ಮುಂಬೈ: ಬಿಗ್ ಬಾಸ್ 14 ಕಾರ್ಯಕ್ರಮದ ವೇಳೆ ಜಾಸ್ಮಿನ್ ಭಾಸಿನ್ ಜೊತೆಗಿನ ಸಂಬಂಧ ಕುರಿತು ಅಲಿ ಗೋನಿ ಮಾತನಾಡಿದ್ದಾರೆ. ನತಾಶಾ ಸ್ಟಾಂಕೋವಿಕ್ನಿಂದ ದೂರವಾದ ಬಳಿಕ ಆಲಿ ಜಾಸ್ಮಿನ್ ಭಾಸಿನ್ ಜೊತೆ ಸಂಬಂಧದಲ್ಲಿದ್ದು, ಕಾರ್ಯಕ್ರಮದಲ್ಲಿ ತಮ್ಮ ಸಂಬಂಧವನ್ನು ದೃಢಪಡಿಸಿದ್ದರು. ಇತ್ತೀಚಿಗೆ ಭರ್ತಿ ಸಿಂಗ್ ಮತ್ತು ಹರ್ಷ ಲಿಂಬಚಿಯ ಪೋಡ್ಕಾಸ್ಟ್ಗೆ ಬಂದಿದ್ದ ಅಲಿ, ಜಾಸ್ಮಿನ್ ಜೊತೆಗಿನ ಸಂಬಂಧದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಇದೇ ವೇಳೆ, ನತಾಶಾ ಜೊತೆಗಿನ ಹಳೆಯ ಸಂಬಂಧ ಕುರಿತು ಚರ್ಚಿಸಿದ್ದಾರೆ. ನಾತಾಶ ಜೊತೆ ಸಂಬಂಧ ಕಡಿದುಕೊಂಡ ಕಾರಣವನ್ನು ಬಯಲು ಮಾಡಿದ್ದಾರೆ.
ನತಾಶ ಹೆಸರನ್ನು ತೆಗೆದುಕೊಳ್ಳದೇ ಮಾತನಾಡಿದ ಅಲಿ, ತಮ್ಮ ಹಿಂದಿನ ಸಂಬಂಧದಲ್ಲಿ ತಾವು ಗಂಭೀರವಾಗಿ ಹಾಗೂ ಬದ್ಧತೆಯಿಂದ ಇದ್ದೆ. ಆದರೆ, ಆಕೆ ನಾನು ಮದುವೆಯಾದ ಮೇಲೆ ಭವಿಷ್ಯದಲ್ಲಿ ನಾವು ಪ್ರತ್ಯೇಕವಾಗಿರುವಂತೆ ತಿಳಿಸಿದಳು. ಅದು ನನಗೆ ಸೂಕ್ತ ಎನಿಸಲಿಲ್ಲ ಎಂದರು.
ನಾನು ಎಲ್ಲಿಯೇ ಹೋದರೂ ನನ್ನ ಕುಟುಂಬವನ್ನು ಕರೆದೊಯ್ಯುತ್ತೇನೆ. ನಾನು ಕುಟುಂಬದಿಂದ ಪ್ರತ್ಯೇಕವಾಗಿರಲು ಸಾಧ್ಯವಿಲ್ಲ. ಜಗತ್ತಿನ ಯಾವುದೇ ಶಕ್ತಿ ಬಂದರೂ ನಾನು ಅವರನ್ನು ತೊರೆಯುವುದಿಲ್ಲ. ಜಾಸ್ಮಿನ್ ಭಾಸಿನ್ಗಿಂತ ಮುಂಚೆಯೇ ಇದು ಎಲ್ಲರಿಗೂ ತಿಳಿದಿತ್ತು ಎಂದು ಗೋನಿ ಭಾವುಕವಾಗಿ ಮಾತನಾಡಿದ್ದಾರೆ.