ಕನ್ನಡ ಚಿತ್ರರಂಗವೀಗ ಹೊಸ ದಿಕ್ಕಿಗೆ ಹೊರಳಿದೆ. ಹೊಸ ಹೊಸ ಪ್ರಯತ್ನಗಳು ನಡೆಯುತ್ತಿವೆ. ಅದರ ಭಾಗವಾಗಿ ತಯಾರಾಗಿರುವ 'ಮರ್ಫಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಮರ್ಫಿ ಚಿತ್ರದ ಡ್ಯಾನ್ಸಿಂಗ್ ನಂಬರ್ ಅನಾವರಣಗೊಂಡಿದೆ.
'ಮೊಗಾಚಿ' ಎಂಬ ಹಾಡಿಗೆ ಧನಂಜಯ್ ರಂಜನ್ ಪದ ಗೀಚಿದ್ದು, ಅರ್ಜುನ್ ಜನ್ಯ ಟ್ಯೂನ್ ಹಾಕಿದ್ದಾರೆ. ಗೋವಾದ ಪೋರ್ಚುಗೀಸ್ ಮತ್ತು ಕೊಂಕಣಿ ಸಂಸ್ಕೃತಿಯನ್ನು ಬಿಂಬಿಸಿರುವ ಹಾಡಿಗೆ ರಜತ್ ಹೆಗ್ಡೆ ಮತ್ತು ನಾಡಿಯಾ ರೆಬೆಲೊ ಧ್ವನಿಯಾಗಿದ್ದಾರೆ. ಮಾಧುರಿ ಪರಶುರಾಮ್ ಅವರ ನೃತ್ಯ ಸಂಯೋಜನೆ ಹಾಡಿನ ತೂಕ ಹೆಚ್ಚಿಸಿದೆ.
'ಮರ್ಫಿ' ಸಿನಿಮಾ ಸಾಂಗ್ 'ಮೊಗಾಚಿ' ರಿಲೀಸ್ (ETV Bharat) 'ರಾಂಚಿ' ಶೀರ್ಷಿಕೆಯ ಸಿನಿಮಾ ಮೂಲಕ ಗಮನ ಸೆಳೆದಿದ್ದ ಯುವ ನಟ ಪ್ರಭು ಮುಂಡ್ಕುರ್ ಅವರೀಗ ತಮ್ಮ ಹೊಸ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. 'ಮರ್ಫಿ' ಮೂಲಕ ಕನ್ನಡಿಗರ ಮನ ಗೆಲ್ಲಲು ಅಣಿಯಾಗಿದ್ದಾರೆ. ಈ ಹಿಂದೆ 'ಮರ್ಫಿ' ತಂಡದಿಂದ 'ಸಮಯ' ಎಂಬ ಮೋಹಕ ಹಾಡು ಅನಾವರಣಗೊಂಡಿತ್ತು. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ಈ ಹಾಡಿಗೂ ಧನಂಜಯ್ ರಂಜನ್ ಅವರ ಸಾಹಿತ್ಯವಿದೆ. ರಜತ್ ಹೆಗ್ಡೆ ಅವರ ಕಂಠಸಿರಿಯಲ್ಲಿ ಹಾಡು ಮೂಡಿ ಬಂದಿದ್ದು, ನಾಯಕ ನಾಯಕಿಯರು ಕಾಣಿಸಿಕೊಂಡಿದ್ದರು.
'ಮರ್ಫಿ' ಸಿನಿಮಾ ಸಾಂಗ್ 'ಮೊಗಾಚಿ' ರಿಲೀಸ್ (ETV Bharat) ಸೆನ್ಸಾರ್ ಪರೀಕ್ಷೆಯಲ್ಲಿ ಯು ಸರ್ಟಿಫಿಕೇಟ್ನೊಂದಿಗೆ ಸಿನಿಮಾ ಪಾಸಾಗಿದೆ. ಎಂಟರ್ಟೈನ್ಮೆಂಟ್ ಜೊತೆ ಜೊತೆಗೆ ಎಮೋಷನಲ್ ಅಂಶಗಳನ್ನೂ ಸಹ ಅಚ್ಚುಕಟ್ಟಾಗಿ ಕಟ್ಟಿ ಕೊಡಲಾಗಿದೆ. ಮನೆಮಂದಿ ಕುಳಿತು ನೋಡುವಂಥ ಸಿನಿಮಾ ಅನ್ನೋದು ಚಿತ್ರತಂಡದ ಅಭಿಪ್ರಾಯ.
