ETV Bharat / health

ಚಾರ್ಕೋಲ್ ಟೂತ್​ಪೇಸ್ಟ್​ ಕ್ರೇಜ್: ಬಳಸುವ ಮುನ್ನ ತಜ್ಞರ ಸಲಹೆ ತಿಳಿಯಿರಿ - CHARCOAL TOOTHPASTE

Charcoal Toothpaste: ಚಾರ್ಕೋಲ್ ಟೂತ್​ಪೇಸ್ಟ್​ ಬಳಕೆ ಎಲ್ಲೆಡೆ ಹೆಚ್ಚುತ್ತಿದೆ. ಈ ಬಗ್ಗೆ ತಜ್ಞರು ಹೇಳುವುದೇನು ನೋಡೋಣ.

CHARCOAL TOOTHPASTE BENEFITS  SIDE EFFECTS OF CHARCOAL TOOTHPASTE  CHARCOAL TOOTHPASTE IS SAFE  BENEFITS AND EFFECTS OF CHARCOAL
ಚಾರ್ಕೋಲ್ ಟೂತ್​ಪೇಸ್ಟ್​ (ETV Bharat)
author img

By ETV Bharat Health Team

Published : 3 hours ago

Charcoal Toothpaste: ಹಿಂದೆಲ್ಲ ಬೇವು, ಇದ್ದಿಲನ್ನು ಹಲ್ಲುಜ್ಜಲು ಬಳಸಲಾಗುತ್ತಿತ್ತು. ಆದರೆ, ಈಗ ಟೂತ್​ಪೇಸ್ಟ್ ಬಳಕೆ ಸರ್ವೇ ಸಾಮಾನ್ಯ. ಆರೋಗ್ಯಕರ ಹಲ್ಲುಗಳು, ಬಲವಾದ ಒಸಡು ಮತ್ತು ಹಲ್ಲುಗಳ ಮೇಲಿನ ಕಲೆಗಳನ್ನು ತೆಗೆದುಹಾಕಲು ಟೂತ್​ ಪೇಸ್ಟ್ ಬಳಸಲಾಗುತ್ತಿದೆ. ಇದಕ್ಕಾಗಿ ಇಂದು ತರಹೇವಾರಿ ಪೇಸ್ಟ್‌ಗಳಿವೆ.

ಕೆಲವರು ಬಿಳಿ ಬಣ್ಣದ ಪೇಸ್ಟ್ ಬಳಸಿದರೆ, ಮತ್ತೆ ಕೆಲವು ಜನರು ಕೆಂಪು ಬಣ್ಣದ ಪೇಸ್ಟ್ ಬಳಸುತ್ತಾರೆ. ಇವುಗಳಷ್ಟೇ ಅಲ್ಲ, ಇದರೊಂದಿಗೆ ಕಪ್ಪು ಬಣ್ಣದ ಟೂತ್ ಪೇಸ್ಟ್ ಕೂಡ ಬಳಕೆಯಲ್ಲಿದೆ. ಅದುವೇ ಚಾರ್ಕೋಲ್ ಟೂತ್​ಪೇಸ್ಟ್/ ಇದ್ದಿಲಿನ ಪೇಸ್ಟ್​.

ಇದ್ದಿಲು, ತೆಂಗಿನೆಣ್ಣೆ ಮತ್ತು ಇತರ ಪದಾರ್ಥಗಳಿಂದ ಮಾಡಿದ ಈ ಪೇಸ್ಟ್ ಅನ್ನು ಪ್ರಸ್ತುತ ಅನೇಕರು ಬಳಸುತ್ತಿದ್ದಾರೆ. ಈ ಟೂತ್‌ಪೇಸ್ಟ್‌ನಿಂದ ದೊರೆಯುವ ಲಾಭಗಳೇನು? ಇದನ್ನು ಪ್ರತೀದಿನ ಬಳಸಿದರೆ ಏನಾಗುತ್ತದೆ ಎಂಬುದರ ಕುರಿತು ತಜ್ಞರು ಮಾಹಿತಿ ನೀಡಿದ್ದಾರೆ.

