ಕರ್ನಾಟಕ

karnataka

ETV Bharat / entertainment

ಮಿಸ್ ಆ್ಯಂಡ್ ಮಿಸೆಸ್ ಇಂಡಿಯಾ ಕರ್ನಾಟಕ 2024: ವಿಜೇತರ ಪಟ್ಟಿ ಇಲ್ಲಿದೆ - Miss and Mrs India Karnataka - MISS AND MRS INDIA KARNATAKA

ಬೆಂಗಳೂರಿನ ಕಿಂಗ್ಸ್‌ ಮೆಡೋಸ್‌ನಲ್ಲಿ ಮಿಸ್ ಆ್ಯಂಡ್ ಮಿಸೆಸ್ ಇಂಡಿಯಾ ಕರ್ನಾಟಕ 2024ರ 8ನೇ ಆವೃತ್ತಿಯ ಫ್ಯಾಷನ್‌ ಶೋ ಆಗಸ್ಟ್ 29ರಿಂದ 3 ದಿನಗಳ ಕಾಲ ನಡೆಯಿತು. ಹಲವು ವಿಭಾಗಗಳಲ್ಲಿ ವಿಜೇತರಾದವರ ಹೆಸರು ಇಲ್ಲಿದೆ.

Miss and Mrs India Karnataka 2024
ಮಿಸ್ ಆ್ಯಂಡ್ ಮಿಸೆಸ್ ಇಂಡಿಯಾ ಕರ್ನಾಟಕ 2024 ಸ್ಪರ್ಧೆ (ETV Bharat)

By ETV Bharat Karnataka Team

Published : Sep 3, 2024, 4:18 PM IST

ಬೆಂಗಳೂರು: ಮಿಸ್ ಆ್ಯಂಡ್ ಮಿಸೆಸ್ ಇಂಡಿಯಾ ಕರ್ನಾಟಕ 2024ರ 8ನೇ ಆವೃತ್ತಿಯ ಗ್ಯ್ರಾಂಡ್‌ ಫಿನಾಲೆ ನಗರದಲ್ಲಿ ಅದ್ಧೂರಿಯಾಗಿ ಜರುಗಿತು. ವಿವಾಹಿತ ಮಹಿಳೆಯರ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆಯಾಗಿ ಹೊರಹೊಮ್ಮಿದೆ.

ನಗರದ ಕಿಂಗ್ಸ್‌ ಮೆಡೋಸ್‌ನಲ್ಲಿ ಮಿಸ್ ಆ್ಯಂಡ್ ಮಿಸೆಸ್ ಇಂಡಿಯಾ ಕರ್ನಾಟಕ 2024ರ 8ನೇ ಆವೃತ್ತಿಯ ಫ್ಯಾಷನ್‌ ಶೋ ಆಗಸ್ಟ್ 29ರಿಂದ 3 ದಿನಗಳ ಕಾಲ ನಡೆಯಿತು. ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಆಗಸ್ಟ್ 31ರ ಸಂಜೆ ಗ್ರ್ಯಾಂಡ್‌ ಫಿನಾಲೆ ನಡೆದಿದ್ದು, ಮಿಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ಗೆಲುವಿನ ಕಿರೀಟವನ್ನು ಡಾ.ಅಕ್ಷತಾ ಅಶೋಕ್ ಕುಲಕರ್ಣಿ, ಮಿಸೆಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ಕಿರೀಟವನ್ನು ಡಾ. ನಿಶಿತಾ ಶೆಟ್ಟಿಯಾನ್, ಮಿಸೆಸ್ ಇಂಡಿಯಾ ಅರ್ಥ್ ಇಂಟರ್‌ನ್ಯಾಶನಲ್ ಕಿರೀಟವನ್ನು ಡಾ. ಶ್ರುತಿ ಬಲ್ಲಾಳ್ ಮುಡಿಗೇರಿಸಿಕೊಂಡಿದ್ದರೆ, ಕ್ಲಾಸಿಕ್ ಮಿಸೆಸ್ ಇಂಡಿಯಾ ಅರ್ಥ್ ಇಂಟರ್‌ನ್ಯಾಶನಲ್ ಗೆಲುವಿಗೆ ಪ್ರಗತಿ ಅನೂನ್ ಪಾತ್ರರಾಗಿದ್ದಾರೆ.

