ಕರ್ನಾಟಕ

karnataka

ETV Bharat / entertainment

Watch: 'ಮರ್ಯಾದೆ ಪ್ರಶ್ನೆ' ಸಿನಿಮಾಗೆ ಸುದೀಪ್​ ಸಪೋರ್ಟ್​, ಏನಂದ್ರು ಕಿಚ್ಚ?

ಮರ್ಯಾದೆ ಪ್ರಶ್ನೆ ಚಿತ್ರದ ಟ್ರೇಲರ್ ಅನ್ನು ಕಿಚ್ಚ ಸುದೀಪ್ ಅನಾವರಣಗೊಳಿಸಿದ್ದಾರೆ.

Maryade Prashne film team
'ಮರ್ಯಾದೆ ಪ್ರಶ್ನೆ' ಟ್ರೇಲರ್​ ಅನಾವರಣಗೊಳಿಸಿದ ಕಿಚ್ಚ ಸುದೀಪ್ (Film poster, ETV Bharat)

By ETV Bharat Entertainment Team

Published : Nov 13, 2024, 1:12 PM IST

'ಮರ್ಯಾದೆ ಪ್ರಶ್ನೆ'. ಇದು ತೇಜು ಬೆಳವಾಡಿ, ಸುನೀಲ್ ರಾವ್, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪೂರ್ಣಚಂದ್ರ ಮೈಸೂರು ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ. ರಿಯಲಿಸ್ಟಿಕ್ ರಿವೆಂಜ್ ಡ್ರಾಮಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಯಹಸ್ತ ಸಿಕ್ಕಿದೆ. ಟ್ರೇಲರ್​ ಅನಾವರಣಗೊಳಿಸಿದ ಅವರು, ವಿಭಿನ್ನ ಸಿನಿಮಾ ಸಾಹಸಕ್ಕೆ ಮನಸೋತರು.

ಟ್ರೇಲರ್​​ ವೀಕ್ಷಿಸಿ ಮಾತನಾಡಿರುವ ಸುದೀಪ್, ''ಟ್ರೇಲರ್ ನನಗೆ ಬಹಳ ಇಷ್ಟವಾಯಿತು. ಸಾಕಷ್ಟು ವಿಚಾರಗಳನ್ನು ತಿಳಿಸಿಯೂ ಕೂಡಾ ಕುತೂಹಲ ಹುಟ್ಟಿಸುವಂತೆ ಟ್ರೇಲರ್ ಕಟ್ ಮಾಡಿರುವುದು ನನಗೆ ಹಿಡಿಸಿತು. ಈ ಸಿನಿಮಾದಲ್ಲಿ ವಿಭಿನ್ನತೆ ಇದೆ. ಎಲ್ಲಾ ವಿಭಾಗಗಳ ಕೆಲಸ ಕೂಡಾ ಅದ್ಭುತವಾಗಿದೆ. ಕನ್ನಡ ಇಂಡಸ್ಟ್ರಿ ನಡೆಯುತ್ತಿರುವ ದಾರಿಯ ಬಗ್ಗೆ ನನಗೆ ಹೆಮ್ಮೆ ಇದೆ'' ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

'ಮರ್ಯಾದೆ ಪ್ರಶ್ನೆ' ಸಿನಿಮಾಗೆ ಅಭಿನಯ ಚಕ್ರವರ್ತಿಯ ಬೆಂಬಲ (ETV Bharat)