ಹಲ್ಲುಗಳ ಮೇಲಿನ ಕಲೆಗಳನ್ನು ಹೋಗಲಾಡಿಸುತ್ತೆ: ಇದ್ದಿಲಿನ ಟೂತ್‌ಪೇಸ್ಟ್‌ ಹೀರಿಕೊಳ್ಳುವ ಗುಣ ಹೊಂದಿದೆ. ಹಲ್ಲುಗಳ ಮೇಲಿನ ಕಲೆಗಳನ್ನು ತೆಗೆದುಹಾಕಲು ಇದು ಸಹಾಯಕ. ವಿಶೇಷವಾಗಿ ಕಾಫಿ, ಚಹಾ, ವೈನ್ ಇತ್ಯಾದಿಗಳಿಂದ ಉಂಟಾಗುವ ಕಲೆಗಳನ್ನು ತೆಗೆದುಹಾಕಲು ನೆರವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಹಾರ್ವರ್ಡ್ ಮೆಡಿಕಲ್ ಸ್ಕೂಲ್​ನ ತಂಡದ ಸದಸ್ಯರು ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ. (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

ಕೆಟ್ಟ ಉಸಿರಾಟ ಕಡಿಮೆ ಮಾಡುತ್ತೆ: ಇದ್ದಿಲಿನ ಟೂತ್‌ಪೇಸ್ಟ್‌ ಬಾಯಿಯಿಂದ ಬ್ಯಾಕ್ಟೀರಿಯಾ ಮತ್ತು ಇತರ ಮಾಲಿನ್ಯಕಾರಕಗಳನ್ನು ತೆಗೆದುಹಾಕುವ ಮೂಲಕ ಕೆಟ್ಟ ಉಸಿರಾಟವನ್ನು ಕಡಿಮೆ ಮಾಡಲು ಸಹಾಯಕ.

ಕಲೆಗಳನ್ನು ಕಡಿಮೆ ಮಾಡುತ್ತೆ: ಕೆಲವು ಅಧ್ಯಯನಗಳ ಪ್ರಕಾರ, ಚಾರ್ಕೋಲ್ ಟೂತ್‌ಪೇಸ್ಟ್‌ ಹಲ್ಲುಗಳ ಮೇಲಿನ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಲೆಗಳು ಬ್ಯಾಕ್ಟೀರಿಯಾ ಮತ್ತು ಆಹಾರದ ಅವಶೇಷಗಳ ಜಿಗುಟಾದ ಪದರವಾಗಿದೆ.

ಚಾರ್ಕೋಲ್ ಟೂತ್‌ಪೇಸ್ಟ್‌ ಅನಾನುಕೂಲಗಳೇನು?:

ಚಾರ್ಕೋಲ್ ಟೂತ್‌ಪೇಸ್ಟ್ ಅ​ನ್ನು ಸರಿಯಾದ ಪ್ರಮಾಣದಲ್ಲಿ ಬಳಸುವುದು ಸುರಕ್ಷಿತವಾಗಿದ್ದರೂ, ಅದನ್ನು ಪ್ರತೀದಿನ ಬಳಸುವುದರಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚೆನ್ನುತ್ತಾರೆ ತಜ್ಞರು.

ದಂತಕವಚ ಹಾನಿಗೊಳಿಸಬಹುದು: ಕೆಲವು ಚಾರ್ಕೋಲ್ ಟೂತ್‌ಪೇಸ್ಟ್‌ಗಳು ತುಂಬಾ ಕಠಿಣವಾಗಿವೆ. ಇವುಗಳ ಅಪಘರ್ಷಕ ಗುಣದಿಂದಾಗಿ ಹಲ್ಲಿನ ಮೇಲಿರುವ ಎನಾಮೆಲ್ ಪದರಕ್ಕೆ ಹಾನಿಯಾಗುವ ಅಪಾಯವಿದೆ. ದಂತಕವಚವು ಹಲ್ಲುಗಳಿಗೆ ರಕ್ಷಣಾತ್ಮಕ ಚಿಪ್ಪಿನಂತಿದೆ. ಇದು ಹಾನಿಗೊಳಗಾದರೆ, ಶೀತ ಹಾಗೂ ಬಿಸಿ ಪದಾರ್ಥಗಳನ್ನು ತೆಗೆದುಕೊಳ್ಳುವಾಗ ನೋವು ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಎಲ್ಲಾ ಕಲೆಗಳನ್ನು ತೆಗೆದುಹಾಕುವುದಿಲ್ಲ: ಚಾರ್ಕೋಲ್ ಟೂತ್‌ಪೇಸ್ಟ್‌ ಮೇಲ್ಮೈ ಕಲೆಗಳನ್ನು ಮಾತ್ರ ತೆಗೆದುಹಾಕುತ್ತದೆ. ಅಂದರೆ, ಕಾಫಿ, ಟೀ, ಸಿಗರೇಟುಗಳಂತಹ ವಸ್ತುಗಳಿಂದ ಉಂಟಾದ ಕಲೆಗಳನ್ನು ಇದು ತೆಗೆದುಹಾಕುತ್ತದೆ. ಆದರೆ, ಹಲ್ಲಿನ ಒಳ ಪದರಗಳ ಮೇಲೆ ಮೂಡುವ ಕಲೆಗಳನ್ನು ತೆಗೆದುಹಾಕುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

