ಕರ್ನಾಟಕ

karnataka

ETV Bharat / entertainment

ಇನ್ಮುಂದೆ ಸಿನಿಮಾ ಮಾಡಲ್ವಾ ರಶ್ಮಿಕಾ ಮಂದಣ್ಣ? ಛಾವಾ ಈವೆಂಟ್​ನಲ್ಲಿ ನಿವೃತ್ತಿ ಬಗ್ಗೆ ನಟಿ ಹೇಳಿದ್ದಿಷ್ಟು! - RASHMIKA MANDANNA

ಬಹುನಿರೀಕ್ಷಿತ ಚಿತ್ರ 'ಛಾವಾ' ಟ್ರೇಲರ್​ ರಿಲೀಸ್​ ಈವೆಂಟ್​ನಲ್ಲಿ ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ 'ಚಿತ್ರರಂಗದಿಂದ ನಿವೃತ್ತಿ' ಬಗ್ಗೆ ಮಾತನಾಡಿದ್ದಾರೆ.

Actress Rashmika Mandanna
ನಟಿ ರಶ್ಮಿಕಾ ಮಂದಣ್ಣ (Photo: ANI)

By ETV Bharat Entertainment Team

Published : Jan 23, 2025, 2:55 PM IST

ಬಾಲಿವುಡ್​ ಸೂಪರ್​ ಸ್ಟಾರ್ ವಿಕ್ಕಿ ಕೌಶಲ್ ಹಾಗೂ ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ತೆರೆಹಂಚಿಕೊಂಡಿರುವ ಪೀರಿಯಾಡಿಕಲ್​​ ಡ್ರಾಮಾ 'ಛಾವಾ' ಬಿಡುಗಡೆ ಹೊಸ್ತಿಲಿನಲ್ಲಿದೆ. ಈ ಬಹುನಿರೀಕ್ಷಿತ ಚಿತ್ರ ಫೆಬ್ರವರಿ 14ರಂದು ತೆರೆಕಾಣಲಿದೆ. ಬಿಡುಗಡೆ ಹೊಸ್ತಿಲಿನಲ್ಲಿರುವ ಸಿನಿಮಾದ ಪ್ರಚಾರ ಪ್ರಾರಂಭವಾಗಿದ್ದು, ಚಿತ್ರ ತಯಾರಕರು ನಿನ್ನೆಯಷ್ಟೇ ಮುಂಬೈನಲ್ಲಿ ಅದ್ಧೂರಿ ಟ್ರೇಲರ್ ರಿಲೀಸ್​ ಈವೆಂಟ್​ ಹಮ್ಮಿಕೊಂಡಿದ್ದರು. ಆದರೆ ಕಾರ್ಯಕ್ರಮದಲ್ಲಿ ನಾಯಕ ನಟಿ ರಶ್ಮಿಕಾ ಮಂದಣ್ಣ ತಮ್ಮ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ನಟಿಯ ಆ ಹೇಳಿಕೆಗಳೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇದು ತಮಾಷೆಯೋ- ನಿಜವೋ?:ಮರಾಠಾ ರಾಜ ಛತ್ರಪತಿ ಸಂಭಾಜಿ ಮಹಾರಾಜರ ಕಥೆಯನ್ನಾಧರಿಸಿದ ಸಿನಿಮಾವಿದು. ವಿಕ್ಕಿ ಕೌಶಲ್​​ ಮುಖ್ಯಭೂಮಿಕೆ ವಹಿಸಿದ್ದರೆ, ರಶ್ಮಿಕಾ ಮಂದಣ್ಣ ಸಂಭಾಜಿ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಸಿನಿಮಾ ಬರುವ ತಿಂಗಳು ಬಿಡುಗಡೆ ಆಗಲಿದ್ದು, ಸಿನಿಮಾ ನೋಡುವ ಅಭಿಮಾನಿಗಳ ಕಾತರ ಹೆಚ್ಚಾಗಿದೆ. ಆದರೆ ಈವೆಂಟ್​ನಲ್ಲಿ ರಶ್ಮಿಕಾ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ಅವರು ತಮಾಷೆಯಾಗಿ ಮಾತನಾಡಿದ್ರೂ, ಒಂದೊಮ್ಮೆ ಇದು ನಿಜವಾದ್ರೆ ಎಂದು ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ನನಗೆ ಆಶ್ಚರ್ಯವಾಯ್ತು:ಈವೆಂಟ್​ನಲ್ಲಿ ಮಾತನಾಡಿದ ನಟಿ, "ಈ ಚಿತ್ರದಲ್ಲಿ ಸಂಭಾಜಿ ಅವರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದ್ದು ನನಗೆ ಗೌರವವೆನಿಸುತ್ತದೆ. ನಟಿಯಾಗಿ ಇನ್ನೇನು ಬಯಸಬಹುದು?, ಈ ಚಿತ್ರದ ನಂತರ ನಾನು ಸಂತೋಷದಿಂದ ನಿವೃತ್ತಿ ಹೊಂದಬಹುದು ಎಂದು ನಾನೊಮ್ಮೆ ನಿರ್ದೇಶಕರಿಗೆ ತಿಳಿಸಿದ್ದೆ. ಇದೊಂದು ಗ್ರೇಟ್​ ರೋಲ್​​. ಚಿತ್ರೀಕರಣದ ಸಮಯದಲ್ಲಿ ಹಲವು ಬಾರಿ ಭಾವುಕಳಾಗಿದ್ದೆ. ಟ್ರೇಲರ್ ನೋಡಿದ ನಂತರವೂ ಭಾವುಕಳಾದೆ. ಇಲ್ಲಿ ವಿಕ್ಕಿ ನನಗೆ ದೇವರಂತೆ ಕಾಣುತ್ತಾರೆ. ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರು ಈ ಚಿತ್ರಕ್ಕಾಗಿ ನನ್ನನ್ನು ಸಂಪರ್ಕಿಸಿದಾಗ ನನಗೆ ತುಂಬಾನೇ ಆಶ್ಚರ್ಯವಾಯಿತು. ನಾನೇನೂ ಯೋಚಿಸದೇ ತಕ್ಷಣ ಒಪ್ಪಿಕೊಂಡೆ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡೆ. ಇಡೀ ಚಿತ್ರ ತಂಡ ತುಂಬಾನೇ ಬೆಂಬಲ ನೀಡಿತು. ಇದರಲ್ಲಿನ ಪಾತ್ರಗಳು ಎಲ್ಲರ ಮೇಲೆ ಪರಿಣಾಮ ಬೀರುವ ಭರವಸೆ ಇದೆ" ಎಂದು ತಿಳಿಸಿದರು.

