.

  • ಭಾರತೀಯ ಬಾಕ್ಸ್​​ಆಫೀಸ್​ನಲ್ಲಿ ಮೊದಲ ದಿನ ಅತೀ ಹೆಚ್ಚು ಕಲೆಕ್ಷನ್​ ಮಾಡಿರುವ ಸಿನಿಮಾ.
  • ವಿಶ್ವಮಟ್ಟದಲ್ಲೂ ಮೊದಲ ದಿನ ಅತೀ ಹೆಚ್ಚು ಕಲೆಕ್ಷನ್​ ಮಾಡಿರುವ ಭಾರತೀಯ ಸಿನಿಮಾ.
  • ಮೊದಲ ದಿನವೇ (ಪ್ರೀಮಿಯರ್‌ಗಳೂ ಸೇರಿ) 200 ಕೋಟಿ ರೂ. ಗಳಿಸಿದ ಮೊದಲ ಚಿತ್ರ.
  • ಜಾಗತಿಕ ಮಟ್ಟದಲ್ಲೂ ವಿಕೆಂಡ್​ನಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಇಂಡಿಯನ್​ ಸಿನಿಮಾ.
  • ಭಾರತದಲ್ಲಿ ಮೊದಲ ವಾರಾಂತ್ಯ 500 ಕೋಟಿ ಗಳಿಸಿದ ಮೊದಲ ಚಿತ್ರ.
  • ವಿಶ್ವದಾದ್ಯಂತ ಅತಿ ಶೀಘ್ರವೇ 1,000 ಕೋಟಿಗೂ ಹೆಚ್ಚು ಗಳಿಸಿದ ಸಿನಿಮಾ.
  • ಕೋವಿಡ್-19 ನಂತರ ಅತೀ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ.

ಇದನ್ನೂ ಓದಿ: 'ಚೈತ್ರಾ ಜಾಗದಲ್ಲಿ ಗಂಡ್​​ಮಕ್ಕಳಿದ್ದಿದ್ರೆ...'! ಹನುಮಂತು ಹೇಳಿಕೆ: ಮತ್ತೊಮ್ಮೆ ಕೆರಳಿದ ಬಿಗ್​ ಬಾಸ್​; ಶಿಕ್ಷೆಯೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.