ಕರ್ನಾಟಕ

karnataka

ETV Bharat / entertainment

ರಿಲೀಸ್​ಗೆ ರೆಡಿ 'ನಗುವಿನ ಹೂಗಳ ಮೇಲೆ': ಹಿರಿತೆರೆಯಲ್ಲಿ‌‌ ಮೋಡಿ ಮಾಡಲು ಸಜ್ಜಾಯ್ತು ಕಿರುತೆರೆ ಜೋಡಿ - ವೆಂಕಟ್ ಭಾರದ್ವಾಜ್

'ನಗುವಿನ ಹೂಗಳ ಮೇಲೆ' ಚಿತ್ರ ಇದೇ ವಾರ ತೆರೆಕಾಣಲಿದೆ.

Naguvina Hoogala Mele
ನಗುವಿನ ಹೂಗಳ ಮೇಲೆ

By ETV Bharat Karnataka Team

Published : Feb 6, 2024, 1:24 PM IST

ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ದೊಡ್ಡ ಮಟ್ಟದ ಅಭಿಮಾನಿಗಳ ಬಳಗ ಸಂಪಾದಿಸಿರೋ ಅದೆಷ್ಟೋ‌ ಕಲಾವಿದರು ಬಿಗ್ ಸ್ಕ್ರೀನ್​​ನಲ್ಲಿ ಮೋಡಿ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದ ಸೂಪರ್​ ಸ್ಟಾರ್​ ಯಶ್​ ಕೂಡ ಕಿರುತೆರೆಯಿಂದಲೇ ವೃತ್ತಿಜೀವನ ಆರಂಭಿಸಿದವರು. ಇದೀಗ ಕಿರುತೆರೆ ಲೋಕದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ಅಭಿದಾಸ್ ಹಾಗು ಶರಣ್ಯಾ ಶೆಟ್ಟಿ ಜೋಡಿ 'ನಗುವಿನ ಹೂಗಳ ಮೇಲೆ' ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ಶೂಟಿಂಗ್ ಮುಗಿಸಿ ಟ್ರೇಲರ್​​ನಿಂದ ಗಮನ ಸೆಳೆಯುತ್ತಿರೋ 'ನಗುವಿನ ಹೂಗಳ ಮೇಲೆ' ಚಿತ್ರತಂಡ ತಮ್ಮ ಸಿನಿಮಾ ರಿಲೀಸ್​ ಡೇಟ್ ಅನ್ನೂ ಅನೌನ್ಸ್ ಮಾಡಿದೆ.

ನಗುವಿನ ಹೂಗಳ ಮೇಲೆ

ಈಗಾಲೇ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಭಿನ್ನ ಸಿನಿಮಾಗಳ ಮೂಲಕ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವವರು ವೆಂಕಟ್ ಭಾರದ್ವಾಜ್. ಅವರೀಗ ನಗುವಿನ ಹೂಗಳ ಮೇಲೆ ಶೀರ್ಷಿಕೆಯ ಪರಿಶುದ್ಧ ಪ್ರೇಮಕಥಾನಕದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರಿಗೆ ಮುಖಾಮುಖಿಯಾಗಲಿದ್ದಾರೆ. ಪ್ರೇಮ ಕಥನದ ಚಿತ್ರಗಳೆಂದರೆ ಎಂದಿಗೂ ಮುಸುಕಾಗದಂಥ ಮೋಹವೊಂದು ಪ್ರೇಕ್ಷಕರಲ್ಲಿರುತ್ತದೆ. ಅದನ್ನು ಮತ್ತಷ್ಟು ಮುದಗೊಳಿಸುವ ಲಕ್ಷಣಗಳಿರೋ ಈ ಸಿನಿಮಾ ಟ್ರೇಲರ್​​​, ಒಂದಿಡೀ ಚಿತ್ರದ ಸಾರವನ್ನು ಪ್ರೇಕ್ಷಕರ ಮುಂದಿಟ್ಟಿದೆ. ಟ್ರೇಲರ್​ ನೋಡಿದವರು ಸಿನಿಮಾ ವೀಕ್ಷಿಸುವ ಕುತೂಹಲ ವ್ಯಕ್ತಪಡಿಸಿದ್ದರು. ಇದೇ ವಾರ ಸಿನಿಮಾ ಬಿಡುಗಡೆಯಾಗಲಿದೆ.

ನಗುವಿನ ಹೂಗಳ ಮೇಲೆ

ಕಿರುತೆರೆಯಲ್ಲಿ ಹೆಸರು ಮಾಡಿರುವ ಅಭಿದಾಸ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಶರಣ್ಯಾ ಶೆಟ್ಟಿ ನಾಯಕಿಯಾಗಿ ಜೊತೆಯಾಗಿದ್ದಾರೆ. ಇವರ‌ ಜೊತೆಗೆ ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಸೇರಿದಂತೆ ಮುಂತಾದವರ ತಾರಾಗಣವಿದೆ.

ನಗುವಿನ ಹೂಗಳ ಮೇಲೆ

ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಪ್ರಮೋದ್ ಭಾರತೀಯ ಛಾಯಾಗ್ರಹಣ, ಟೈಗರ್ ಶಿವು ಸಾಹಸ ನಿರ್ದೇಶನ ಮತ್ತು ಚಂದನ್ ಪಿ ಸಂಕಲನ ಈ ಚಿತ್ರಕ್ಕಿದೆ. ಎಲ್ಲಾ ವಯೋಮಾನದವರ ಮನ ಮುಟ್ಟುವ ಕಥೆ ಹೊಂದಿರುವ ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕರಾದ ಕೆ.ಕೆ ರಾಧಾ ಮೋಹನ್ ಅವರು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಆರ್ ಚಂದ್ರು ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ರೆಡಿ

ಈಗಾಗಲೇ ಹಾಡುಗಳ ಮೂಲಕ ಮತ್ತು ಒಟ್ಟಾರೆ ಕಥೆಯ ಒಂದಷ್ಟು ಸುಳಿವುಗಳ ಮೂಲಕ ಈ 'ನಗುವಿನ ಹೂಗಳ ಮೇಲೆ' ಸಿನಿಮಾ, ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ವೆಂಕಟ್ ಭಾರದ್ವಾಜ್ ನಿರ್ದೇಶನದ ಈ ಚಿತ್ರ ಇದೇ ಫೆಬ್ರವರಿ ತಿಂಗಳ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಚಿಲಿ ಕಾಳ್ಗಿಚ್ಚು: ಸಾವಿನ ಸಂಖ್ಯೆ 123ಕ್ಕೆ ಏರಿಕೆ; ಹೃದಯವಿದ್ರಾವಕ ಘಟನೆಯ ಫೋಟೋಗಳಿವು

ABOUT THE AUTHOR

...view details