ETV Bharat / sports

ಆರ್ಥಿಕ ತಜ್ಞ ಮನಮೋಹನ್ ಸಿಂಗ್ ನಿಧನ: ಕಪ್ಪು ಪಟ್ಟಿ ಧರಿಸಿ ಗೌರವ ಸೂಚಿಸುತ್ತಿರುವ ಟೀಂ ಇಂಡಿಯಾ - INDIAN PLAYERS WEAR BLACK ARMBAND

ದೇಶದ ಆರ್ಥಿಕತೆಯ ಹರಿಕಾರ ಮನಮೋಹನ್​ ಸಿಂಗ್​ ನಿಧನರಾಗಿದ್ದು, ಅವರ ಸ್ಮರಣಾರ್ಥ ಭಾರತ ತಂಡ ನಾಲ್ಕನೇ ಟೆಸ್ಟ್​​ನ ಎರಡನೇ ದಿನದ ಆಟದಲ್ಲಿ ಕಪ್ಪು ಪಟ್ಟಿ ಧರಿಸಿ ಆಡುತ್ತಿದೆ.

SPO-CRI-BGT-IND-MANMOHAN
ಆರ್ಥಿಕ ತಜ್ಞ ಮನಮೋಹನ್ ಸಿಂಗ್ ನಿಧನ: ಕಪ್ಪು ಪಟ್ಟಿ ಧರಿಸಿ ಗೌರವ ಸೂಚಿಸುತ್ತಿರುವ ಟೀ ಇಂಡಿಯಾ (IANS)
author img

By PTI

Published : 15 hours ago

ಮೆಲ್ಬೋರ್ನ್, ಆಸ್ಟ್ರೇಲಿಯಾ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಗೌರವಾರ್ಥವಾಗಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭಾರತ ಕ್ರಿಕೆಟ್ ತಂಡವು ತೋಳಿಗೆ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದೆ.

2004 ರಿಂದ 2014 ರವರೆಗೆ ಎರಡು ಬಾರಿ ಮಾಜಿ ಪ್ರಧಾನಿಯಾಗಿದ್ದ ಸಿಂಗ್, ವಯೋ ಸಹಜ ಕಾಯಿಲೆಗಳಿಂದಾಗಿ ತಮ್ಮ ಮನೆಯಲ್ಲಿ ಪ್ರಜ್ಞೆ ಕಳೆದುಕೊಂಡ ನಂತರ ಗುರುವಾರ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ದಾಖಲಾಗಿದ್ದಾಗ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಸ್ಮರಣಾರ್ಥ ಗೌರವಾರ್ಥವಾಗಿ ಭಾರತ ತಂಡವು ಕೈಗೆ ಕಪ್ಪು ಪಟ್ಟಿಗಳನ್ನು ಧರಿಸಿದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಖ್ಯಾತ ಅರ್ಥಶಾಸ್ತ್ರಜ್ಞರೂ ಆಗಿರುವ ಸಿಂಗ್, 1991 ರಲ್ಲಿ ಆರ್ಥಿಕ ಸುಧಾರಣೆಗಳ ವಾಸ್ತುಶಿಲ್ಪಿ ಮತ್ತು ಮಾಸ್ಟರ್​ ಮೈಂಡ್​ ಆಗಿದ್ದು ಅದು ಭಾರತವನ್ನು ದಿವಾಳಿತನದ ಅಂಚಿನಿಂದ ಮೇಲೆ ಎತ್ತಿ ದೇಶದ ಆರ್ಥಿಕ ಅಭ್ಯುದಯಕ್ಕೆ ಕಾರಣರಾಗಿದ್ದಾರೆ. ಅವರು ತಂದ ಆರ್ಥಿಕ ಉದಾರೀಕರಣ ನೀತಿ ಭಾರತದ ಬೆಳವಣಿಗೆಯ ಯುಗಕ್ಕೆ ನಾಂದಿ ಹಾಡಿತು, ಇದು ಭಾರತದ ಆರ್ಥಿಕ ಪಥವನ್ನ ಬದಲಿಸಿ, ದೇಶ ಇಂದು ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿದೆ.

ಇದನ್ನು ಓದಿ:ಕೊಹ್ಲಿಗೆ ಶೇ.20 ರಷ್ಟು ದಂಡ ವಿಧಿಸಿದ ICC: ಫೈನ್​ ಬಳಿಕ ವಿರಾಟ್​ ಕೈ ಸೇರಲಿರುವ ಹಣ ಎಷ್ಟು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.