ಇದನ್ನೂ ಓದಿ:ರಾಣಿಯಂತೆ ರೆಡಿಯಾಗಿ ವೀಲ್​ ಚೇರ್​​​ನಲ್ಲಿ ಬಂದ ರಶ್ಮಿಕಾ ಮಂದಣ್ಣ: ಕೆಲಸದ ಮೇಲಿನ ಬದ್ಧತೆ ಮೆಚ್ಚಿದ ಫ್ಯಾನ್ಸ್

ಛಾವಾ ಬಾಲಿವುಡ್​ ನಿರ್ದೇಶಕ ಲಕ್ಷ್ಮಣ್ ಉಟೇಕರ್ ನಿರ್ದೇಶನದ ಚಿತ್ರವಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರ ಕಥೆಯನ್ನು ಆಧರಿಸಿದೆ. ಚಿತ್ರದಲ್ಲಿ ರಶ್ಮಿಕಾ ಸಂಭಾಜಿ ಪತ್ನಿ ಯೇಸುಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬುಧವಾರ ಬಿಡುಗಡೆಯಾದ ಚಿತ್ರದ ಟ್ರೇಲರ್‌ಗೆ ಬಹುತೇಕ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಇದನ್ನೂ ಓದಿ:'ಒಳ್ಳೆ ವ್ಯಕ್ತಿತ್ವ ಗೆಲ್ಲಬೇಕು, ಹಾಗಾಗಿ ಹನುಮಂತು ವಿಜೇತರಾಗಬೇಕು': ಮಂಜು ಆಪ್ತ ಸ್ನೇಹಿತೆ ಗೌತಮಿ

ಇತ್ತೀಚೆಗೆ ಜಿಮ್‌ನಲ್ಲಿ ಗಾಯಗೊಂಡಿದ್ದ ರಶ್ಮಿಕಾ ಮಂದಣ್ಣ, ಮುಂಬೈನಲ್ಲಿ ನಡೆದ ಪ್ರಮೋಶನಲ್​ ಈವೆಂಟ್​ಗೆ ಭಾಗವಹಿಸಿದ್ದರು. ಕುಂಟುತ್ತಲೇ ಹೆಜ್ಜೆ ಹಾಕಿದರು. ವೀಲ್​ ಚೇರ್​ ಸಹಾಯ ಪಡೆದರು. ವೇದಿಕೆ ಮೇಲೆ ಬರಲು ವಿಕ್ಕಿ ಕೌಶಲ್​ ನಟಿಗೆ ಸಹಾಯ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿವೆ.

ABOUT THE AUTHOR

...view details