ಮರ್ಯಾದೆ ಪ್ರಶ್ನೆ ಚಿತ್ರಕ್ಕೆ ಯುವ ನಿರ್ದೇಶಕರ ಬೆಂಬಲ: ಹೊಸ‌ ಅಲೆಯ ಕನ್ನಡ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಕನ್ನಡದ ಯುವ ನಿರ್ದೇಶರಾದ ಶಶಾಂಕ್ ಸೋಘಲ್, ಸಿಂಧು ಶ್ರೀನಿವಾಸ್ ಮೂರ್ತಿ, ನಿತಿನ್ ಕೃಷ್ಣಮೂರ್ತಿ, ಉಮೇಶ್ ಕೆ ಕೃಪಾ, ರಾಮೇನಹಳ್ಳಿ ಜಗನ್ನಾಥ, ಶ್ರೀನಿಧಿ ಬೆಂಗಳೂರು, ಸಂದೀಪ್ ಸುಂಕದ, ಚಂದ್ರಜಿತ್ ಬೆಳ್ಳಿಯಪ್ಪ, ರಾಜ್ ಗುರು ಭೀಮಪ್ಪ, ಎಂ.ಭರತ್ ರಾಜ್, ಬಿ.ಎಸ್.​​ಪಿ.ವರ್ಮಾ, ಉತ್ಸವ್ ಗೊನ್ವರ್, ಜೈಶಂಕರ್ ಆರ್ಯರ್, ಸುನೀಲ್ ಮೈಸೂರು, ಅಕರ್ಶ್ ಹೆಚ್.ಪಿ., ವಿಕ್ಕಿ ವರುಣ್, ಸಾಗರ್ ಪುರಾಣಿಕ್, ಪ್ರತೀಕ್ ಪ್ರಜೋಶ್ ಸೇರಿದಂತೆ ಹಲವರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಮರ್ಯಾದೆ ಪ್ರಶ್ನೆ ಟ್ರೇಲರ್​ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸುಮಾರು 300ಕ್ಕೂ ಅಧಿಕ ಆರ್‌ಜೆಗಳು, ಗಾಯಕರು, ನಟ-ನಟಿಯರು, ವೈದ್ಯರು​​, ವಕೀಲರು, ಉದ್ಯಮಿಗಳು ಮೆಚ್ಚಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ

ಚಿತ್ರದ ನಿರ್ದೇಶಕ ನಾಗರಾಜ ಸೋಮಯಾಜಿ ಮಾತನಾಡಿ, "ತಮ್ಮ ಸುತ್ತಮುತ್ತಲಿನ ಕಥೆಗಳನ್ನು ವೀಕ್ಷಕರು ಬಹಳ ಇಷ್ಟಪಡುತ್ತಾರೆ. ಅಂತಹ ಕಥೆಗಳನ್ನು ಸಿನಿಮಾ ಮಾಡಿದಾಗ ನೈಜವಾಗಿ ಮೂಡಿಬಂದ್ರೆ ನೋಡುವವರಿಗೂ ಸಹ ಹತ್ತಿರ ಅನಿಸುತ್ತದೆ ಅನ್ನೋದು ನನ್ನ ಅನಿಸಿಕೆ. ನಮ್ಮ ಕನ್ನಡ ಪ್ರೇಕ್ಷಕರು ಈವರೆಗೆ ಒಳ್ಳೆಯ ಸಬ್ಜೆಕ್ಟ್‌ಗಳನ್ನು ಬಿಟ್ಟುಕೊಟ್ಟಿಲ್ಲ‌. ಹಾಗಾಗಿಯೇ ನಮ್ಮ ಕನ್ನಡ ಸಿನಿಮಾಗಳು ಪ್ರಪಂಚದಾದ್ಯಂತ ತಲುಪಲು ಸಾಧ್ಯವಾಗಿದೆ. ಹಾಗೇ, ಕಲಾವಿದರಿಗೆ ನಟನೆ ಹೇಳಿಕೊಡೋದರ ಬದಲು ನಮ್ಮ ಕಥೆಯ ಸಂದರ್ಭಕ್ಕೆ ಜೀವಿಸೋದನ್ನು ಅರ್ಥ ಮಾಡಿಸಿದ್ರೆ ಸಾಕು, ಅವರೇ ನಮನ್ನು ದಡ ಮುಟ್ಟಿಸುತ್ತಾರೆ" ಎಂದರು.

ಚಿತ್ರದ ನಿರ್ಮಾಪಕರಾದ ಸಕ್ಕತ್ ಸ್ಟುಡಿಯೋದ ಆರ್‌ಜೆ ಪ್ರದೀಪಾ ಮಾತನಾಡಿ, ಸಕ್ಕತ್ ಸ್ಟುಡಿಯೋ ಹೊಸತನದ ನೆಲಮೂಲದ, ರಿಲೇಟ್ ಆಗುವ ರಿಯಲಿಸ್ಟಿಕ್ ಕಥೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ಸುಂದರವಾಗಿ ಪ್ಯಾಕೇಜ್ ಮಾಡಿ ಪ್ರಸ್ತುತಪಡಿಸುವ ಕನಸು‌ ಹೊತ್ತಿದೆ. ನಮ್ಮ ಮೊದಲ ಹೆಜ್ಜೆಯಾದ ಮರ್ಯಾದೆ ಪ್ರಶ್ನೆ ಬಗ್ಗೆ ನಮಗೆ ಬಹಳಾನೇ ವಿಶ್ವಾಸವಿದ್ದು, ಪ್ರತೀ ವರ್ಷ ಕನಿಷ್ಠ ಇಂತಹ ಎರಡು ಪ್ರಾಮಾಣಿಕ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವ ಆಶಯವಿದೆ. ಇವು ಜನತೆಯ ಮನ ತಾಕುವುದರ ಜೊತೆಗೆ ಚರ್ಚೆಗಳನ್ನು ಹುಟ್ಟುಹಾಕಲಿವೆ" ಎಂದು ಹೇಳಿದರು.