ವಸಡುಗಳಿಂದ ರಕ್ತಸ್ರಾವ: ಇದ್ದಿಲಿನ ಟೂತ್‌ಪೇಸ್ಟ್​ ಅನ್ನು ಅತಿಯಾಗಿ ಬಳಸಿದಾಗ, ಒಸಡುಗಳು ಕೆಂಪು, ಊತ, ನೋವು ಮತ್ತು ರಕ್ತಸ್ರಾವವಾಗಬಹುದು.

ಕಪ್ಪು ಪದರಿನಂತೆ ಉಳಿಯಬಹುದು: ಇದ್ದಿಲು ಕಪ್ಪು ಮತ್ತು ಇದರಿಂದ ಹಲ್ಲುಜ್ಜಿದ ನಂತರ ಬಾಯಿಯಲ್ಲಿ ಕಪ್ಪು ಪದರಿನ ರೀತಿ ಉಳಿಯಬಹುದು. ಇದನ್ನು ಸಂಪೂರ್ಣವಾಗಿ ತೆಗೆದುಹಾಕಲು ಬಾಯಿಯನ್ನು ಸಂಪೂರ್ಣವಾಗಿ ತೊಳೆಯಬೇಕಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಫ್ಲೋರೈಡ್ ಟೂತ್‌ಪೇಸ್ಟ್: ಈ ಚಾರ್ಕೋಲ್ ಟೂತ್‌ಪೇಸ್ಟ್ ಮಾತ್ರವಲ್ಲ, ಬಳಸುವ ಯಾವುದೇ ಟೂತ್‌ಪೇಸ್ಟ್‌ನಲ್ಲಿ ಫ್ಲೋರೈಡ್ ಇದೆ ಎಂದು ಖಚಿತಪಡಿಸಿಕೊಳ್ಳಬೇಕು. ಪೇಸ್ಟ್​ನಲ್ಲಿರುವ ಫ್ಲೋರೈಡ್ ಅಂಶವಿರುವುದರಿಂದ ಹಲವು ಪ್ರಯೋಜನಗಳಿವೆ. ಫ್ಲೋರೈಡ್ ಹಲ್ಲುಗಳ ಮೇಲ್ಮೈಯಲ್ಲಿರುವ ದಂತಕವಚಕ್ಕೆ ಬಂಧಿಸುತ್ತದೆ. ಅದನ್ನು ಬಲಗೊಳಿಸುತ್ತದೆ. ಆಮ್ಲಗಳು ದಾಳಿ ಮಾಡಿದಾಗ ಹಲ್ಲುಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ.

ಆಹಾರವನ್ನು ಸೇವಿಸಿದ ನಂತರ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಸಕ್ಕರೆಯನ್ನು ಆಮ್ಲಗಳಾಗಿ ಪರಿವರ್ತಿಸುತ್ತವೆ. ಈ ಆಮ್ಲಗಳು ದಂತಕವಚವನ್ನು ದುರ್ಬಲಗೊಳಿಸುತ್ತವೆ. ಇದು ಹಲ್ಲಿನ ಕೊಳೆತವನ್ನು ಉಂಟುಮಾಡುತ್ತದೆ. ಫ್ಲೋರೈಡ್ ಈ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ರಿವರ್ಸ್ ಕೂಡ ಆಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಿ: https://www.health.harvard.edu/staying-healthy/is-charcoal-toothpaste-safe-for-my-teeth

ಓದುಗರಿಗೆ ಮುಖ್ಯ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ನಿಮ್ಮ ನಾಲಿಗೆಯ ಬಣ್ಣವೇ ನಿಮ್ಮ ಆರೋಗ್ಯದ ಮುನ್ಸೂಚನೆ: ತಿಳಿಯುವುದು ಹೇಗೆ ಗೊತ್ತಾ? - Tongue Color

ETV Bharat Logo

Copyright © 2024 Ushodaya Enterprises Pvt. Ltd., All Rights Reserved.