ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಆಧಾರಿತ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ. ಸಿನಿಪ್ರಿಯರೂ ಕೂಡಾ ಡಿಫ್ರೆಂಟ್ ಸ್ಟೋರಿಗಳನ್ನೇ ಬಯಸಿದ್ದಾರೆ. ಅದರಂತೆ ವಿಭಿನ್ನ ಕಥಾಹಂದರದೊಂದಿಗೆ ಬರಲು 'ರಾವುತ' ರೆಡಿಯಾಗಿದ್ದಾನೆ. ಇದೇ ಜನವರಿ 31ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.
ಶ್ರೀ ವಿಶ್ವಕರ್ಮ ಸಿನಿಮಾಸ್ ನಿರ್ಮಾಣದ 'ರಾವುತ' ಒಂದು ವಿಭಿನ್ನ ಪ್ರಯತ್ನ. ಗಂಡುಗಲಿ ಕುಮಾರರಾಮ ಕಾಲದ ಸಾಮಾನ್ಯ ಜನರ ಮತ್ತು ಸಾಧಕರ ಕಥೆ. ಸಿನಿಮಾ ಎಂದಾಗ ಸಾಹಸ, ಪ್ರೀತಿ, ದ್ವೇಷದಂತಹ ಹಲವು ಮಜಲುಗಳನ್ನಿಟ್ಟುಕೊಂಡು ಬರುತ್ತೇವೆ. ಆದ್ರೆ ರಾವುತ ಸಿನಿಮಾ ಹಾಗಿಲ್ಲ. ಅದರ ಎಳೆಯೇ ಕೂತೂಹಲಭರಿತ. ಅದೇನಂದ್ರೆ, ಸಾವಿನ ನಂತರ ಏನಾಗುತ್ತದೆ ಅನ್ನೋದನ್ನು ಕಥೆಯ ಸಾರವಾಗಿಸಿದ್ದಾರೆ ಕಥೆಗಾರ ಸಿದ್ದು ವಜ್ರಪ್ಪ. ಸಾವಿನ ನಂತರದ ಪಯಣ ತಿಳಿಸುತ್ತದೆ ಎಂದು ಹೇಳಿರುವ ನಿರ್ಮಾಪಕರು ಜನವರಿ 31ರಂದು ತಮ್ಮ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ನ್ಯಾಯಾಲಯಕ್ಕೆ ಹಾಜರಾದ ನಟಿ ರಮ್ಯಾ: ಏನಿದು ಪ್ರಕರಣ?
ಈ ಸಿನಿಮಾವು ಕನ್ನಡದ ಇನ್ನೊಂದು ನಾಗಮಂಡಲ ಆಗುವ ಲಕ್ಷಣವಿದೆ. ಅದಕ್ಕೆ ಕಾರಣ ಸಂಪೂರ್ಣ ಉತ್ತರ ಕರ್ನಾಟಕ ಶೈಲಿಯ ಸಂಸ್ಕೃತಿಯ ದೃಶ್ಯ ಚಿತ್ರಣವಿರುವುದೇ ಇದಕ್ಕೆ ಕಾರಣ ಎಂದೂ ಇತ್ತೀಚಿಗೆ ನಡೆದ ಪ್ರೀಮಿಯರ್ ಶೋ ನೋಡಿದ ಗಣ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿದ್ರೂ ಆಸ್ಕರ್ಗೆ ಎಂಟ್ರಿ; ಇದು ಸೂರ್ಯ ನಟನೆಯ 'ಕಂಗುವ' ಸಾಧನೆ
ಜನವರಿ 31ಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಲು ಚಿತ್ರಮಂದಿರಕ್ಕೆ ಬರಲಿದೆ ರಾವುತ. ಹೆಸರಾಂತ ನಿರ್ಮಾಪಕ ಜಾಕ್ ಮಂಜು ಅವರು ಶಾಲಿನಿ ಆರ್ಟ್ಸ್ ಸಂಸ್ಥೆಯ ಮೂಲಕ ರಾಜ್ಯಾದ್ಯಂತ ಬಿಡುಗಡೆಗೊಳಿಸುತ್ತಿದ್ದಾರೆ. ನಾಯಕನಾಗಿ ರಾಜ್ ಪ್ರವೀಣ್, ನಾಯಕಿಯಾಗಿ ಭವಾನಿ ಪುರೋಹಿತ್ ಅಭಿನಯಿಸಿದ್ದಾರೆ. ನಿರ್ಮಾಪಕ ಈರಣ್ಣ ಸುಭಾಷ್ ಬಡಿಗೇರ್, ನಿರ್ದೇಶಕ ಸಿದ್ದು ವಜ್ರಪ್ಪ ಸಿನಿಮಾ ಬಿಡುಗಡೆಗೆ ತಯಾರಿಯಲ್ಲಿದ್ದಾರೆ. ಜ.31ಕ್ಕೆ ಸಿನಿಮಾ ಬಿಡುಗಡೆ ಹಿನ್ನೆಲೆ ಸದ್ಯದಲ್ಲೇ ಟ್ರೇಲರ್ ಸಹ ರಿಲೀಸ್ ಆಗಲಿದೆ.