'ಮರ್ಫಿ' ಸಿನಿಮಾ ಸಾಂಗ್ 'ಮೊಗಾಚಿ' ರಿಲೀಸ್ (ETV Bharat) ಇದನ್ನೂ ಓದಿ:ಪ್ರಶಾಂತ್ ನೀಲ್ - ಜೂ.NTR ಸಿನಿಮಾ ಶೂಟಿಂಗ್ ಯಾವಾಗ? ಇಲ್ಲಿದೆ ಅಪ್ಡೇಟ್ಸ್ - NTR31
ಬಿಎಸ್ಪಿ ವರ್ಮಾ ಈ ಮರ್ಫಿ ಚಿತ್ರಕ್ಕೆ ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರಭು ಮುಂಡ್ಕುರ್ ಅವರು ವರ್ಮಾ ಜೊತೆಗೂಡಿ ಚಿತ್ರಕಥೆ ಬರೆದಿದ್ದಾರೆ. ರೊಮ್ಯಾಂಟಿಕ್ ಡ್ರಾಮಾ ಎಳೆಯ ಸಿನಿಮಾದಲ್ಲಿ ದೊಡ್ಡ ತಾರಾಬಳಗ ಇದೆ. ಪ್ರಭು ಮುಂಡ್ಕುರ್ ಜೊತೆ ರೋಶಿನಿ ಪ್ರಕಾಶ್, ಇಳಾ ವೀರಮಲ್ಲ ಹಾಗೂ ದತ್ತಣ್ಣ, ಅಶ್ವಿನಿ ರಾವ್ ಪಲ್ಲಕ್ಕಿ, ಮಹಾಂತೇಶ್ ಹೀರೇಮಠ್, ರಾಮಪ್ರಸಾದ್ ಬಾಣಾವರ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ:ಬಚ್ಚನ್ ಕುಟುಂಬದೊಂದಿಗಿನ ಐಶ್ವರ್ಯಾ ರೈ ಫೋಟೋಗಳಿವು: ಮರೆಯಾದ ಕ್ಷಣಗಳ ಮೆಲುಕು - Bachchan Family
ನವೀನ್ ರೆಡ್ಡಿ, ಪ್ರಭು, ವರ್ಮಾ ಸಂಭಾಷಣೆ ಬರೆದಿದ್ದು, ಮಹೇಶ ತೊಗಟ ಅವರ ಸಂಕಲನ ಈ ಚಿತ್ರಕ್ಕಿದೆ. ಆದರ್ಶ ಆರ್ ಅವರ ಕ್ಯಾಮರಾ ಕೈಚಳಕವಿರುವ ಚಿತ್ರವನ್ನು ಸೋಮಣ್ಣ ಟಾಕೀಸ್ ಮತ್ತು ವರ್ಣಸಿಂಧು ಸ್ಟುಡಿಯೋಸ್ ಬ್ಯಾನರ್ ಅಡಿ ರಾಮ್ ಕೋ ಸೋಮಣ್ಣ ಹಾಗೂ ಬಿಎಸ್ಪಿ ವರ್ಮಾ ನಿರ್ಮಾಣ ಮಾಡಿದ್ದಾರೆ. ಅಕ್ಟೋಬರ್ 18ಕ್ಕೆ 'ಮರ್ಫಿ' ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲ್ಲಲಿದೆ. ಸಿನಿಪ್ರಿಯರು ಮರ್ಫಿ ಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.