ರಾಜ್ಯದ ವಿವಿಧೆಡೆಗಳಿಂದ ಸುಮಾರು 35 ಸ್ಪರ್ಧಿಗಳು ಈ ಫ್ಯಾಷನ್‌ ಶೋ ನಲ್ಲಿ ಪಾಲ್ಗೊಂಡಿದ್ದರು. 3 ದಿನಗಳ ಸ್ಪರ್ಧೆಯಲ್ಲಿ ಸ್ಪರ್ಧಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಅಲ್ಲದೇ ಸ್ಪರ್ಧಿಗಳು ಲಗೋರಿ, ಖೋ ಖೋ ಮತ್ತು ಗಿಲ್ಲಿ ದಾಂಡು ಅಂತಹ ಸಾಂಪ್ರದಾಯಿಕ ಭಾರತೀಯ ಆಟಗಳಲ್ಲಿ ತೊಡಗಿಸಿಕೊಂಡು, ತಮ್ಮ ಕ್ರೀಡಾ ಮನೋಭಾವ ಪ್ರದರ್ಶಿಸಿದರು.

ಮಿಸ್ ಆ್ಯಂಡ್ ಮಿಸೆಸ್ ಇಂಡಿಯಾ ಕರ್ನಾಟಕ 2024 ಸ್ಪರ್ಧೆ (ETV Bharat)

ಈ ಕುರಿತು ಕಾರ್ಯಕ್ರಮದ ಮುಖ್ಯ ಆಯೋಜಕಿ ಪ್ರತಿಭಾ ಸೌಂಶಿಮಠ ಮಾತನಾಡಿ, ಮಿಸ್ ಆ್ಯಂಡ್ ಮಿಸೆಸ್ ಇಂಡಿಯಾ ಕರ್ನಾಟಕ ಕಾರ್ಯಕ್ರಮವು ವೈವಿಧ್ಯತೆಯಲ್ಲಿ ಪ್ರತಿಭೆಯನ್ನು ಅರಸುವ ಏಕೈಕ ಸೌಂದರ್ಯ ಸ್ಪರ್ಧೆಯಾಗಿದೆ. ಕಳೆದ ಹಲವು ವರ್ಷಗಳಿಂದ ಈ ಸ್ಪರ್ಧೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಎಲ್ಲಾ ವಯೋಮಾನದ ಮಹಿಳೆಯರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಒದಗಿಸಲಾಗಿದೆ ಎಂದರು.

ಕಾರ್ಯಕ್ರಮದ ತೀರ್ಪುಗಾರರಾಗಿ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಅವಿನಾಶ್‌, ಜಯಂತಿ ಬಲ್ಲಾಳ್‌, ಕರ್ನಲ್‌ ಡಾ.ಎಂ.ಸಿ ಶರ್ಮಾ ವಿಜೇತರನ್ನು ಆಯ್ಕೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೀಡಿಯಾ ಕನೆಕ್ಟ್‌ ಸಿಇಒ ದಿವ್ಯಾ ರಂಗೇನಹಳ್ಳಿ, ಹಿರಿಯ ನಟ ಮೂಗು ಸುರೇಶ್, ಪ್ರೀಮಿಯಂ ಲಾಂಜ್‌ವೇರ್ ಬ್ರ್ಯಾಂಡ್ ಯೆಲ್ಲೊ ಬ್ಲೂಮ್‌ನ ಸ್ಥಾಪಕ ಶುಭ್ರ, ಅಂತಾರಾಷ್ಟ್ರೀಯ ಡಾಗ್‌ ಬ್ರೀಡರ್‌ ಹಾಗೂ ಕಡಬಮ್‌ ಪ್ರತಿಷ್ಠಾನದ ಸಿಇಒ ಸತೀಶ್‌ ಕಡಬಮ್‌, ಪ್ರಭು ಮೇತಿಮಠ್‌, ಶ್ರೀಧರ್‌ ನಾಯಕ್‌, ನಟ ಭಾರ್ಗವ್‌, ನಿರ್ದೇಶಕ ಲೋಕೇಶ್‌ ಮತ್ತು ಆದತ್‌, ಕೊರಿಯೋಗ್ರಾಫರ್‌ ರಾಜ್‌ಕಮಲ್‌ ಹಾಗೂ ಕಿಂಗ್ಸ್‌ ಮೆಡೋಸ್‌ನ ಜೋಸೆಫ್‌ ಪ್ರಭು ಉಪಸ್ಥಿತರಿದ್ದರು.

