ಖ್ಯಾತ ಕಲಾವಿದರಾದ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ಅಭಿನಯದ ಛಾವಾ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ನಿರೀಕ್ಷೆಗಳನ್ನು ಮೀರಿ ತನ್ನ ಬಾಕ್ಸ್ ಆಫೀಸ್ ಪ್ರಯಾಣವನ್ನು ಪ್ರಾರಂಭಿಸಿದ ಚಿತ್ರದ ವಾರದ ಗಳಿಕೆ ಉತ್ತಮವಾಗಿದೆ. ಮೊದಲ ದಿನವೇ ಉತ್ತಮ ಕಲೆಕ್ಷನ್ ಮಾಡಿದ ಸಿನಿಮಾ ನಂತರದ ವಾರದ ದಿನಗಳಲ್ಲಿಯೂ ಉತ್ತಮ ಅಂಕಿ - ಅಂಶಗಳನ್ನು ಕಾಯ್ದುಕೊಂಡಿತು. ಬಾಕ್ಸ್ ಆಫೀಸ್‌ನಲ್ಲಿ 7 ದಿನಗಳ ಉತ್ತಮ ಪ್ರದರ್ಶನದಿಂದ ಛಾವಾ 200 ಕೋಟಿ ರೂಪಾಯಿಯ ಕ್ಲಬ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಈ ಸಾಧನೆಗೈದ ವಿಕ್ಕಿ ಕೌಶಲ್ ಅವರ ಮೊದಲ ಚಿತ್ರವೂ ಹೌದು. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಛಾವಾ ಚಿತ್ರಕ್ಕೆ ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ಬಂಡವಾಳ ಹೂಡಿದೆ.
'ಛಾವಾ' ಬಾಕ್ಸ್ ಆಫೀಸ್ ಕಲೆಕ್ಷನ್ (7ನೇ ದಿನ): ಫೆಬ್ರವರಿ 14ರಂದು ತೆರೆಗಪ್ಪಳಿಸಿದ ಛಾವಾ ತನ್ನ 7ನೇ ದಿನದಂದು, ಭಾರತದಲ್ಲಿ 22 ಕೋಟಿ (Net Collection) ರೂಪಾಯಿ ಕಲೆಕ್ಷನ್ ಮಾಡಿದೆ. ಬುಧವಾರದ ಗಳಿಕೆಯಲ್ಲಿ ಶೇ.26.73ರಷ್ಟು ಏರಿಕೆಯ ಹೊರತಾಗಿಯೂ, ಗುರುವಾರ ಶೇ.31.25ರಷ್ಟು ಕುಸಿತ ಕಂಡಿದೆ. ಅದಾಗ್ಯೂ, ಈ ಚಿತ್ರ ಭಾರತದಲ್ಲಿ 219.75 ಕೋಟಿ ರೂ. ಗಳಿಸಿದೆ. ಚಿತ್ರ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಪುಣೆಯಲ್ಲಿ ಮುಂಚೂಣಿಯಲ್ಲಿದೆ. ಮುಂಬೈ, ಹೈದರಾಬಾದ್ ಮತ್ತು ಚೆನ್ನೈನಲ್ಲಿಯೂ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಆಕರ್ಷಿಸುತ್ತಿದೆ.
ಛಾವಾ ಚಿತ್ರದ ಪ್ರತಿದಿನದ ಕಲೆಕ್ಷನ್ ಹೀಗಿದೆ:
ದಿನ | ಇಂಡಿಯಾ ನೆಟ್ ಕಲೆಕ್ಷನ್ |
ಮೊದಲ ದಿನ | 31 ಕೋಟಿ ರೂಪಾಯಿ. |
ಎರಡನೇ ದಿನ | 37 ಕೋಟಿ ರೂಪಾಯಿ. |
ಮೂರನೇ ದಿನ | 48.5 ಕೋಟಿ ರೂಪಾಯಿ. |
ನಾಲ್ಕನೇ ದಿನ | 24 ಕೋಟಿ ರೂಪಾಯಿ. |
ಐದನೇ ದಿನ | 25.25 ಕೋಟಿ ರೂಪಾಯಿ. |
ಆರನೇ ದಿನ | 32 ಕೋಟಿ ರೂಪಾಯಿ. |
ಏಳನೇ ದಿನ | 22 ಕೋಟಿ ರೂಪಾಯಿ (ಆರಂಭಿಕ ಅಂದಾಜು) |
ಒಟ್ಟು | 219.75ಕೋಟಿ ರೂಪಾಯಿ. |
(ಬಾಕ್ಸ್ ಆಫೀಸ್ ಡಾಟಾ ಮೂಲ: ಸ್ಯಾಕ್ನಿಲ್ಕ್).