ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ನಟಿ ನಮ್ರತಾ ಶಿರೋಡ್ಕರ್ ದಾಂಪತ್ಯ ಜೀವನಕ್ಕೆ 19 ವರ್ಷಗಳ ಸಂಭ್ರಮ. ಕುಟುಂಬಸ್ಥರು, ಸಿನಿ ಸ್ನೇಹಿತರು ಸೇರಿದಂತೆ ಅಭಿಮಾನಿಗಳು ಈ ಬೆಸ್ಟ್ ಕಪಲ್ಗೆ ಶುಭಾಶಯ ಕೋರುತ್ತಿದ್ದಾರೆ. ಸ್ಟಾರ್ ಕಪಲ್ ಕೂಡ ಬಹಳ ಪ್ರೀತಿಯಿಂದ ಪರಸ್ಪರ ವಿಶ್ ಮಾಡಿಕೊಂಡಿದ್ದಾರೆ.
ತಮ್ಮ 19ನೇ ವಿವಾಹ ವಾರ್ಷಿಕೋತ್ಸವ ಹಿನ್ನೆಲೆ ನಟ ಮಹೇಶ್ ಬಾಬು ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪತ್ನಿ ನಮ್ರತಾ ಶಿರೋಡ್ಕರ್ ಜೊತೆಗಿನ ಬಹಳ ಹಳೇ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ ಮೊದಲ ದಿನಗಳಲ್ಲಿ ಕ್ಲಿಕ್ಕಿಸಿದಂತಿದ್ದು, ಬಹಳ ರೊಮ್ಯಾಂಟಿಕ್ ಆಗಿದೆ. ಫೋಟೋ ಹಂಚಿಕೊಂಡ ನಟ, ''ಪ್ರೀತಿ, ನಗು ಸೇರಿದಂತೆ ಜೀವನದ ಎಲ್ಲ ಸುಂದರ ಕ್ಷಣಗಳ ಪಾಲುದಾರರು. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎನ್ಎಸ್ಜಿ'' ಎಂದು ಬರೆದುಕೊಂಡಿದ್ದಾರೆ. ಫೋಸ್ಟ್ ಶೇರ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ನಮ್ರತಾ, ''ಇಂದು, ಎಂದೆಂದಿಗೂ ನಿಮ್ಮನ್ನು ಪ್ರೀತಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.
ನಟಿ ನಮ್ರತಾ ಶಿರೋಡ್ಕರ್ ಕೂಡ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ರೊಮ್ಯಾಂಟಿಕ್ ಫೊಟೋ ಶೇರ್ ಮಾಡಿ, ''ನಿಮ್ಮೊಂದಿಗೆ ಪ್ರೀತಿ, ನಗು ಮತ್ತು ಸಂತೋಷದ ಮತ್ತೊಂದು ವರ್ಷವನ್ನು ಆಚರಿಸುತ್ತಿದ್ದೇನೆ. ಮೈ ಫಾರೆವರ್ ಆ್ಯಂಡ್ ಆಲ್ವೇಸ್'' ಎಂದು ಬರೆದುಕೊಂಡಿದ್ದಾರೆ.