ಮಿಸ್ ಆ್ಯಂಡ್ ಮಿಸೆಸ್ ಇಂಡಿಯಾ ಕರ್ನಾಟಕ 2024ರ ವಿಜೇತರ ಪಟ್ಟಿ:

  • ಮಿಸ್ ಇಂಡಿಪೆಂಡೆಂಟ್ ಇಂಟರ್​​ನ್ಯಾಷನಲ್ ವಿಜೇತೆ - ಡಾ.ಅಕ್ಷತಾ ಅಶೋಕ್ ಕುಲಕರ್ಣಿ.
  • ಮಿಸೆಸ್ ಇಂಡಿಪೆಂಡೆಂಟ್ ಇಂಟರ್​ನ್ಯಾಷನಲ್ ವಿಜೇತೆ - ಡಾ.ನಿಶಿತಾ ಶೆಟ್ಟಿಯಾನ್.
  • ಮಿಸೆಸ್ ಅರ್ಥ್ ಇಂಟರ್‌ನ್ಯಾಶನಲ್ - ಡಾ.ಶ್ರುತಿ ಬಲ್ಲಾಳ್.
  • ಕ್ಲಾಸಿಕ್ ಮಿಸೆಸ್ ಅರ್ಥ್ ಇಂಟರ್‌ನ್ಯಾಶನಲ್ - ಪ್ರಗತಿ ಅನೂನ್.
  • ಮಿಸ್ ಇಂಡಿಯಾ ಕರ್ನಾಟಕ 2024ರ ವಿಜೇತೆ - ವಿನಯ ನಿತ್ಯಾನಂದ.
  • ಮೊದಲ ರನ್ನರ್ ಅಪ್ - ದೀಶಾಲ್ ಗ್ಲೋರಿಯಾ ಟೌರೊ.
  • ಎರಡನೇ ರನ್ನರ್ ಅಪ್ - ಕೀರ್ತಿ ಚಾಮರಾಜ.
  • ಮಿಸೆಸ್ ಇಂಡಿಯಾ ಕರ್ನಾಟಕ 2024ರ ವಿಜೇತೆ - ದೇವಿ ಶ್ರೀರಾಮ್.
  • ಮೊದಲ ರನ್ನರ್ ಅಪ್ - ಡಾ.ರಶ್ಮಾ ಮೋಹಿತ್ ಶೆಟ್ಟಿ.
  • ಎರಡನೇ ರನ್ನರ್ ಅಪ್ - ವಿದ್ಯಾ ಸಂಪತ್ ಕರ್ಕೇರ.
  • ಮೂರನೇ ರನ್ನರ್ ಅಪ್​​ - ಸ್ವಾತಿ ರಾವ್ ಶರತ್.
  • ನಾಲ್ಕನೇ ರನ್ನರ್ ಅಪ್ - ಸಾಕ್ಷಿ ಧೀಮಾನ್.
  • ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ 2024ರ ವಿಜೇತೆ - ಸಬಿತಾ ರಂಜಿತಾ ರಾವ್.
  • ಮೊದಲ ರನ್ನರ್ ಅಪ್ - ಡಾ.ಶಾಂತ ಕುಮಾರಿ ಎಸ್‌.
  • ಎರಡನೇ ರನ್ನರ್ ಅಪ್ - ರೂಪತಾರಾ ಶಿವಾಜಿ ಸಾಂಗ್ಲಿಕರ್.
  • ಮೂರನೇ ರನ್ನರ್ ಅಪ್ - ಡಾ.ಅರ್ಚನಾ ಭಟ್.
  • ನಾಲ್ಕನೇ ರನ್ನರ್ ಅಪ್ - ಪ್ರಿಯಾ ರಾಜು ಅಯ್ಯಂಗಾರ್.
  • ಸೂಪರ್ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ 2024ರ ವಿಜೇತೆ - ನಂದಿನಿ ವಿ. ಕಾಮತ್.
  • ಮೊದಲ ರನ್ನರ್ ಅಪ್ - ಸಿಎಂ ಕಾವೇರಮ್ಮ.
  • ಎರಡನೇ ರನ್ನರ್‌ ಅಪ್‌ - ಮಾಲಿನಿ ಸತೀಶ್ ಅನ್ವೇಕರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ:ತೆಲಂಗಾಣ, ಆಂಧ್ರ ಪ್ರವಾಹ: ತಲಾ 50 ಲಕ್ಷ ರೂ. ದೇಣಿಗೆ ಘೋಷಿಸಿದ ಜೂ. ಎನ್​ಟಿಆರ್​: 'ಕಲ್ಕಿ' ನಿರ್ಮಾಪಕರಿಂದ 25 ಲಕ್ಷ ಡೊನೇಶನ್​ - Jr NTR Donation

ABOUT THE AUTHOR

...view details