ಇದನ್ನೂ ಓದಿ:ಗಟ್ಟಿಮೇಳ ಖ್ಯಾತಿಯ ನಿಶಾ ಮೊದಲ ಸಿನಿಮಾದ ಹಾಡಿಗೆ ಧ್ವನಿಯಾದ ಜಸ್ಕರಣ್​ ಸಿಂಗ್​

ಬಿಡುಗಡೆಗೊಂಡು ಉತ್ತಮ ಸ್ಪಂದನೆ ಸ್ವೀಕರಿಸುತ್ತಿರುವ 'ಮರ್ಯಾದೆ ಪ್ರಶ್ನೆ' ಟ್ರೇಲರ್​ ಅನ್ನು ಸಕ್ಕತ್ ಸ್ಟುಡಿಯೋ ಯೂಟ್ಯೂಬ್ ಚಾನಲ್​ನಲ್ಲಿ ವೀಕ್ಷಿಸಬಹುದು. ಹಿರಿಯ ನಟರಾದ ನಾಗಾಭರಣ, ಪ್ರಕಾಶ್ ತುಂಭಿನಾಡು, ನಂದಗೋಪಾಲ್, ನಾಗೇಂದ್ರ ಷಾ, ರೇಖಾ ಕುಂಡ್ಲಿಗಿ, ಶ್ರವಣ್, ಹರಿಹರನ್ ಮುಂತಾದವರು ಅಭಿನಯಿಸಿದ್ದಾರೆ.

ಇದನ್ನೂ ಓದಿ:ಶ್ರೀಮುರುಳಿ, ರುಕ್ಮಿಣಿ ವಸಂತ್ 'ಬಘೀರ' ಸಿನಿಮಾದ ಈವರೆಗಿನ ಕಲೆಕ್ಷನ್​​​ ಎಷ್ಟು ಗೊತ್ತಾ?

ಚಿತ್ರದಲ್ಲಿ ಐದು ಹಾಡುಗಳಿದ್ದು, ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿವೆ. ಎಲ್ಲಾ ಹಾಡುಗಳಿಗೆ ಅರ್ಜುನ್ ರಾಮು ರಾಗ ಸಂಯೋಜಿಸಿದ್ದು, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ರಚಿಸಿದ್ದಾರೆ. ಕುಟುಂಬಸಮೇತ, ಗೌಳಿ ಮತ್ತು ಚಾರ್ಲಿ ಸಿನಿಮಾಗೆ ಕೆಲಸಮಾಡಿರುವ ಸಂದೀಪ್ ವೆಲ್ಲುರಿ ಈ ಸಿನಿಮಾದ ಛಾಯಾಗ್ರಾಹಕರು. ಈಗಾಗಲೇ ಲೂಸ್ ಕನೆಕ್ಷನ್, ಹನಿಮೂನ್ ವೆಬ್ ಸೀರಿಸ್​ಗಳನ್ನು ನಿರ್ಮಿಸಿ ಸದ್ದು ಮಾಡಿದ್ದ ಆರ್‌ಜೆ ಪ್ರದೀಪಾ ಅವರ ಸಕ್ಕತ್ ಸ್ಟೂಡಿಯೋ ಚಿತ್ರ ನಿರ್ಮಿಸಿದೆ. ಪ್ರದೀಪಾ ಅವರೇ ಬರೆದ ಕಥೆಗೆ ನಾಗರಾಜ ಸೋಮಯಾಜಿ ಅವರು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವಿದೆ. ನವೆಂಬರ್ 22ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ABOUT THE AUTHOR

...view details